ಅನಧಿಕೃತ ಬೇಸಮೆಂಟ್ ತೆರವಿಗೆ ಹೋದ ಪಾಲಿಕೆ ಆಧಿಕಾರಿಗಳಿಗೆ ಶಾಸಕ ಅವಾಜ್ ಹಾಕಿದ ಘಟನೆ ನಡೆದಿದೆ
ಬೆಳಗಾವಿ ನಗರದ ಖಡೇಬಜಾರ್ ನಲ್ಲಿ ಘಟನೆ ನಡೆದಿದ್ದು
ಬೆಳಗಾವಿ ಉತ್ತರ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ಪಿರೋಜ್ ಶೇಠ್ ಪಾಲಿಕೆ ಆಯುಕ್ತರಿಗೆ ಮತ್ತು ಅಧಿಕಾರಿಗಳಿಗೆ ಬಹಿರಂಗವಾಗಿ ಧಮ್ಕೀ ಹಾಕಿದ್ದಾರೆ
ಅನಧಿಕೃತ ಬೇಸಮೆಂಟ್ ಗೆ ಸಾರ್ವಜನಿಕವಾಗಿ ಶಾಸಕರ ಬೆಂಬಲ ವ್ಯೆಕ್ತಪಡಿಸಿ ಅಧಿಕಾರಿಗಳನ್ನು ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡ ಶಾಸಕ ಮಹಾಶಯರು ಅನಧಿಕೃತ ಬೇಸ್ ಮೇಟ್ ಮಾಲೀಕರ ಪರವಾಗಿ ವಕಾಲತ್ತು ವಹಿಸಿದ್ದಾರೆ
ಅನಧಿಕೃತ ಬೇಸಮೆಂಟ್ ತೆರವು ಮಾಡಲು ಅಧಿಕಾರ ಕೊಟ್ಟವರು ಯಾರು..?
ಜೆಸಿಬಿಯಿಂದ ಒಡೆದು ಹಾಕದೇ ಸುಮ್ಮನೇ ಬೀಗ ಹಾಕಿ ಹೋಗಿ..
ನಿಮಗೆ ಹೋಗುವ ಟೈಂ ಬಂದಿದೆ.ಆಟ ಆಡ್ತೀರಾ..? ಅಂತಾ ಶಾಸಕ ಫಿರೋಜ್ ಸೇಠ ಅವಾಜ್ ಹಾಕಿ ಬೆಸ್ ಮೇಟ್ ತೆರವಿಗೆ ಶಾಸಕರು ಬಹಿರಂಗವಾಗಿ ಅಡ್ಡಿ ಮಾಡಿದ್ದಾರೆ
ಯಾರು ಬಾಗಿಲು ತೆಗೆಯದಂತೆ, ಸಹಕಾರ ನೀಡಂತೆ ಅತಿಕ್ರಮನಕಾರರಿಗೆ ಶಾಸಕರ ಸೂಚನೆ ಕೂಡಾ ನೀಡಿದ್ದಾರೆ
ನಿಮಗೆ ಅತಿಕ್ರಮಣ ಒಡೆಯುವ ಅಧಿಕಾರವಿಲ್ಲ.ಕೇವಲ ಸೀಲ್ ಹಾಕಿ.
ನನ್ನ ಗಮನಕ್ಕೂ ತಂದಿಲ್ಲ.ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರದೇ ಏಕೆ ಒಡೆಯುತ್ತೀದ್ದೀರಿ..
ಅತಿಕ್ರಮಣ ಬೇಸ್ ಮೆಂಟ್ ತೆರವು ಅವಶ್ಯಕತೆ ಇಲ್ಲ.
ಪಾಲಿಕೆ ಆಯುಕ್ತ ಶಶಿಧರ ಕುರೇರ ಸೇರಿ ಅಧಿಕಾರಿಗಳ ಎದುರು ಶಾಸಕರು ಪುಂಡಾಟಿಕೆ ಪ್ರದರ್ಶನ ಮಾಡಿದ್ದಾರೆ
ಪಾಲಿಕೆ ಆಯುಕ್ತ ಶಶಿಧರ ಕುರೇರ್ ಶಾಸಕರ ಅವಾಜ್ ಗೆ ಬೆದರದೇ ಬೆಸ್ ಮೇಟ್ ತೆರವು ಕಾರ್ಯಾಚರಣೆ ಮುಂದುವರೆಸಿ ಖಡೇಬಝಾರ್ ನಲ್ಲಿರುವ ಸುಮಾರು 150 ಕ್ಕೂ ಹೆಚ್ಚು ಬೇಸ್ ಮೇಟ್ ಗಳನ್ನು ದ್ವಂಸ ಮಾಡುವದರಲ್ಲಿ ಆಯುಕ್ತರು ಯಶಸ್ವಿಯಾಗಿದ್ದಾರೆ