ಎಂಈಎಸ್ ಮುಖಕ್ಕೆ ರಾಜ್ ಠಾಕ್ರೆ ಮಂಗಳಾರತಿ

ಬೆಳಗಾವಿ- ನಮ್ಮ ಮಹಾರಾಷ್ಟ್ರದಲ್ಲಿ ನಾನು ಸಿಎಂ ಇದ್ದಾಗ ಇಲ್ಲಿಯ ಮಹಾನಗರ ಪಾಲಿಕೆಯವರು ಮಹಾರಾಷ್ಟ್ರ ಉದಯವಾದ ದಿನ ಯಾರಾದರೂ ಕರಾಳ ದಿನ ಆಚರಿಸಿ ಕಪ್ಪು ಬಾವುಟ ಪ್ರದರ್ಶನ ಮಾಡಿದ್ದರೆ ಅವರನ್ನು ಒದ್ದು ಜೈಲಿಗೆ ಹಾಕಿಸುತ್ತಿದ್ದೆ ಎಂದು  ಮಹಾರಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್ ಠಾಕ್ರೆ ಎಂಈಎಸ್ ಮೂಖಕ್ಕೆ ಮಂಗಳಾರತಿ ಮಾಡಿದ್ದಾರೆ

ಮಹಾರಾಷ್ಟ್ರದ ಖಾಸಗಿ ಸುದ್ದಿ ವಾಹಿನಿಗೆ ಸಂದರ್ಶನ ನೀಡಿದ ರಾಜ್ ಠಾಖ್ರೆ  ಕನ್ನಡ ರಾಜ್ಯೋತ್ಸವ ದಿನದಂದು ಎಂಇಎಸ್ ಕರಾಳ ದಿನ ಆಚರಣೆ ಆಚರಿಸಿದ್ದಕ್ಕೆ ಎಂಎನ್’ಎಸ್ ಮುಖಂಡ ರಾಜ್ ಠಾಕ್ರೆ ಗುಡುಗಿದ್ದಾರೆ

ಲ, ಬೆಳಗಾವಿಯಲ್ಲಿ ಏನಾದರೂ ಸಮಸ್ಯೆ ಮಾಡಿ ಎಂಇಎಸ್ ನಾಯಕರು  ಬಳಿಕ ನನ್ನ ಹತ್ರ ಬರ್ತಾರೆ, ಸಿಎಂ ಹತ್ರ ಹೋಗ್ತಾರೆ, ಇನ್ಯಾರ ಹತ್ರನೋ ಹೋಗ್ತಾರೆ, ಮತ್ತೆ  ಅಲ್ಲಿ ಹೋಗಿ ರಂಪಾಟ ಮಾಡ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾನು ಮಹಾರಾಷ್ಟ್ರದ ಸಿಎಂ ಆಗಿದ್ದಿದ್ದರೆ ,ಮಹಾರಾಷ್ಟ್ರದ ವಿರುದ್ದ ಯಾವುದಾದರೂ ಪಾಲಿಕೆ ಕರಾಳ ದಿನ ಅಚರಿಸಿದ್ದಿದ್ದರೆ ಅವರನ್ನೆಲ್ಲ ನಾನು ಸದೆ ಬಡಿಯುತ್ತಿದ್ದೆ. ಯಾವುದೇ ವಿವಾದ ಇತ್ಯರ್ಥ ಆಗದೇ ಇರುವಾಗ ಕರ್ನಾಟಕದ ದಿನವನ್ನು ಕರಾಳ ದಿನ ಅಂತ ಆಚರಿಸುತ್ತೀರಿ, ಇದ್ಯಾವ ಪದ್ದತಿ ಎಂದು ಗರಂ ಆದರು.

ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಅದು ತೀರ್ಮಾನ ಬರೋವರೆಗೂ ಸುಮ್ಮನೆ ಇರಿ. ಅದರ ಬದಲಿಗೆ ಮಹಾರಾಷ್ಟ ಪರ ವಕೀಲರು ಸಮರ್ಥವಾಗಿ ವಾದ ಮಂಡಿಸುವಂತೆ ಒತ್ತಡ ಹಾಕಿ. ಕರ್ನಾಟಕದ ಜ್ಞಾನ ಪೀಠ ಪ್ರಶಸ್ತಿ ವಿಜೇತರೊಬ್ಬರು ಬೆಳಗಾವಿ, ಕಾರವಾರ ಬಗ್ಗೆ ಮಾತನಾಡಿದರೆ ಅವರ ಮುಖಕ್ಕೆ ಮಸಿ ಬಳಿಯಿರಿ ಅಂತ ಈ ಎಂಇಎಸ್’ನ ಕೆಲವರು ಹೇಳುತ್ತಾರೆ. ಉತ್ತರ ಪ್ರದೇಶ, ಬಿಹಾರದ ಜನ ಬಂದು ಮಹಾರಾಷ್ಟ್ರದ ಜ್ಞಾನ ಪೀಠ ಪ್ರಶಸ್ತಿ ವಿಜೇತರ ಮುಖಕ್ಕೆ ಮಸಿ ಬಳಿದರೆ ಅವರನ್ನು  ನಾವೇನು ಮಾಡಬಹುದು ಹೇಳಿ?. ಕಳೆದ 65 ವರ್ಷಗಳಿಂದ ಎಂಇಎಸ್ ನವರು ಬೆಳಗಾವಿಯಲ್ಲಿ ಜನರನ್ನು ಬೆಳಗಾವಿ ಕರ್ನಾಟಕದಿಂದ ಬಿಡುಗಡೆ ಹೊಂದಲಿದೆ ಎಂದು  ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ಇದು ಯಾವತ್ತೂ ಸಾಧ್ಯವಿಲ್ಲದ ಮಾತು. ಇವರಿಗೆ ಈ ವಿಷಯವನ್ನಿಟ್ಟುಕೊಂಡು ಕೇವಲ ಆಟ ಆಡುವುದಷ್ಟೇ ಉದ್ದೇಶ. ಅಲ್ಲಿಯ ಕೆಲವು ಜನರಿಗೂ ಇದೇ ಬೇಕಾಗಿದೆ. ಇದು ನನ್ನ ಸ್ಪಷ್ಟ ನಿಲುವು ಎಂದು ಹೇಳಿದ್ದಾರೆ.

Check Also

ಗಣೇಶ್ ಪ್ರತಿಷ್ಠಾಪನೆ ಮಾಡಿದ ಬೆಳಗಾವಿ ಡಿಸಿ ಮಹ್ಮದ್ ರೋಷನ್…..!

ಬೆಳಗಾವಿ – ತೆಲೆಯ ಮೇಲೆ ಗಾಂಧಿ ಟೊಪ್ಪಗಿ,ಹಣೆಯ ಮೇಲೆ ನಾಮ, ಕೇಸರಿ ಝುಬ್ಬಾ ಹಾಕಿಕೊಂಡು ಗಣೇಶ ಮೂರ್ತಿಗೆ ಆರತಿ ಬೆಳಗಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.