ಬೆಳಗಾವಿ- ಕಾಗವಾಡ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ
ಉಗಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಮಾದ್ಯಮಗಳ ಜೊತೆ ಮಾತನಾಡಿ ನಾಮಪತ್ರ ಸಲ್ಲಿಸಿದ ಬಳಿಕೆ ಕ್ಷೇತ್ರದಲ್ಲಿ ಸಂಚಾರ ಮಾಡುತ್ತಿದ್ದೇನೆ. ನನ್ನ ಕ್ಷೇತ್ರದ ಜನರು ಆತ್ಮೀಯವಾಗಿ ಸ್ವಾಗತ ಮಾಡಿದ್ದಾರೆ.. ಉತ್ತಮ ವಾತಾವರಣ ಇದೆ.
ಈಬಾರಿ ಗೆಲವು ನನ್ನದೆ ಎಂದು ರಾಜು ಕಾಗೆ ವಿಶ್ವಾಸ ವ್ಯೆಕ್ತಪಡಿಸಿದರು.
ಕ್ಷೇತ್ರದ ಜನರು ಹೇಳುತ್ತಿದ್ದರು ನಿಮ್ಮನ್ನು ಸೋಲಿಸಿ ತಪ್ಪು ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ.
ಈ ಬಾರಿ ಗೆಲವು ನನ್ನದೇ ವಿರೋಧ ಪಕ್ಷದ ಅಭ್ಯರ್ಥಿ ಶ್ರೀಮಂತ ಪಾಟೀಲ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿಲ್ಲ.
ವೈಫಲ್ಯವೇ ನನಗೆ ಶ್ರೀರಕ್ಷೆಯಾಗಲಿದೆ
ಕ್ಷೇತ್ರದಲ್ಲಿ ಗೋಲ ಗುಮ್ಮಟ, ಬಂಗಾರ ಪ್ಲೇಟ್ ತರ್ತಿನಿ. ಅಂತಾ ಸುಳ್ಳು ಭರವಸೆ ನೀಡಿದ್ದಾರೆ
ಕ್ಷೇತ್ರದ ಅಭಿವೃದ್ಧಿ ಆಗಿಲ್ಲ. ಅದೇ ನನ್ನ ಗೆಲುವಿಗೆ ವರದಾನವಾಗಲಿದೆ.
ಸಚಿವ ಮಾಧುಸ್ವಾಮಿ ಹೇಳಿಕೆ ವಿಚಾರ.
ಮಾಧುಸ್ವಾಮಿ ನನ್ನ ಆತ್ಮೀಯ ಗೆಳೆಯ.
ಆದರೆ ಅವರ ಹೇಳಿಕೆ ನನಗೆ ಕ್ಷೇತ್ರದಲ್ಲಿ ವರವಾಗಲಿದೆ.
ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿಕೆ ವಿಚಾರ
ವಿರೋಧ ಪಕ್ಷದವರ ವಿರುದ್ಧ ಮಾತನಾಡುವಾಗ ಭಾವುಕರಾಗಿ ಆ ರೀತಿ ಹೇಳುತ್ತೆವೆ
ನನ್ನದೇ ಯಾವುದೇ ಸಕ್ಕರೆ ಕಾರ್ಖಾನೆ ಇಲ್ಲ. ಸಾರಾಯಿ ಅಂಗಡಿಗಳು ಇಲ್ಲಾ.ಕಿರಾಣಿ ಅಂಗಡಿ ಇಲ್ಲ.೨೦ ವರ್ಷ ಕ್ಷೇತ್ರದ ಜನರ ಜೊತೆ ನಿಂತು ಅಭಿವೃದ್ಧಿ ಕೆಲಸ ಮಾಡಿದ್ದೇನೆ ಹೀಗಾಗಿ ಜನರು ನನಗೆ ಮತ ನೀಡುತ್ತಾರೆ.ಎಂದು ರಾಜು ಕಾಗೆ ವಿಶ್ವಾಸ ವ್ಯೆಕ್ತಪಡಿಸಿದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ