Breaking News
Home / Breaking News / ಪಕ್ಷ ಸಾಮರ್ಥ್ಯ ನೋಡಿ ಡಿಸಿಎಂ ಮಾಡ್ತಾರೆ,- ಸತೀಶ್ ಜಾರಕಿಹೊಳಿ

ಪಕ್ಷ ಸಾಮರ್ಥ್ಯ ನೋಡಿ ಡಿಸಿಎಂ ಮಾಡ್ತಾರೆ,- ಸತೀಶ್ ಜಾರಕಿಹೊಳಿ

ಬೆಳಗಾವಿ-ಬೆಳಗಾವಿ-ಡಿಸಿಎಂ ಹುದ್ದೆ ಸೃಷ್ಟಿ ಮಾಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಸತೀಶ್ ಜಾರಕಿಹೊಳಿ ಪಕ್ಷದ ಹೈಕಮಾಂಡ್ ಸಾಮರ್ಥ್ಯ ನೋಡಿ ಡಿಸಿಎಂ ಮಾಡ್ತಾರೆ ಎಂದು ಹೇಳಿದ್ದಾರೆ.

ಬೆಳಗಾವಿಯಲ್ಲಿ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾದ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ,ರಾಜಣ್ಣ ಅವರು ಅವರ ಅಭಿಪ್ರಾಯ ಹೇಳಿದ್ದಾರೆ.ಅಂತಿಮವಾಗಿ ಪಕ್ಷ ನಿರ್ಧಾರ ಮಾಡಬೇಕು.ಈಗಂತೂ ಅದರ ಚರ್ಚೆ ಅವಶ್ಯಕತೆ ಇಲ್ಲ.ಅವರು ಹೇಳಿದ ಮೇಲೆ ಚರ್ಚೆ ಪ್ರಾರಂಭ ಆಗಬಹುದು.ಅವಶ್ಯಕತೆ ಇದೆಯೋ ಇಲ್ಲವೋ ಪಕ್ಷ ತೀರ್ಮಾಣ ಮಾಡಬೇಕು.ನಾನಂತೂ ಆಕಾಂಕ್ಷಿ ಇಲ್ಲವೇ ಇಲ್ಲ,ಪಕ್ಷ ಒಂದು ವೇಳೆ ಮಾಡೋದಾದ್ರೆ ಯಾರನ್ನ ಮಾಡುತ್ತೊ ಅವರ ಸಾಮರ್ಥ್ಯ, ನೋಡಿ ಡಿಸಿಎಂ ಮಾಡುತ್ತೆ ಎಂದು ಹೇಳಿದ್ದಾರೆ.

ರಾಜಕೀಯದಲ್ಲಿ ಎಲ್ಲಾ ರೀತಿಯ ಚರ್ಚೆ ಆಗುತ್ತವೆ.ನಾಲ್ಕು ಗೋಡೆಗಳ ಮಧ್ಯೆ ಬೇರೆ ಇರುತ್ತೆ ಹೊರಗಡೆ ಬೇರೆ ಇರುತ್ತೆ.ಚರ್ಚೆಗಳು ಆಗಿದ್ದನ್ನೆಲ್ಲಾ ನೀವು ಕ್ಯಾಚ್ ಹಿಡಿದ್ರೆ ಹೇಗೆ ಎಂದು ನಸುನಕ್ಕ ಸತೀಶ ಜಾರಕಿಹೊಳಿ ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿದ್ರು.ಒಂದೊಂದು ಸಲ ಅಂಗಡಿಗೆ ಹೋಗಿ ಬಟ್ಟೆ ಸರಿ ಇದೆಯೋ ಇಲ್ವೊ ನೋಡ್ತೊವಿ.ಬಟ್ಟೆ ಸರಿ ಇಲ್ಲ ಎಂದರೆ ಬೇರೆ ಅಂಗಡಿಗೆ ಹೋಗ್ತಿವಿ,ಪಕ್ಷವನ್ನು ಬಟ್ಟೆ ಅಂಗಡಿಗೆ ಹೋಲಿಸಿ ಸತೀಶ ಮಾರ್ಮಿಕ ಮಾತು ಹೇಳಿದ್ದಾರೆ.

ಯಾವುದೋ ಒಂದು ವಿಚಾರ ಎಲ್ಲೋ ಮಾಡಿದ್ದನ್ನ ಹೇಳುವುದಕ್ಕೆ ಆಗುವುದಿಲ್ಲ.ಜಿಲ್ಲಾ ವಿಭಜನೆ ವಿಚಾರ ಜೋರು ಚರ್ಚೆ ಆಗಿ ಒಮ್ಮೆಲೆ ಕೈಬಿಟ್ಟ ವಿಚಾರ,ಕಾಲ ಬಂದೇ ಬರುತ್ತೆ ಮಾಡ್ಸೋಣ ಎಂದ ಸತೀಶ,ಎಲ್ಲರೂ ಜಿಲ್ಲೆಯವರೂ ಜಿಲ್ಲಾ ವಿಭಜನೆಗೆ ಇಂಟ್ರಸ್ಟೆಡ್ ಇದಿವಿ.ಇನ್ನು ಮೇಲಿನವರು ಸರ್ಕಾರದವರು ಗ್ರೀನ್ ಸಿಗ್ನಲ್ ಕೊಡಬೇಕು ಎಂದು ಸತೀಶ ಜಾರಕಿಹೊಳಿ ಹೇಳಿದ್ರು.

ಗಡಿ ಉಸ್ತುವಾರಿ ಸಚಿವರ ನೇಮಕಾತಿ ಇನ್ನೂ ಆಗದ ವಿಚಾರ,ಅದಕ್ಕೇನು ಸಪ್ರೇಟ್ ಬೇಕು ಅಂತಿಲ್ಲ, ಅದನ್ನ ಬೆಂಗಳೂರಿನಲ್ಲಿಯೇ ಕುಳಿತು ಮಾಡಬಹುದು.ಪರಮೇಶ್ವ ಹಾಗೂ ನೀವು ಹರಿಪ್ರಸಾದ್ ಅವರ ಮನೆಗೆ ಭೇಟಿ ನೀಡಿದ ವಿಚಾರ,ಎನಾದ್ರೂ ಸಂಧಾನಕಾರಾರಗಿ ಹೋಗಿದ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,ಅವರು ಪಕ್ಷ ಬಿಡುವ ವಿಚಾರ ಇಲ್ಲ,ಅವರು ಪಕ್ಷ ಬಿಡೋದಿಲ್ಲ ಅವರು ಮೂಲ ಕಾಂಗ್ರೇಸ್ಸಿಗರು,ಅವರಿಗೆ ನೋಟಿಸ್ ನೀಡಿದ ವಿಚಾರ,ಅದಕ್ಕೆ ಹರಿಪ್ರಸಾದ್ ಅವರೇ ಉತ್ತರ ನೀಡುತ್ತಾರೆ ಎಂದರು.

ಪಕ್ಷದ ಪರವಾಗಿ ನಾವು ಹೋಗಿ ಮಾತುಕತೆ ಮಾಡಿಕೊಂಡು ಬಂದಿದ್ದಿವಿ,ಬೂಡಾ ಮತ್ತು ಕಾಡಾ ಅಧ್ಯಕ್ಷರ ನೇಮಕಾತಿಯಲ್ಲಿ ಹೆಬ್ಬಾಳಕರ್ ಸತೀಶ ಬೆಂಬಲಿಗರ ಮಧ್ಯೆ ಕೋಲ್ಡ್ ವಾರ್ ಇದೆಯಾ ಎಂಬ ಪ್ರಶ್ನೆ,ಹಾಗೇನೂ ಇಲ್ಲ ನಮಗೆ ಹೀಗೆ ಮಾಡಿ ಹಾಗೆ ಮಾಡಿ ಅಂತ ಹೇಳಿಲ್ಲ. ನಾವು ಚರ್ಚೆ ಮಾಡಿ ಮಾಡ್ತಿವಿ ಎಂದು ಹೇಳಿದ್ರು.ಯಡಿಯೂರಪ್ಪ ಸರ್ಕಾರದ ವಿರುದ್ಧ ಪಾದಯಾತ್ರೆ ಮಾಡುವ ವಿಚಾರ,ಮಾಡಲಿ ಅದು ನಮಗೆ ಡಬಲ್ ಬೆನಫಿಟ್ ಆಗುತ್ತೆ,ಇಂತಹ ಕಷ್ಟ ಕಾಲದಲ್ಲೂ ಸಹ ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದೆವೆ.ಬೆಳಗಾವಿ ಖಾನಾಪುರ ತಾಲೂಕುಗಳನ್ನು ಬರಗಾಲದಿಂದ ಬಿಟ್ಟ ವಿಚಾರ,ಅದು ನಮ್ಮ‌ಕೈಲಿಲ್ಲ ಕೇಂದ್ರ ಸರ್ಕಾರದ ಮಾನದಂಡ ಇದೆ.ಅವರ ಫಾರ್ಮ್ಯಾಟ್ ಇದೆ ಅದರ ಪ್ರಕಾರ ಆಗಿದೆ.ಕೃತಕ ಮಳೆಯ ಪರ್ಮಿಷನ್ ತೆಗೆದುಕೊಂಡಿದ್ದೆವೆ.ಬೆಳಗಾಂ ಶುಗರ್ಸ್ ಗೆ ಸರ್ಕಾರದಿಂದ ಕೃತಕ ಮಳೆಗೆ ಅನುಮತಿ ಸಿಕ್ಕಿದೆ.ಮೋಡ ಇದ್ದಲ್ಲಿ ಹೋಗಿ ಮೋಡ ಬಿತ್ತನೆ ಮಾಡ್ತಿವಿ ಅಂದ್ರು

Check Also

ಬೆಳಗಾವಿಯಲ್ಲಿ FM ರೇಡಿಯೋ ಶುರು ಮಾಡಿ…!!

ಬೆಳಗಾವಿ- ಕರ್ನಾಟಕ,ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಸಂಪರ್ಕದ ಕೊಂಡಿಯಾಗಿರುವಬೆಳಗಾವಿಯಲ್ಲಿ ಎಫ್.ಎಂ ರೇಡಿಯೋ ಪ್ರಾರಂಭಿಸಲು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಅವರು …

Leave a Reply

Your email address will not be published. Required fields are marked *