Breaking News
Home / Breaking News / ಅರ್ಬಾಜ್ ಕೊಲೆಗೆ ಸುಪಾರಿ,ಆರೋಪಿಯಾದ ಬೇಪಾರಿ….!!

ಅರ್ಬಾಜ್ ಕೊಲೆಗೆ ಸುಪಾರಿ,ಆರೋಪಿಯಾದ ಬೇಪಾರಿ….!!

ಬೆಳಗಾವಿ(8)- ಅನ್ಯ ಕೋಮಿನ ಯುವಕನೊಂದಿಗೆ ಮಗಳು ಪ್ರೀತಿ ಮಾಡಿದ ಕಾರಣ ಯುವಕನ ಹತ್ಯೆಗೆ ಸುಫಾರಿ‌ ಕೊಟ್ಟ ಯುವತಿಯ ಪೋಷಕರು ಅಂದರ್.ಆಗಿದ್ದಾರೆ.

ಖಾನಾಪುರ ಪಟ್ಟಣದ ಅರ್ಬಾಜ್ ಎಂಬ ಯುವಕನ ಬರ್ಬರ್ ಕೊಲೆ ಪ್ರಜರಣ ರಹಸ್ಯವನ್ನು ಬೆಳಗಾವಿ ಜಿಲ್ಲಾ ಪೊಲೀಸರು. ಭೇದಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ‌ಖಾನಾಪುರ ಪಟ್ಟಣದಲ್ಲಿ ಸೆಪ್ಟೆಂಬರ್ 28 ರಂದು ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧ 10 ಜನ ಆರೋಪಿಗಳನ್ನು ಬಂಧಿಸಲಾಗಿದೆ.ಅರ್ಬಾಜ್ ಹಾಗೂ ಶ್ವೇತಾ ಇಬ್ಬರು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ವಿಚಾರವಾಗಿ ಶ್ವೇತಾ ಪೋಷಕರಿಗೆ ದೊಡ್ಡ ಸಮಸ್ಯೆ ಉಂಟು ಮಾಡಿತ್ತು. ಮಗಳನ್ನು ಅರ್ಬಾಜ್ ನಿಂದ ದೂರ ಮಾಡಿ ಬೇರೆ ಮದುವೆ ಮಾಡಲು ನಿರ್ಧರಿಸಿದ್ದರು. ಅರ್ಬಾಜ್ ನಿಂದ ಮಗಳನ್ನು ದೂರ ಮಾಡಲು ತಂದೆ ಈರಪ್ಪ ಕಂಬಾರ್, ತಾಯಿ ಸುಶೀಲಾ ಕಂಬಾರ್ ಶ್ರೀರಾಮ ಸೇನೆ ಹಿಂದುಸ್ತಾನ್ ಸಂಘಟನೆಯ ತಾಲೂಕು ಅಧ್ಯಕ್ಷ ಪುಂಡಲಿಕ್ ಮಹರಾಜ್ ಹಾಗೂ ಬಿರ್ಜೆ ಮೊರೆ ಹೋದಿದ್ದರು‌. ಈ ಇಬ್ಬರು ಅರ್ಬಾಜ್ ಗೆ ಬೆದರಿಕೆ ಹಾಕಿದ್ದರು. ಸೆಪ್ಟೆಂಬರ್26 ರಂದು ಪ್ರೀತಿ, ಪ್ರೇಮ ಸಂಬಂಧ ರಾಜೀ ಪಂಚಾಯತಿ ನಡೆದಿತ್ತು‌.

ಬಳಿಕವು ಅರ್ಬಾಜ್ ಹಾಗೂ ಶ್ವೇತಾ ಫೋನ್ ನಲ್ಲಿ ಸಂಪರ್ಕದಲ್ಲಿ ಇದ್ದರು. ಸೆಪ್ಟೆಂಬರ್28 ರಂದು ಅರ್ಬಾಜ್ ನನ್ನು ಖಾನಾಪುರ ಕರೆಸಿದ ಆರೋಪಿಗಳು, ಅರ್ಬಾಜ್ ಮೇಲೆ ಮಾರಣಾಂತಿಕ ಮೇಲೆ ಹಲ್ಲೆ ಮಾಡಿದ್ದರು. ರುಂಡ, ಕೈ ಕಾಲು ಕಟ್ ಮಾಡಿದ್ದ ಭೀಕರವಾಗಿ ಹತ್ಯೆ ಮಾಡಿದ್ದರು. ಪ್ರಕರಣದ ದಿಕ್ಕು ತಪ್ಪಿಸಲು ಅರ್ಬಾಜ್ ಶವ ರೈಲು ಹಳಿ ಮೇಲೆ ಬಿಸಾಡಿದ್ದರು‌. ಈ ಬಗ್ಗೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಮೊದಲು ಪ್ರಕರಣ ದಾಖಲಾಗಿತ್ತು.ರೈಲ್ವೆ ಪೊಲೀಸರಿಂದ ಅಕ್ಟೋಬರ್4 ರಂದು ಖಾನಾಪುರ ಪೊಲೀಸ್ ಠಾಣೆಗೆ ಕೇಸ್ ವರ್ಗ ಆಯಿತು. ಪ್ರಕರಣ ಭೇಧಿಸಲು ಬೈಲಹೊಂಗಲ ಡಿವೈಎಸ್ಪಿ ನೇತೃತ್ವದಲ್ಲಿ ವಿಶೇಷ ತಂಡ‌ ರಚನೆಯನ್ನು ಎಸ್ಪಿ ಲಕ್ಷ್ಮಣ ನಿಂಬರಗಿ ಮಾಡಿದ್ದರು.

ಖಾನಾಪುರ ಪೊಲೀಸರು ಪುಂಡಲೀಕ ಮುತಗೇಕರ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಕೊಲೆಯ ಸಂಚು ಬಯಲಾಗಿದೆ. ಶ್ವೇತಾ ತಂದೆ ಈರಪ್ಪ ಕುಂಬಾರ್, ಸುಶೀಲ್ ಕುಂಬಾರ್, ಗಣಪತಿ ಗೊಂದಳಿ, ಕುತುಬುದ್ದೀನ್ ಬೇಪಾರಿ, ಮಾರುತಿ ಗೊಂದಳಿ,‌ ಪ್ರಶಾಂತ ಪಾಟೀಲ್, ಮಂಜು ಗೊಂದಳಿ, ಪ್ರವೀಣ್ ಪೂಜಾರಿ, ಶ್ರೀಧರ ಡೋಣಿ ಸಂಚು ರೂಪಿಸಿದ ಆರೋಪಿಗಳು.
ಅರ್ಬಾಜ್ ಜೊತೆಗಿನ ಪ್ರೇಮಕ್ಕೆ ಶ್ವೇತಾ ಪೋಷಕರ ತೀವ್ರ ವಿರೋಧ ಇತ್ತು. ತಂದೆ ಈರಪ್ಪ, ತಾಯಿ ಸುಶೀಲ್ ಇಬ್ಬರು ಸೇರಿ ಅರ್ಬಾಜ್ ಕೊಲೆಗೆ ಸಂಚು ರೂಪಿಸಿದ್ದು ಬಯಲಾಗಿದೆ‌. ಪುಂಡಲೀಕ್ ಮಹಾರಾಜ್ ಗೆ ಅರ್ಬಾಜ್ ಹತ್ಯೆಗೆ ಸುಫಾರಿ‌ ನೀಡಿದ್ದರು‌. ಸೆಪ್ಟೆಂಬರ್28 ಬೆಳಗಾವಿಯಿಂದ ಖಾನಾಪುರಕ್ಕೆ ಕರೆಸಿ ಹತ್ಯೆ‌ ಮಾಡಿದ್ದರು. ಅರ್ಬಾಜ್ ಮಾತುಕತೆಗೆ ಕರೆಸಿದ್ದು ಕುತುಬುದ್ದೀನ್ ಬೇಪಾರಿ ಸಹ ಬಂಧಿಸಲಾಗಿದೆ. ಆರೋಪಿಗಳ ಬಂಧನದ ಬಗ್ಗೆ ಎಸ್ಪಿ ಲಕ್ಷ್ಮಣ ‌ನಿಂಬರಗಿ‌ ಮಾಹಿತಿ ನೀಡಿದ್ದಾರೆ.

ಅರ್ಬಾಜ್ ಸುಪಾರಿ ಕೊಲೆಯಲ್ಲಿ ಕುತಬುದ್ದೀನ್ ಬೇಪಾರಿ ಎಂಬಾತ ಆರೋಪಿಯಾಗಿದ್ದು, ಕೊಲೆಗೆ ಶ್ರೀರಾಮ ಸೇನಾ ಹಿಂದೂಸ್ತಾನ ಖಾನಾಪೂರ ತಾಲ್ಲೂಕಾ ಅದ್ಯಕ್ಷ ಪುಂಡಲೀಕ್ ಅರ್ಬಾಜ್ ಕೊಲೆಗೆ ಸ್ಕೇಚ್ ಹಾಕಿ,ಯುವತಿಯ ಪೋಷಕರಿಗೆ ಪ್ರಚೋದಿಸಿದ್ದ ಎಂದು ಗೊತ್ತಾಗಿದೆ.

Check Also

ಬೆಳಗಾವಿಯ, ಗೋದಾಮಿನಲ್ಲಿದ್ದ 900 ಚೀಲ ಗೊಬ್ಬರ ಸ್ವಾಹಾ…!!

ಬೆಳಗಾವಿ-ಗೋದಾಮಿನಲ್ಲಿದ್ದ 50 ಕೆಜಿ ತೂಕದ 900 ಚೀಲ ರಸಗೊಬ್ಬರ ಕಳ್ಳತನ ಮಾಡಿದ ಘಟನೆ,ಬೆಳಗಾವಿ ತಾಲೂಕಿನ ದೇಸೂರು ರೇಲ್ವೆ ನಿಲ್ದಾಣ ಬಳಿ …

Leave a Reply

Your email address will not be published. Required fields are marked *