Breaking News

ಆನ್ ಲೈನ್ ಲವ್ ಮಾಡಿದ ನಯನಾ ಪ್ರಾಣ ಅಂತ್ಯ….!

ನಯನಾ… ಕೊಲೆಯೋ ಆತ್ಮಹತ್ಯೆಯೋ!!

ಬೆಳಗಾವಿ-ಆಕೆ ಮೈಸೂರು ಹುಡುಗಿ ಈತ ಬೆಳಗಾವಿ ಹುಡುಗ ಎತ್ತಿಂದೆತ್ತ ಸಂಬಂಧ‌ ನೋಡಿ. ಇನ್ಸಾಟ್ ಗ್ರಾಮ್ ನಲ್ಲಿ ಪರಸ್ಪರ ಪರಿಚಯ ಆಗುತ್ತೆ ಪರಿಚಯ ಕಡೆಗೆ ಪ್ರತಿಯೂ ಆಗಿ ಬದಲಾಗುತ್ತೆ ಹೆತ್ತವರ ವಿರೋಧದ ನಡುವೆ ಮೈಸೂರು ಬಿಟ್ಟು ಬಂದವಳು ಹೊಟ್ಟೆಯಲಿದ್ದ ಮಗು ಸಮೇತ ಸಧ್ಯ ಹೆಣವಾಗಿದ್ದಾಳೆ.ಮದುವೆಯಾಗಿ ಕೇವಲ ಒಂದು ವರ್ಷ ಮೂರು ತಿಂಗಳು ಬದುಕಿನ ಸುಂದರ ಕ್ಷಣಗಳ ಕನಸು ಕಂಡಿದ್ದ ಗರ್ಭಿಣಿ ತೀರಿ ಹೋಗಿದ್ದಾಳೆ.ಈ ಘಟನೆ ನಡೆದಿದ್ದು ಬೆಳಗಾವಿಯಲ್ಲಿ.

ಮೈಸುರು ಹುಡುಗಿ ಬೆಳಗಾವಿ ಹುಡುಗನಿಗೆ ಇನ್ಸಟಗ್ರಾಮ್ ನಲ್ಲಿ ಪರಿಚಯ ಆಗಿ ಇಬ್ಬರ ನಡುವೆ ಲವ್ ಆಗಿ,ಮದುವೆಯೂ ಆಗಿತ್ತು, ಆನ್ ಲೈನ್ ಪ್ರೀತಿ ಕೊನೆಗೂ ಅಂತ್ಯವಾಗಿದ್ದು ದುರ್ದೈವದ ಸಂಗತಿಯಾಗಿದೆ.

ನೇಣು ಹಾಕಿದ ಸ್ಥಿತಿಯಲ್ಲಿ ಗರ್ಭಿಣಿ ಶವ ಪತ್ತೆಯಾಹಲಗಿದ್ದು ಗಂಡನ ಕುಟುಂಬಸ್ಥರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ದಾವಿಸಿದ ಪೋಲೀಸರು ತನಿಖೆ ಶುರು ಮಾಡಿದ್ದಾರೆ.

ಘಟನೆಯ ವಿವರ….

ಈ ಘಟನೆ ನಡೆದಿದ್ದು ‌ಬೆಳಗಾವಿ ನಗರಕ್ಕೆ ಅಂಟಿಕೊಂಡಿರೋ ಮಚ್ಛೆ ಗ್ರಾಮದಲ್ಲಿ. ಈ ಫೊಟೊದಲ್ಲಿ ಕಾಣ್ತಿರೋ ಈ ಯುವತಿಯ ಹೆಸರು ಮಂಜುಳಾ ಅಲಿಯಾಸ್ ನಯನಾ ಅಂತ ಮೂಲತಃ ಮೈಸೂರಿನವಳು. ಸಧ್ಯ ಈಕೆ ಹೊಟ್ಟೆಯಲ್ಲಿ ಮಗುವಿಟ್ಟುಕೊಂಡೆ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಮಂಜುಳಾ ಕುಟುಂಬಸ್ಥರ ವಿರೋಧದ ನಡುವೆಯೂ ಬೆಳಗಾವಿಯ ಬೋರೇಷ್ ಎಂಬಾತನೊಂದಿಗೆ ಮದುವೆಯಾಗಿದ್ದಳು. ಮೈಸೂರಿನಿಂದ ಬೆಳಗಾವಿಗೆ ಓಡಿ ಬಂದಿದ್ದಳು ಆಗ ಮಂಜುಳಾ ಕುಟುಂಬಸ್ಥರು ಮೈಸೂರು ಪೊಲೀಸರಿಗೆ ಕಿಡ್ನಾಪ್ ದೂರು ನೀಡಿದ್ರು ಬಳಿಕ ಮೈಸೂರು ಪೊಲೀಸರೇ ಬೆಳಗಾವಿಗೆ ಬಂದು ಮಂಜುಳಾಳನ್ನ ಮೈಸೂರಿಗೆ ಕರೆತಂದಿದ್ರು ಇನ್ನೇನು ಅಲ್ಲಿ ಬೇರೆ ಹುಡುಗನ ಜೊತೆಗೆ ಮದುವೆ ನಿಶ್ಚಯ ಮಾಡಬೇಕು ಎನ್ನುವಷ್ಟರಲ್ಲಿ ಮತ್ತೆ ಮಂಜುಳಾ ನನಗೆ ಬೋರೇಶನೆ ಬೇಕು ಎಂದು ಹಿಂದೆ ಓಡಿ ಬಂದು ಬೋರೆಶನ ಕೈ ಹಿಡಿದಿದ್ದಳು. ನಂತರ ಈ ವಿಚಾರವನ್ನು ಹೆತ್ತವರಿಗೆ ತಿಳಿಸಿದ್ದಳು. ಮಗಳು ಬುದ್ಧಿ ಹೇಳಿದರೆ ಅದನ್ನು ಕೇಳದೆ ಹೋಗಿ ಮದುವೆಯಾಗಿದ್ದಾಳೆ ಇನ್ನೇನ್ ಮಾಡೋಕ್ ಆಗುತ್ತೆ ಅವರಷ್ಟಕ್ಕೆ ಅವರು ಚನ್ನಾಗಿರಲಿ ಅಂತ ಹೆತ್ತವರೂ ಸಹ ಸುಮ್ಮನಾಗಿದ್ದರು. ಆದರೆ ದಿನ ಕಳೆದಂತೆ ಮಂಜುಳಾಗೆ ಬೋರೇಶನ ಅಪ್ಪ ಅಮ್ಮನ ಕಾಟ ಜೋರಾಗಿತ್ತು ಎನ್ನುವ ಆರೋಪ‌ ಕೇಳಿ ಬಂದಿದೆ.‌

ಗರ್ಭಿಣಿಯಾಗಿದ್ದ ಮಂಜುಳಾಗೆ ಮಗುವನ್ನ ತೆಗೆಸಿಬಿಡು ಅಂತ ಬೋರೇಶ ಅಪ್ಪ ಅಮ್ಮ ಅಂದರೆ ಮಂಜುಳಾ ಅತ್ತೆ ಮಾವ ಪೀಡಿಸ್ತಿದ್ರಂತೆ ಇದನ್ನ ಸ್ವತಹ ಮಂಜುಳಾ ತನ್ನ ಸಂಬಂಧಿಗೆ ವಾಟ್ಸಪ್ ವಾಯ್ಸ್ ಮಸೇಜ್ ನಲ್ಲಿ ಹಂಚಿಕೊಂಡಿದ್ಳಂತೆ.. ಬೋರೇಶ್ ಹಾಗೂ ಮಂಜುಳಾಳದ್ದು ಇನ್ಸಟಗ್ರಾಮ್ ಪರಿಚಯ. ಪರಿಚಯ ಪ್ರತಿಯಾಗಿ ಬದಲಾಗಿ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿ ಗಾಢವಾದಾಗ ಮಂಜುಳಾ ತನ್ನ‌ ಹೆತ್ತವರ ವಿರೋಧದ ನಡುವೆಯೂ ಬೆಳಗಾವಿಗೆ ಬಂದು ಬೋರೇಶನನ್ನ ಮದುವೆಯಾಗಿದ್ದಳು. ಮದುವೆಯಾಗ್ತಿದ್ದಂತೆ ಇವರಿಬ್ಬರ ಸುಖ ಸಂಸಾರಕ್ಕೆ ಸಾಕ್ಷಿ ಎಂಬತೆ ಮಂಜುಳಾ ಗರ್ಭಣಿಯಾಗಿದ್ದಳು.

ಮಂಜುಳಾ ಕುಟುಂಬಸ್ಥರು ಆರೋಪ ಮಾಡ್ತಿರೋ ಪ್ರಕಾರ ಗಂಡ ಬೋರೇಶ ಕೆಲಸಕ್ಕೆ ಹೋಗದೆ ಪೋಲಿ ಅಲೆಯುತ್ತಿದ್ದನಂತೆ ತಾಯಿ ಮನೆಯಲ್ಲಿ ರಾಣಿಯಂತೆ ಬದುಕಿದ್ದ ಮಂಜುಳಾ ಬೋರೇಶ ಮನೆಗೆ ಬಂದ ಮೇಲೆ ಇದೇ ಶೆಡ್ ನಲ್ಲಿ ವಾಸವಿರಬೇಕಾದ ಅನಿವಾರ್ಯತೆ ಎದುರಾಗಿತ್ತು. ಅಲ್ಲದೆ ಒಂದು ವೇಳೆ ಸೊಸೆ ಗರ್ಭಿಣಿಯಾದರೆ ಆಕೆ ಹೊರಗಡೆ ಕೆಲಸಕ್ಕೆ ಹೋಗೊದು ನಿಲ್ಲಿಸಬೇಕಾಗುತ್ತದೆ ಇದರಿಂದ‌ ನಮಗೆ ಬರುವ ಆದಾಯ ತಪ್ಪಿ ಹೋಗುತ್ತೆ ಎನ್ನುವುದು ಬೋರೆಶ ತಂದೆ ತಾಯಿ ಅಂದರೆ ಮಂಜುಳಾಳ ಅತ್ತೆ ಮಾವನದ್ದಾಗಿತ್ತಂತೆ. ಇನ್ನು ಘಟನೆ ನಡೆದ ದಿನ ರಾತ್ರಿಯಿಂದಲೇ ಮನೆಯವರು ಹಾಗೂ ಗಂಡ ಬೋರೇಶ ಕಾಣೆಯಾಗಿರೋದು ಹಲವು ಅನುಮಾನಗಳನ್ನು ಹುಟ್ಟಿಸಿದೆ. ಒಂದು ಕಡೆ ಮಂಜುಳಾ ಪೋಷಕರು ಗಂಡ ಹಾಗೂ ಆತನ ಕುಟುಂಬಸ್ಥರು ಮಗಳನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಆರೋಪ‌ ಮಾಡ್ತಿದ್ರೆ ಬೋರೇಶ ಹಾಗೂ ಕುಟುಂಬಸ್ಥರು ಕಾಣೆಯಾಗಿರೋದು ಪೋಷಕರ ಆರೋಪಕ್ಕೆ ಪುಷ್ಠಿ ನೀಡ್ತಿದೆ.‌

ಇನ್ನು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಬೆಳಗಾವಿ ಡಿಸಿಪಿ ರೋಹನ್‌ ಜಗದೀಶ ಮದುವೆಯಾಗಿ ಏಳು ವರ್ಷಗಳು ಆಗದ ಹಿನ್ನೆಲೆ ಆ ಪ್ರಕಾರವೇ ಪ್ರಕರಣ ದಾಖಲು ಮಾಡಿಕೊಳ್ತಿವಿ ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆ ಕೊಡಿಸುತ್ತೆವೆ ಇದಕ್ಕಾಗಿ ಈಗಾಗಲೇ ಎರಡು ‌ತಂಡಗಳನ್ನು ರಚನೆ ಮಾಡಿದ್ದೆವೆ ಎಂದು‌ ಹೇಳಿದ್ದಾರೆ…

ಇನ್ಸಟಾಗ್ರಾಮ್ ನಲ್ಲಾದ ಪರಿಚಯ ‌ಪ್ರೀತಿಯಾಗಿ ಮದುವೆಯಾಗಿ ಸುಖವಾಗಿ ಬಾಳಿ ಬದುಕಬೇಕಿದ್ದ ಮಗಳು ಈಗ ಮಸಣದ ಹಾದಿ ಹಿಡಿದಿದ್ದು ನಿಜಕ್ಕೂ ದುರ್ದೈವದ ಸಂಗತಿ.ಮಂಜುಳಾ ತಾನಾಗಿಯೇ ನೇಣಿಗೆ ಶರಣಾದಳೋ ಅಥವಾ ಗಂಡ ಹಾಗೂ ಕುಟುಂಬಸ್ಥರೇ ಕೊಲೆ ಮಾಡಿದ್ರೋ ಎನ್ನುವುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ..

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *