Breaking News

ಸಂಧಾನ ವಿಫಲ..ಅಶೋಕ ಪೂಜಾರಿ ಸ್ಪರ್ದೆ ಅಚಲ….!!!?

ಬಿಜೆಪಿ ನಾಯಕರ ಸಂಧಾನ ವಿಫಲ.,..ಅಶೋಕ ಪೂಜಾರಿ ಸ್ಪರ್ಧೆ ಅಚಲ…!!!

ಬೆಳಗಾವಿ- ಗೋಗವ ವಕಾಕ್ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಅವರನ್ನು ಉಪ ಚುನಾವಣೆ ಕಣದಿಂದ ಹಿಂದಕ್ಕೆ ಸರಿಸಲು ಬಿಜೆಪಿ ನಾಯಕರು ನಡೆಸಿದ ಕಸರತ್ತು ವ್ಯರ್ಥವಾಯಿತು

ಮದ್ಯಾಹ್ನ ಎರಡು ಘಂಟೆಗೆ ಮಹಾಂತೇಶ ಕವಟಗಿಮಠ ಅವರು ಅಶೋಕ ಪೂಜಾರಿಯವರನ್ನು ಮನವೊಲಿಸಲು ಜ್ಞಾನ ಮಂದಿರಕ್ಕೆ ಆಗಮಿಸಿದಾಗ ಜೆಡಿಎಸ್ ಕಾರ್ಯಕರ್ತರು ಮಹಾಂತೇಶ ಕವಟಗಿಮಠ ಅವರನ್ನು ತಡೆದರು ಈ ಸಂಧರ್ಭದಲ್ಲಿ ದೊಡ್ಡ ಹೈಡ್ರಾಮಾ ನಡೆಯಿತು ಮಹಾಂತೇಶ್ ಕವಟಗಿಮಠ ಬಂದ ದಾರಿಗೆ ಸುಂಕವಿಲ್ಲದೇ ಬರಿಗೈಲಿ ಮರಳಬೇಕಾಯಿತು

ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಕವಟಗಿಮಠ
ಸಂಧಾನಕ್ಕೆ ಬಂದಿದ್ದೆ
ಪೂಜಾರಿ ಕಣದಿಂದ ಹಿಂದೆ ಸರಿಯುವಂತೆ ಮನವಿ ಮಾಡಿದೆ.
ಯಡಿಯೂರಪ್ಪ ಬಲಪಡಿಸಲು ಬಿಜೆಪಿ ಬೆಂಬಲಿಸಬೇಕೆಂದು ಕೇಳಿದ್ದೇನೆ.
ಮಾನಸಿಕವಾಗಿ ಬಿಜೆಪಿ ಜೊತೆ ಇದ್ದಾರೆ. ಮಾನಸಿಕ ಒತ್ತಡದಿಂದ ಹಿಂದೆ ಸರಿಯಲು ಸಾಧ್ಯವಾಗಲಿಲ್ಲ.
ಇವತ್ತು ನಾಮಪತ್ರ ಹಿಂಪಡಿಯುವ ನಮ್ಮ ಪ್ರಯತ್ನ ಯಶಸ್ವಿಯಾಗಿಲ್ಲ.
ಅಶೋಕ ಪೂಜಾರಿ ನಮ್ಮ ಜೊತೆ ಇರಬೇಕೆಂಬುದು ನಮ್ಮ ಆಸೆ ಇತ್ತು. ಅದು ಸಾಧ್ಯವಾಗಿಲ್ಲ.
ಸಿಎಂ ಯಡಿಯೂರಪ್ಪ ಹಾಗೂ ರಾಜಾಧ್ಯಕ್ಷರ ಸೂಚನೆ ಮೇರೆಗೆ ಮನವೂಲಿಸಲು ಬಂದಿದ್ದೆ. ಎಂದರು

ನಾಮಪತ್ರ ವಾಪಸ್ ಪಡೆಯುವ ಸಮಯ ಮುಗಿದ ಬಳಿಕ ನಿರಾಳವಾದ ಅಶೋಕ ಪೂಜಾರಿ ಮಾದ್ಯಮಗಳ ಜೊತೆ ಮಾತನಾಡಿ ಗೋಕಾಕಿನಲ್ಲಿ ಪಕ್ಷಗಳ ನಡುವೆ ಚುನಾವಣೆ ನಡೆಯುತ್ತಿಲ್ಲ ಇಲ್ಲಿ ಜಾರಕಿಹೊಳಿ ಮತ್ತು ಅಶೋಕ ಪೂಜಾರಿ ನಡುವೆ ಕಲೆಕ್ಷನ್ ನಡೆಯುತ್ತಿದೆ.ಸೋಲೀನ ಬೀತೀಯಿಂದ ಬಿಜೆಪಿ ನಾಯಕರು ಸಂಧಾನಕ್ಕೆ ಮುಂದಾಗಿದ್ದರು ಅನೇಕ ಆಫರ್ ಗಳನ್ನು ನೀಡಿದ್ದರು ,ಮೂವತ್ತು ವರ್ಷದ ಹೋರಾಟದ ಪ್ರಶ್ನೆ ಆಗಿತ್ತು ಮನಸಾಕ್ಷಿ ಯಾಕೋ ಒಪ್ಪಲಿಲ್ಲ ಹೀಗಾಗಿ ಬಿಜೆಪಿ ನಾಯಕರ ಮಾತಿಗೆ ಒಪ್ಪಲಿಲ್ಲ ಗೋಕಾಕಿನಲ್ಲಿ ಜನ ಆತಂಕದಲ್ಲಿ ಬದುಕುತ್ತಿದ್ದಾರೆ ಈ ಚುನಾವಣೆ ಸ್ವಾಭಿಮಾನದ ಚುನಾವಣೆಯಾಗಿದ್ದು ರಾಜ್ಯದ ಪ್ರಗತಿಪರ ಸಂಘಟನೆಗಳು ಗೋಕಾಕಿನ ಸ್ವಾಭಿಮಾನದ ಹೋರಾಟಕ್ಕೆ ಬೆಂಬಲ ಕೊಡಬೇಕೆಂದು ಅಶೋಕ ಪೂಜಾರಿ ಮನವಿ ಮಾಡಿಕೊಂಡರು

Check Also

ಮಹಾರಾಷ್ಟ್ರದ ನಾಗಪೂರದಲ್ಲಿ ಬೆಳಗಾವಿ ಗ್ರಾಮೀಣದ ನಾಗೇಶ್…!!

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಮುಖಂಡ,ಈ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ನಾಗೇಶ್ ಮುನ್ನೋಳಕರ ಕಾಲಿಗೆ ಚಕ್ರ ಕಟ್ಟಕೊಂಡು …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.