Breaking News
Home / ಬೆಳಗಾವಿ ನಗರ / ರವಿ ಭಜಂತ್ರಿ “ನಗೆರತ್ನ ಮಂಜರಿ”

ರವಿ ಭಜಂತ್ರಿ “ನಗೆರತ್ನ ಮಂಜರಿ”

ರವಿ ಭಜಂತ್ರಿ “ನಗೆರತ್ನ ಮಂಜರಿ”

ಬೆಳಗಾವಿ 5- ನಗರದ ಹಾಸ್ಯಕೂಟ ಹಾಗೂ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಅಂತರರಾಷ್ಟ್ರೀಯ ಖ್ಯಾತಿ ನಗೆಮಾತುಗಾರ ರವಿ ಭಜಂತ್ರಿಯವರ “ನಗೆರತ್ನ ಮಂಜರಿ” ಹಾಸ್ಯ ಧ್ವನಿಮುದ್ರಿಕೆ ಬಿಡುಗಡೆ ಹಾಗೂ “ಮದುವೆ ಮೋಜುಗಳು” ಎಂಬ ವಿಷಯದ ಹಾಸ್ಯ ಕಾರ್ಯಕ್ರಮವನ್ನು ಇದೇ ದಿ. 13 ಶನಿವಾರ ಸಾಯಂಕಾಲ 4-30 ಕ್ಕೆ ಚೆನ್ನಮ್ಮ ವೃತ್ತದ ಬಳಿಯಿರುವ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ನಿವೃತ್ತ sಸುಪರಿಂಟೆಂಡಿಂಗ್ ಎಂಜಿನಿಯರ್ ಶ್ರೀ ವಿ. ಜಿ. ಕುಲಕರ್ಣಿಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಹಾಸ್ಯ ಮಾತುಗಾರ ರವಿ ಭಜಂತ್ರಿಯವರ “ನಗೆರತ್ನ ಮಂಜರಿ” ವಿಡಿಯೋ ಸಿ.ಡಿ.ಯನ್ನು ನಿವೃತ್ತ ಪ್ರಾಚಾರ್ಯರಾದ ಡಾ| ಬಸವರಾಜ ಜಗಜಂಪಿಯವರು ಬಿಡುಗಡೆಗೊಳಿಸಲಿದ್ದು ಡಾ| ಎಚ್. ಬಿ. ಕೋಲಕಾರ ಅವರು ಕವಿ ವಿ.ಜಿ. ಭಟ್ಟ ಸಾಹಿತ್ಯದಲ್ಲಿಯ ಹಾಸ್ಯ ಕುರಿತು ಮಾತನಾಡಲಿದ್ದಾರೆ. ರವಿ ಭಜಂತ್ರಿಯವರು ತಮ್ಮ ನಗೆಮಾತುಗಳಿಂದ ನಿಮ್ಮನ್ನೆಲ್ಲ ರಂಜಿಸಲಿದ್ದಾರೆ.

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *