ಬೆಳಗಾವಿ: ನಗರದ ಶಹಾಪೂರದ ಮಹಾತ್ಮ ಫುಲೆ ಮಾರ್ಗದ ದೇವಸ್ಥಾನ ಸಮೀಪ ಬೆಳೆದಿದ್ದ ಗಿಡಗಂಟಿಗಳಲ್ಲಿ ಆಗತಾನೆ ಹುಟ್ಟಿದ ನವಜಾತ ಗಂಡು ಶಿಶುವನ್ನು ಎಸೆದ ಘಟನೆ ಗುರುವಾರ ಬೆಳಗಿನ ಜಾವ ಬೆಳಕಿಗೆ ಬಂದಿದೆ.
ಬಹುತೇಕ ಈ ಶಿಶುವನ್ನು ಬುಧವಾರ ತಡರಾತ್ರಿಯಲ್ಲಿ ಬಿಟ್ಟು ಹೋಗಲಾಗಿತ್ತು. ಬೆಳಗಾಗುತ್ತಿದ್ದಂತೆ ಹೋಗ ಬರುವ ಜನ ಮಗುವಿನ ರೋದನ ಕೇಳಿ ಗಮನಿಸಿದಾಗ, ನವಜಾತ ಶಿಶು ಕಂಡುಬಂತು. ಸ್ಥಳೀಯ ಕೆಲವರು ಸಮಾಜ ಸೇವಕ ವಿಜಯ ಮೋರೆ ಅವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದಾಗ ಅವರು ತಮ್ಮ ಮಿತ್ರಬಳಗದೊಂದಿಗೆ ಸ್ಥಳಕ್ಕಾಗಮಿಸಿ ಶಿಶುವನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಮಗುವಿನ ಹದಗೆಟ್ಟ ಆರೋಗ್ಯ ಸ್ಥಿತಿ ಅರಿತು ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಯಿತು.
ತೀವ್ರ ನಿಗಾ ಘಟಕದಲ್ಲಿ ಮಗುವನ್ನಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಗು ಪ್ರಾಣಾಪಾಯದಿಂದ ಪಾರಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಈ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

This is an evaluation image and is Copyright Pamela Perry. Do not publish without acquiring a license. Image number: 0515-1001-2911-3806. http://www.acclaimimages.com/_gallery/_pages/0515-1001-2911-3806.html