ಬೆಳಗಾವಿ- ಬೆಳಗಾವಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಖೇಶ್ ಸಿಂಗ್ ಅವರು ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬರ ಅದ್ಯಯನ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಜಿಲ್ಲಾಧಿಕಾರಿಗಳ ಚೇಂಬರ್ ನಲ್ಲಿ ಬೆಳಗಾವಿಯ ಅಭಿವೃದ್ಧಿ ಕುರಿತು ಮಹತ್ವದ ಚರ್ಚೆ ನಡೆಸಿದ್ದಾರೆ
ಈ ಮಹತ್ವದ ಚರ್ಚೆಯಲ್ಲಿ ಜಿಲ್ಲಾಧಿಕಾರಿ ಎನ್ ಜಯರಾಂ ಸ್ಮಾರ್ಟ್ ಸಿಟಿ ಯೋಜನೆಯ CEO ಮೋಹಾಲಿನ್ ಪಾಲಿಕೆ ಆಯುಕ್ತ ಶಶಿಧರ ಕುರೇರ ಶಾಸಕ ಫಿರೋಜ್ ಸೇಠ ಪಾಲಿಕೆಯ ಮುಖ್ಯ ಅಭಿಯಂತರ ಆರ್ ಎಸ್ ನಾಯಕ ಮೊದಲಾದವರು ಭಾಗವಹಿಸಿದ್ದರು
ಶಾಸಕ ಫಿರೋಜ್ ಸೇಠ ಅವರು ಬೆಳಗಾವಿ ನಗರಕ್ಕೆ ಹಿಡಕಲ್ ಜಲಾಶಯದಿಂದ ಹೆಚ್ಚುವರಿ ನೀರು ಪೂರೈಸಲು ಬಸವನಕೊಳ್ಳ ದಲ್ಲಿ ಜಲ ಶುದ್ಧಿಕರಣ ಘಟಕ ನಿರ್ಮಿಸಲಾಗಿದೆ ಈ ಘಟಕಕ್ಕೆ ಹಿಡಕಲ್ ಜಲಾಶಯದಿಂದ ಪ್ರತಿ ದಿನ 12 MGD ನೀರು ಪಂಪ್ ಮಾಡಲಾಗುತ್ತಿದೆ ಇದರ ಸಾಮರ್ಥ್ಯ ವನ್ನು 12 MGD ಯಿಂದ 18 MGD ಗೆ ಹೆಚ್ಚಿಸುವ ಯೋಜನೆಗೆ ಮುಖ್ಯಮಂತ್ರಿಗಳು ಮಂಜೂರಾತಿ ನೀಡಿದ್ದು ಈ ಯೋಜನೆಯ 17 ಕೋಟಿ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸುವಂತೆ ಶಾಸಕ ಸೇಠ ಉಸ್ತುವಾರಿ ಕಾರ್ಯದರ್ಶಿ ರಾಖೇಶ್ ಸಿಂಗ್ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ
ಬೆಳಗಾವಿ ನಗರದಲ್ಲಿ ನಿರಂತರ ಕುಡಿಯುವ ನೀರಿನ ಯೋಜನೆ ಮಂಜೂರಾಗಿದ್ದು ಅದಕ್ಕೂ ಮೊದಲು ನಗರದಲ್ಲಿ 7 over head tank ನಿರ್ಮಿಸಲು ಬೆಳಗಾವಿ ಮಹಾನಗರ ಪಾಲಿಕೆ 37 ಕೋಟಿ ಅನುದಾನದ ವ್ಯೆವಸ್ಥೆ ಮಾಡಿದ್ದು ಇದಕ್ಕೆ ತ್ವರಿತವಾಗಿ ಸರ್ಕಾರದಿಂದ ಮಂಜೂರಾತಿ ನೀಡುವಂತೆ ಕ್ರಮ ಕೈಗೊಳ್ಳುವಂತೆ ಶಾಸಕ ಸೇಠ ರಾಖೇಶ್ ಸಿಂಗ್ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ
ಈ ಚರ್ಚೆಯ ಬಳಿಕ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಖೇಶ್ ಸಿಂಗ್ ಅವರು ಸ್ಮಾರ್ಟ ಸಿಟಿ ಯೋಜನೆಯ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಸ್ಮಾರ್ಟ ಸಿಟಿ ಯೋಜನೆಯ CEO ಮೋಹಾಲಿನ್ ಅವರನ್ನು ತರಾಟೆಗೆ ತೆಗೆದುಕೊಂಡು ಸ್ಕಾಟ್ ಸಿಟಿ ಯೋಜನೆಯ ಕಾಮಗಾರಿಗಳನ್ನು ಕೂಡಲೇ ಆರಂಭಿಸುವಂತೆ ರಾಖೇಶ್ ಸಿಂಗ್ ಕಟ್ಡುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ