ಅಥಣಿ–ರಾಜಕೀಯ ಬೆಳವಣಿಗೆ ಕಂಡು ಮಂತ್ರಿ ಸ್ಥಾನದಿಂದ ಹಿಂದೆ ಸರಿದ್ರಾ ಲಕ್ಷ್ಮಣ ಸವದಿ..? ಎನ್ನುವ ಪ್ರಶ್ನೆ ಎದುರಾಗಿದೆ ಅವರು ನಿನ್ನೆ ಮಾತನಾಡಿದ ಧಾಟಿ ನೋಡಿದ್ರೆ ಲಕ್ಷ್ಮಣ ಸವದಿ ಅವರು ಅಸಮಾಧಾನ ಆಗಿದ್ದಾರೆ ಎಂದು ಗೊತ್ತಾಗುತ್ತದೆ.
ನನಗೆ ಮಂತ್ರಿ ಬೇಡಾ ಮಂತ್ರಿಗಿರಿಗಾಗಿ ನಾನು ಯಾರ ಕಾಲು ಬೀಳಲ್ಲ.ನನ್ನ ಕ್ಷೇತ್ರದ ಜನರ ಆಶಿರ್ವಾದ ಮಾತ್ರ ಸಾಕು ನಾನು ಯಾವ ಹುದ್ದೇಗು ಆಸೆ ಪಡಲ್ಲಾ ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಸವದಿ ಮಾರಾಡಿದ್ದು,ಅಮೃತ 2.0 ಯೋಜನೆ ಅಡಿ ನೀರು ಸರಬರಾಜು ಯೋಜನೆ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ,ಭೂಮಿ ಪೂಜೆ ಬಳಿಕ ಅಥಣಿ ಶಾಸಕ ಲಕ್ಷ್ಮಣ ಸವದಿ ಮಾಡಿದ ಭಾಷಣ ಇದು.
ಮಂತ್ರಿ ಸ್ಥಾನಕ್ಕಾಗಿ ಯಾರ ಕಾಲು ಬೀಳುವ ವ್ಯಕ್ತಿ ನಾನಲ್ಲ.ಮಂತ್ರಿ ಸ್ಥಾನಕ್ಕಾಗಿ ಜೊಲ್ಲು ಸುರಿಸುವ ವ್ಯಕ್ತಿಯೂ ನಾನಲ್ಲ.ನನಗೆ ಅಧಿಕಾರ ಮುಖ್ಯವಲ್ಲ ಜನಸೇವೆ ಮುಖ್ಯ.ಸಿದ್ದೇಶ್ವರ ಸ್ವಾಮೀಜಿ ಅವರ ಭಾಷಣ ಕೇಳಿ ಪ್ರೇರಿತವಾದವನು ನಾನು.ಮಂತ್ರಿ ಸ್ಥಾನಕ್ಕೆ ಯಾರ ಕಾಲು ಬಿಳ್ಳಲ್ಲ ಎಂದ ಸವದಿ ಹೇಳಿದ್ದಾರೆ.