Breaking News
Home / Breaking News / ಬೆಳಗಾವಿ,ಚಿಕ್ಕೋಡಿ, ಕಾಂಗ್ರೆಸ್ ಪಕ್ಷದ ಇಬ್ಬರೂ, ಅಭ್ಯರ್ಥಿಗಳು ಡಿಗ್ರಿ ಹೋಲ್ಡರ್ಸ್…!!

ಬೆಳಗಾವಿ,ಚಿಕ್ಕೋಡಿ, ಕಾಂಗ್ರೆಸ್ ಪಕ್ಷದ ಇಬ್ಬರೂ, ಅಭ್ಯರ್ಥಿಗಳು ಡಿಗ್ರಿ ಹೋಲ್ಡರ್ಸ್…!!

ಬೆಳಗಾವಿ- ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃನಾಲ ಹೆಬ್ಬಾಳಕರ್ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಇಬ್ಬರೂ ಮಂತ್ರಿ ಮಕ್ಕಳು,ಪದವೀಧರರು,ಕೋಟ್ಯಾಧೀಶರು ಎನ್ನುವದು ವಿಶೇಷ,ವಿಭಿನ್ನ ಮತ್ತು ವಿಶಿಷ್ಠವಾಗಿದೆ.

ಬೆಳಗಾವಿ ಅಭ್ಯರ್ಥಿ ಮೃನಾಲ ಸಿವ್ಹಿಲ್ ಇಂಜಿನಿಯರ್ ,ಚಿಕ್ಕೋಡಿ ಅಭ್ಯರ್ಥಿ,ಪ್ರಿಯಾಂಕಾ MBA ಪದವೀಧರರು ಈ ಇಬ್ಬರೂ ಅಭ್ಯರ್ಥಿಗಳು ಹಲವಾರು ಕಂಪನಿಗಳ ಪಾಲುದಾರರು,ಕೆಲವು ಕಂಪನಿಗಳ ಮಾಲೀಕರು ಜೊತೆಗೆ ಇಬ್ಬರೂ ಕೋಟ್ಯಾಧೀಶರಾಗಿದ್ದಾರೆ.ಇವರಿಬ್ಬರೂ ಪೋಷಕರ ಗರಡಿಯಲ್ಲಿ ಪಳಗಿದವರಾಗಿದ್ದು ಫೌಂಡೇಶನ್ ಮುಖಾಂತರ ಅನೇಕ ಸಮಾಜಿಕ,ಧಾರ್ಮಿಕ,ಮತ್ತು ಕ್ರೀಡಾಪಟುಗಳಿಗೆ ನೆರವಾಗಿದ್ದು ಕೋವೀಡ್ ಅವಧಿಯಲ್ಲಿ ಇಬ್ಬರೂ ಅಪಾರ ಸೇವೆಯ ಮೂಲಕ ಜನಮೆಚ್ವುಗೆ ಗಳಿಸಿದವರಾಗಿದ್ದಾರೆ.ಇವರಿಗೆ ಸಮಾಜ ಸೇವೆಯ ಅನುಭವ ಇದೆ.

ಪ್ರೀಯಾಂಕಾ ಜಾರಕಿಹೊಳಿ ಮತ್ತು ಮೃನಾಲ ಹೆಬ್ಬಾಳಕರ್ ಇಬ್ಬರೂ ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದು ಇಬ್ಬರೂ ಸಹ, ಸಂಸ್ಕಾರವಂತರು,ಸರಳ ವ್ಯಕ್ತಿತ್ವ, ಹಿರಿಯರಿಗೆ ಯಾವ ರೀತಿಯಲ್ಲಿ ಗೌರವ ಕೊಡಬೇಕು ಅನ್ನೋದನ್ನು ಇಬ್ಬರನ್ನು ನೋಡಿ ಕಲಿಯಬೇಕು, ಈ ಎಲ್ಲ ಗುಣಗಳು ಇಬ್ಬರಿಗೂ ವರದಾನ, ಮತಯಾಚನೆಗೆ ಈ ಇಬ್ಬರೂ ಅಭ್ಯರ್ಥಿಗಳು ನಿಮ್ಮ ಬಳಿ ಬಂದೇ ಬರ್ತಾರೆ,ಆವಾಗ ಇವರು ಎಷ್ಟೊಂದು ಸಂಸ್ಕಾರವಂತರೂ ಅನ್ನೋದು ನಿಮಗೆ ಗೊತ್ತಾಗುತ್ತದೆ.ರಾಜಕೀಯ ಟೀಕೆ ಟಿಪ್ಪಣಿಗಳು ಇದ್ದೇ ಇರುತ್ತವೆ ಆದ್ರೆ ಮಾನವೀಯತೆಯ ಎದುರು ಟೀಕೆ ಟಿಪ್ಪಣಿಗಳಿಗೆ ಯಾವುದೇ ಅರ್ಥವಿರುವದಿಲ್ಲ.

ಚಿಕ್ಕೋಡಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ ಜಾರಕಿಹೊಳಿ‌ ಎಂಬಿಎ ಪದವೀಧರೆ..!

ಚಿಕ್ಕೋಡಿ ಕಾಂಗ್ರೆಸ್ ಅಭ್ಯರ್ಥಿಆಗಿರುವ ಎಂಬಿಎ ಪದವೀಧರೆಯಾಗಿದ್ದು ತಂದೆಯ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿ‌ ಫೌಂಡೇಶನ್ ವತಿಯಿಂದ ಯಮಕನಮರಡಿ ಕ್ಷೇತ್ರದಲ್ಲಿ ಸಾಕಷ್ಟು ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ ನಿವಾಸಿ ಆಗಿರುವ ಪ್ರಿಯಾಂಕ ಜಾರಕಿಹೊಳಿ‌16-04-1997ರಂದು ಜನಿಸಿದ್ದು
ಸತೀಶ ಜಾರಕೊಹೊಳಿ ( ಬೆಳಗಾವಿ ಉಸ್ತುವಾರಿ ಸಚಿವರಾಗಿದ್ದು ತಾಯಿ ಶಾಕುಂತಲಾದೇವಿ, ರಾಹುಲ್ ಜಾರಕೊಹೊಳಿ ಕೂಡ ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡಿದ್ದಾರೆ.
ರಾಜಕೀಯ ಹಿನ್ನೆಲೆ ನೋಡುವುದಾದರೆ 2018ರಿಂದ ಪ್ರಾಥಮಿಕ ಸದಸ್ಯತ್ವ ಪಡೆದುಕೊಂಡಿರುವ ಪ್ರಿಯಾಂಕ ಜಾರಕಿಹೊಳಿ‌ ತಂದೆಯ ಸತೀಶ ಜಾರಕಿಹೊಳಿ‌ ಮತಕ್ಷೇತ್ರದಲ್ಲಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಹುದ್ದೆ ಪಡೆದಿಲ್ಲ‌. ಆದರೆ, ಸತೀಶ ಸುಗರ್ ಲಿಮಿಟೆಡ್, ಬೆಳಗಮ್ ಸುಗರ್ ಪ್ರೈವೇಟ್ ಲಿಮಿಟೆಡ್, ಗಾಡಿಗಾಂವ್ ರೆಸಾರ್ಟ್ ಪ್ರೈವೇಟ್ ಲಿಮಿಟೆಡ್, ವೆಸ್ಟರ್ನ್ ಗ್ರಾಟ್ಸ್ ಇನ್ಫ್ರಾ ಲಿಮಿಟೆಡ್,ನೇಚರ್ ನೆಸ್ಟ್ ಹಾರ್ಟಿಕಲ್ಚರ್, ಆಂಡ್ ಫಾರ್ಮ್ಸ್ ಪ್ರೈವೇಟ್ ಲಿಮಿಟೆಡ್ ಸೇರಿ 14 ಸಂಘ ಸಂಸ್ಥೆಗಳ ನಿರ್ದೇಶಕಿಯಾಗಿ ಪಾಟನರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಸಿವಿಲ್ ಇಂಜಿನಿಯರ್.!

ಕುಂದಾನಗರಿ ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ (ಸಿವಿಲ್) ಇಂಜಿನಿಯರಿಂಗ್ ಪದವೀಧರರಾಗಿದ್ದಾರೆ. 6-4-1993ರಲ್ಲಿ ಜನಿಸಿದ್ದಾರೆ.ಮೂಲತಃ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಟ್ಟಿಹೊಳಿ ಗ್ರಾಮದ ನಿವಾಸಿ ಆಗಿರುವ ಮೃಣಾಲ್‌ ಹೆಬ್ಬಾಳಕರ್ ತಂದೆ ರವೀಂದ್ರ ತಾಯಿ ಲಕ್ಷ್ಮಿ ‌ಹೆಬ್ಬಾಳ್ಕರ್ ಆಗಿದ್ದು ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾಗಿ ಲಕ್ಷ್ಮೀ ಹೆಬ್ಬಾಳಕರ್ ಕೆಲಸ ಮಾಡುತ್ತಿದ್ದಾರೆ. ಮೃಣಾಲ ಹೆಬ್ಬಾಳಕರ್ 2013ರಿಂದ ಸಕ್ರಿಯ ರಾಜಕಾರಣದಲ್ಲಿ ಭಾಗಿಯಾಗಿದ್ದಾರೆ. ಎರಡು ಅವಧಿಗೆ ಕಾಂಗ್ರೆಸ್ ಯುವ ಘಟಕದ ಬೆಳಗಾವಿ ಉಪಾಧ್ಯಕ್ಷರಾಗಿ ‌ಕಾರ್ಯನಿರ್ವಹಿಸಿದ್ದಾರೆ. ಮೃಣಾಲ್‌ ಶುಗರ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ, ಸವದತ್ತಿಯ ಹರ್ಷಾ ಶುಗರ್ಸ್‌ನ ನಿರ್ದೇಶಕರಾಗಿ, ಲಕ್ಷ್ಮಿತಾಯಿ ಸೌಹಾರ್ದ ಸಹಕಾರ ‌ನಿಯಮಿತದ ನಿರ್ದೇಶಕರಾಗಿ, ಹರ್ಷಾ ಬಿಲ್ಡರ್ ಹಾಗೂ ಡೆವೆಲಪರ್‌ದ ಪಾರ್ಟನರ್ ಕೂಡ ಆಗಿದ್ದಾರೆ‌.ಸದ್ಯ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ತಾಯಿ ಲಕ್ಷ್ಮೀ ಹೆಬ್ಬಾಳಕರ್ ಅನುಪಸ್ಥಿತಿಯಲ್ಲಿ ಹೆಚ್ಚೆಚ್ಚು ಓಡಾಟ ಮಾಡ್ತಾರೆ‌.

Check Also

ಕಾಂಗ್ರೆಸ್ ಪಾರ್ಟಿಯಲ್ಲೂ ಚಹಾ ಪೇ ಚರ್ಚಾ ವೀದೌಟ್ ಖರ್ಚಾ…!!!

ಬೆಳಗಾವಿ- ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಇವತ್ತು ಬೆಳಗಾವಿಗೆ ಬಂದ್ರು ಇಲ್ಲಿಯ ಕಾಂಗ್ರೆಸ್ ಭವನದಲ್ಲಿ …

Leave a Reply

Your email address will not be published. Required fields are marked *