,ಬೆಳಗಾವಿ ಭೂತಗ ಪಾತಕಿ ರಶೀದ್ ಮಲಬಾರಿ ಸಹಚರರ ಬಂಧನ ಪ್ರಕರಣಕ್ಕೆ ಸಮಂಧಿಸಿದಂತೆ ಬೆಳಗಾವಿ ಪೊಲೀಸರಿಂದ ಮತ್ತಿಬ್ಬರು ಶಾರ್ಪ್ ಶೂಟರ್ ಗಳ ಬಂಧನ ಮಾಡಲಾಗಿದೆ
ಮುಂಬೈ ಮೂಲದ ಬಿಲಾಲ್ ಖಾನ್ ಹಾಗೂ ಬೆಂಗಳೂರಿನ ಸಯದ್ ಅಲೀ ಎಂಬ ಶಾರ್ಪ್ ಶೂಟರ್ ಗಳನ್ನು ಬೆಳಗಾವಿ ಪೋಲೀಸರು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ
ಛೋಟಾ ಶಕೀಲ್ ಮತ್ತು ಮಲಬಾರಿ ಗ್ಯಾಂಗಿನ ಶಾರ್ಪ್ ಶೂಟರ್ ಬಿಲಾಲ್ ಖಾನ್ ಮೇಲೆ ಸಾಕಷ್ಟು ಕೊಲೆ ಪ್ರಕರಣಗಳಿವೆ ಇವೆ ಬಿಲಾಲ್ ಖಾನ್ ಮುಂಬೈ ಪೊಲೀಸರ ಲಿಸ್ಟನಲ್ಲಿ ಮೊಸ್ಟವಾಂಟೆಂಡ್ ಆರೋಪಿ ಎನ್ನಲಾಗಿದೆ ಇಬ್ಬರು ಶಾರ್ಪ್ ಶೂಟರ್ಗಳನ್ನ ತೀವ್ರ ವಿಚಾರಣೆ ನಡೆಸುತ್ತಿರುವ ಬೆಳಗಾವಿ ಪೊಲೀಸ್ರು ಬೆಳಗಾವಿಗೆ ಭೂಗತ ಲೋಕದ ನಂಟು ಎಷ್ಟರ ಮಟ್ಟಿಗೆ ಇದೆ ಎನ್ನುವ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ
ಇಂದು ಇಬ್ಬರು ಆರೋಪಿಗಳನ್ನ ಪೊಲೀಸ್ರು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ಮಲಬಾರಿ ಸಹಚರರನ್ನ ಬಂಧಿಸಲು ಬೆಳಗಾವಿ ಪೊಲೀಸ್ ಆಯುಕ್ತ ಕೃಷ್ಣ ಭಟ್ ಮೂರು ವಿಶೇಷ ತಂಡ ರಚಿಸಿದ್ದನ್ನು ನಾವಿಲ್ಲಿ ಸ್ಮರಿಸಬಹುದು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ