ಬೆಳಗಾವಿ- ಕೇಂದ್ರ ಸರ್ಕಾರ ಜಾರಿಗೆ ತಂದಿರುವ CAA,NRC,NPR ಕಾಯ್ದೆಗಳಿಂದ ಆಗುವ ಆಗು ಹೋಗುಗಳ ದೇಶದ ಆಯ್ದ ಪ್ರದೇಶಗಳಲ್ಲಿ ಮಾರ್ಚ 1 ರಿಂದ ಮಾರ್ಚ 24 ರವರೆಗೆ ಮನೆ ಮನೆಗೆ ತೆರಳಿ ಜನಜಾಗೃತಿ ಮೂಡಿಸಲಾಗುವದು ಎಂದು ಕಮ್ಯುನಿಸ್ಟ ಪಾರ್ಟಿ ಆಫ್ ಇಂಡಿಯಾ ( m) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯಚೋರಿ ತಿಳಿಸಿದ್ದಾರೆ.
ಇಂದು ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ,CAA,NRC ಕಾಯ್ದೆಗಳು ಸಂವಿಧಾನ ಬಾಹಿರ ಕಾಯ್ದೆಗಳಗಾಗಿವೆ ಈ ಕಾಯ್ದೆಗಳ ಮೂಲಕ ಕೇಂದ್ರ ಸರ್ಕಾರ ಹಿದುತ್ವವಾದಿ ಓಟ್ ಬ್ಯಾಂಕ ನಿರ್ಮಾಣ ಮಾಡಲು ಹೊರಟಿದೆ,ಕಾಯ್ದೆಗಳನ್ನು ಜಾರಿಗೆ ತರುವ ಮೊದಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸದೇ ಇರುವದರಿಂದ ಅಲ್ಲಲ್ಲಿ ಗಲಬೆ ಗಳಾಗುತ್ತಿವೆ ಎಂದು ಸೀತಾರಾಮ ಯಚೋರಿ ಆರೋಪಿಸಿದರು
ಡೋನಾಲ್ಡ್ ಟ್ರಂಪ್ ಭಾರತಕ್ಕೆ ಬಂದಿದ್ದಾರೆ ,ಪ್ರದಾನಿ ನರೇಂದ್ರ ಮೋದಿ ದೇಶದ ರೈತರಿಗೆ,ಹೈನುಗಾರಿಕೆಗೆ ಮಾರಕವಾಗುವ ಯಾವುದೇ ಒಪ್ಪಂದಗಳನ್ನು ಮಾಡಿಕೊಳ್ಳಬಾರದು,ವದೇಶಿ ಕಂಪನಿಗಳು ಭಾರತಕ್ಕೆ ಬಂದರೆ ಭಾರತೀಯ ಸ್ವಾಮ್ಯದ ಕಂಪನಿಗಳ ಮೇಲೆ ಹೊಡೆತ ಬೀಳುತ್ತದೆ ,ದೇಶದಲ್ಲಿ ಮತ್ತಷ್ಟು ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತದೆ ಎಂದು ಯಚೋರಿ ಕಳವಳ ವ್ಯೆಕ್ತಪಡಿಸಿದರು