ಬೆಳಗಾವಿ- ದೇಶದಲ್ಲಿ ಮೊದಲ ಬಾರಿಗೆ ಬ್ರಿಟಿಷರ ವಿರುದ್ಧ ಸಮರ ಸಾರಿ,ಬ್ರಿಟಿಷ್ ಕಲೆಕ್ಟರ್ ಥ್ಯಾಕರೆಯ ರುಂಡ ಚೆಂಡಾಡಿದ ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಇತಿಹಾಸದ ಗತವೈಭವ ಬಿಂಬಿಸುವ ಕಿತ್ತೂರು ಉತ್ಸವಕ್ಕೆ ಈ ವರ್ಷ 200 ವರ್ಷಗಳಾಗಿದ್ದು ಈಬಾರಿಯ ಕಿತ್ತೂರು ಉತ್ಸವವನ್ನು ಅದ್ಧೂರಿಯಾಗಿ ಆಚರಿಸುವಂತೆ ಕೋರಲು ಸಿಎಂ ಬಳಿ ಬೆಳಗಾವಿ ಜಿಲ್ಲೆಯ ಶಾಸಕರ ನಿಯೋಗ ಕೊಂಡೊಯ್ಯಲು ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ ಒತ್ತಾಯಿಸಿದ್ರು.
ನಿನ್ನೆ ಸುವರ್ಣ ವಿಧಾನಸೌಧದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು ಕಿತ್ತೂರು ಉತ್ಸವಕ್ಕೆ 200 ವರ್ಷ ತುಂಬಿದ ಕಾರಣ ಇದು ವಿಶೇಷ ಸಂಧರ್ಭವಾಗಿದೆ ಸಿಎಂ ಬಳಿ ಶಾಸಕರ ನಿಯೋಗ ಕೊಂಡಯ್ಯುವಂತೆ ಸಭೆಯಲ್ಲಿ ಮನವಿ ಮಾಡಿದರು.ಆದಷ್ಟು ಬೇಗನೆ ಸಿಎಂ ಬಳಿ ಹೋಗೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಎಂಎಲ್ಸಿ ನಾಗರಾಜ್ ಯಾದವ್ ಮಾತನಾಡಿ, ಮಹಾತ್ಮ ಗಾಂಧಿಯವರು ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆಸಿ ಈ ವರ್ಷ ನೂರು ವರ್ಷಗಳಾಗುತ್ತಿವೆ ಈ ಬಾರಿ ಶತಮಾನೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.