Breaking News

ಸತೀಶ ಜಾರಕಿಹೊಳಿ ಅವರನ್ನು ಕಾಂಗ್ರೆಸ್ ಪಕ್ಷದಿಂದ ಹೊರಹಾಕಿ-ಶಂಕರ ಮುನವಳ್ಳಿ

ಬೆಳಗಾವಿ-ಮಾಜಿ ಸಚಿವ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರು ಈ ಹಿಂದೆ ನಡೆದ ಎಪಿಎಂಸಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದು ಅವರನ್ನು ಕೂಡಲೇ ಕಾಂಗ್ರೆಸ್ ಪಕ್ಷದಿಂದ ಹೊರ ಹಾಕಬೇಕು ಎಂದು ಕಾಂಗ್ರೆಸ್ ಮುಖಂಡ ಮಾಜಿ ಕೆಪಿಸಿಸಿ ಸದಸ್ಯ ಶಂಕರ ಮುನವಳ್ಳಿ ಒತ್ತಾಯಿಸಿದ್ದಾರೆ

ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಸತೀಶ ಜಾರಕಿಹೊಳಿ ಅವರು ಜಿಲ್ಲಾ ಮಂತ್ರಿಗಳಾಗಿದ್ದಾಗ ಪಕ್ಷಕ್ಕಾಗಿ ಏನೂ ಮಾಡಿಲ್ಲ ಪಕ್ಷದ ಸಂಘಟನೆಗೂ ಶ್ರಮಿಸಿಲ್ಲ ಆದರೆ ರಮೇಶ ಜಾರಕಿಹೊಳಿ ಅವರು ಜಿಲ್ಲಾ ಮಂತ್ರಿಯಾದಾಗಿನಿಂದ ಕಾಂಗ್ರೆಸ ಪಕ್ಷದ ಕಾರ್ಯಕರ್ತ ರಲ್ಲಿ ಹೊಸ ಸಂಚಲನ ಮೂಡಿಸಿದ್ದು ಇದು ಸತೀಶ ಜಾರಕಿಹೊಳಿ ಅವರ ಹೊಟ್ಟೆಹುರಿಗೆ ಕಾರಣವಾಗಿದ್ದು ಸತೀಶ ಜಾರಕಿಹೊಳಿ ಅವರು ತಮ್ಮ ಸಹೋದರನಿಂದ ಮಂತ್ರಿಗಿರಿ ಕಸಿದುಕೊಳ್ಳುವ ಕುತಂತ್ರ ನಡೆಸಿದ್ದಾರೆ ಎಂದು ಶಂಕರ ಮುನವಳ್ಳಿ ಆರೋಪಿಸಿದ್ದಾರೆ

ರಮೇಶ ಜಾರಕಿಹೊಳಿ ಜಿಲ್ಲಾ ಮಂತ್ರಿ ಆದಾಗಿನಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಬಲಾಡ್ಯವಾಗುತ್ತಿದೆ ಐಟಿ ದಾಳಿ ನಡೆದ ಬಳಿಕ ರಮೇಶ ಜಾರಕಿಹೊಳಿ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಲಾಗುತ್ತಿದೆ ಎಂದು ಜಿಲ್ಲೆಯಲ್ಲಿ ಸುದ್ಧಿ ಹರಡಿದ್ದು ಇದರಲ್ಲಿ ಸತೀಶ ಜಾರಕಿಹೊಳಿ ಅವರ ಕೈವಾಡವಿದೆ ಎಂದು ಶಂಕರ ಮುನವಳ್ಳಿ ಗಂಭೀರ ಆರೋಪ ಮಾಡಿದ್ದಾರೆ

ರಮೇಶ ಜಾರಕಿಹೊಳಿ ಅವರ ನಿವಾಸದ ಮೇಲೆ ಐಟಿ ದಾಳಿ ನಡೆದಿದೆ ಈ ಕುರಿತು ರಮೇಶ ಜಾರಕಿಹೊಳಿ ಅವರು ಚಾಟರ್ಡ ಅಕೌಂಟೆಂಟ್ ಮೂಲಕ ಲೆಕ್ಕ ಕೊಡ್ತಾರೆ ಐಟಿ ದಾಳಿ ನಡೆದ ತಕ್ಷಣ ಸಚಿವರ ರಾಜಿನಾಮೆ ಕೇಳುವದು ಸರಿ ಅಲ್ಲ ಸಚವರೇನು ಸರ್ಕಾರಿ ಯೋಜನೆಗಳ ಹಣವನ್ನು ಮನೆಯಲ್ಲಿ ಇಟ್ಡಿರಲಿಲ್ಲ ರಮೇಶ ಜಾರಕಿಹೊಳಿ ಅವರ ಹಲವಾರು ಉದ್ಯಮಗಳಿವೆ ಜಾರಕಿಹೊಳಿ ಕುಟುಂಬ ಶ್ರೀಮಂತ ಕುಟುಂಬ ಎನ್ನುವದು ಇಡೀ ರಾಜ್ಯಕ್ಕೆ ಗೊತ್ತಿದೆ ಐಟಿ ದಾಳಿ ನಡೆದಿದೆ ಎಂದು ರಮೇಶ ಜಾರಕಿಹೊಳಿ ಅವರನ್ನು ಸಚಿವ ಸಂಪುಟದಿಂದ ಕೈಬಿಡಬಾರದು ಎಂದು ಶಂಕರ ಮುನವಳ್ಳಿ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ

 

Check Also

ಅವರು ಶುರು ಮಾಡಿದ್ದಾರೆ.ನೀವೂ ಅದನ್ನೇ ಮಾಡೋದು ಒಳ್ಳೆಯದು…!!!

ಬೆಂಗಳೂರು-ಕನ್ನಡ ಉಳಿಯಬೇಕು ಬೆಳೆಯಬೇಕು,ಡಾಕ್ಟರ್ ಬರೆದಿದ್ದು ರೋಗಿಗೆ ತಿಳಿಯಬೇಕು ತಪಾಸಣೆ ಮಾಡಿದ ಬಳಿಕ ಡಾಕ್ಟರ್ ಸಾಹೇಬ್ರು ಔಷಧಿ ಬರೆದು ಕೊಡ್ತಾರೆ ಅದು …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.