ಬೆಳಗಾವಿ-ರಾಜಕಾಣದಲ್ಲಿ ಯಾರು ? ಯಾವತ್ತು ಝಿರೋ ಆಗ್ತಾರೋ ? ಕ್ಷಣಾರ್ಧದಲ್ಲಿ ಯಾರು ಹಿರೋ ಆಗ್ತಾರೋ ಅನ್ನೋದನ್ನು ಉಹೆ ಮಾಡಲೂ ಸಾದ್ಯವಿಲ್ಲ.ಇಲ್ಲಿ ನಡೆಯುವ ಬೆಳವಣಿಗೆಗಳು,ನಿರ್ಣಯಗಳು ತರ್ಕಕ್ಕೆ ನಿಲುಕಲು ಸಾಧ್ಯವೇ ಇಲ್ಲ.
ಸುರೇಶ ಅಂಗಡಿ ಅವರ ಅಗಲಿಕೆಯ ನಂತರ ಅವರ ಪುತ್ರಿ ಶ್ರದ್ಧಾ ಅವರ ವಾರಸುದಾರ ಆಗ್ತಾರೆ ಅನ್ನೋದು ಎಲ್ಲರ ಲೆಕ್ಕಾಚಾರವಿತ್ತು ಆದ್ರೆ ನಿರ್ಧಾರ ಆಗಿದ್ದೆ ಬೇರೆ,ದಿಸುರೇಶ ಅಂಗಡಿ ಅವರ ಪತ್ನಿ ಮಂಗಲಾ ಅಂಗಡಿ ಅವರಿಗೆ ಟಿಕೆಟ್ ಸಿಕ್ತು ಉಪ ಚುನಾವಣೆಯಲ್ಲಿ ಅವರೇ ಗೆಲುವು ಸಾಧಿಸಿದರು.
ದಿ.ಸುರೇಶ್ ಅಂಗಡಿ ಅವರ ಪುತ್ರಿ ಶ್ರದ್ಧಾ ಕಳೆದ ಬಾರಿ ಉಪ ಚುನಾವಣೆಯಲ್ಲಿ ಟಿಕೆಟ್ ಸಿಗಲಿಲ್ಲ ಅಂತಾ ಸುಮ್ಮನೇ ಕುಳಿತುಕೊಳ್ಳಲಿಲ್ಲ,ತಾಯಿ ಮಂಗಲಾ ಅಂಗಡಿ ಅವರನ್ನು ಗೆಲ್ಲಿಸಿ ಈಗ ತಮ್ಮ ರಾಜಕೀಯ ಭವಿಷ್ಯ ರೂಪಿಸಿಕೊಳ್ಳುವತ್ತ ಕ್ರಿಯಾಶೀಲ ರಾಗಿದ್ದಾರೆ.ಅವರ ರಾಜಕೀಯ ನಡೆ ನಿಗೂಢವಾಗಿದ್ದರೂ,ಅದು ಗುಟ್ಟಾಗಿ ಉಳಿದಿಲ್ಲ.
ಶ್ರದ್ದಾ ಶೆಟ್ಟರ್ ಈಗ ಬೆಳಗಾವಿ ಗ್ರಾಮೀಣ ಕ್ಷೇತ್ರದತ್ತ ಮುಖ ಮಾಡಿದ್ದಾರೆ.ಈ ಕ್ಷೇತ್ರದ ಬಿಜೆಪಿ ನಾಯಕರನ್ನು,ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿರುವ ಅವರು ರಾಜ್ಯ,ಮತ್ತು ರಾಷ್ಟ್ರೀಯ ಬಿಜೆಪಿ ನಾಯಕರ ಜೊತೆ ನಿರಂತರ ಸಂಪರ್ಕದಲ್ಲಿದ್ದು,ಬಿಜೆಪಿ ಪಕ್ಷದಲ್ಲಿ ಪ್ರಚಾರ ಇಲ್ಲದೇ ಸಂಘಟನೆ ಮಾಡುತ್ತಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಗಲು ಶ್ರದ್ಧಾ ಶೆಟ್ಟರ್ ಭರ್ಜರಿ ತಯಾರಿ ನಡೆಸಿದ್ದು,ಈ ವಿಚಾರ ಪ್ರಚಾರ ಪಡೆಯದಿದ್ದರೂ ವ್ಯವಸ್ಥಿತವಾಗಿ ನಡೆದಿರುವುದು ಸತ್ಯ.ಇದಕ್ಕೆ ಜಗದೀಶ್ ಶೆಟ್ಟರ್ ಅವರೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಗೊತ್ತಾಗಿದೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಈ ಬಾರಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಲು ಮಾಜಿ ಶಾಸಕ ಸಂಜಯ ಪಾಟೀಲ,ಮತ್ತು ಧನಂಜಯ ಜಾಧವ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು,ಸಂಜಯ- ಧನಂಜಯ ನಡುವೆ ನಡೆಯುತ್ತಿರುವ ತಿಕ್ಕಾಟದ ಲಾಭ ಶ್ರದ್ದಾ ಶೆಟ್ಟರ್ ಗೆ ಸಿಗುತ್ರದೆ. ಇಬ್ಬರ ಜಗಳ ಮೂರನೇಯ ವ್ಯಕ್ತಿಗೆ ಲಾಭ ಎನ್ನುವಂತೆ ಈಬಾರಿ ಶ್ರದ್ದೆಯ ನಡೆ ಗುರಿ ಮುಟ್ಟುತ್ತದೆ. ಎನ್ನುವ ಚರ್ಚೆ ಜೋರಾಗಿಯೇ ನಡೆದಿದೆ.
ಬೆಳಗಾವಿ ಗ್ರಾಮೀಣದಲ್ಲಿ ಬಿಜೆಪಿ ಗೆಲ್ಲಲು ಈಗಿನಿಂದಲೇ ತಂತ್ರ ರೂಪಿಸುತ್ತಿದೆ.ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿದ್ದು, ಯಂಗ್ ಐಕಾನ್ ಕಣಕ್ಕಿಳಿಸಲು ಸದ್ದಿಲ್ಲದೇ ಸಿದ್ಧಾಂತದ ಸಿದ್ಧತೆ ಮಾಡಿಕೊಳ್ಳುತ್ರಿದ್ದಾರೆ.