Breaking News

ರಸ್ತೆ ಅಪಘಾತದಲ್ಲಿ ಸಿದ್ದು ನ್ಯಾಮಗೌಡ ಅಕಾಲಿಕ ನಿಧನ

ಬೆಳಗಾವಿ- ಲೋಕಾಪೂರ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 69 ವರ್ಷ ವಯಸ್ಸಿನ

ಜಮಖಂಡಿ MLA ಸಿದ್ದು ನ್ಯಾಮಗೌಡ ನಿಧನರಾಗಿದ್ದಾರೆ

ಬೆಳಗಿನ ಜಾವ ಇನ್ನೋವಾ ಕಾರು ರಸ್ತೆ ಬದಿಯ ಚರಂಡಿ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಸಿದ್ದು ನ್ಯಾಮಗೌಡ ಸ್ಥಳದಲ್ಲೇ ನಿಧನರಾಗಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ

69 ವರ್ಷದ ಜಮಖಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ನಿಧನರಾಗಿದ್ದಾರೆ
2013 ಹಾಗೂ 2018ರಲ್ಲಿ ಜಮಖಂಡಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಅವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರನ್ನು ಸೋಲಿಸಿದ್ದ ಸಿದ್ದು ನ್ಯಾಮಗೌಡ – 1991ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಕೇಂದ್ರ ಕಲ್ಲಿದ್ದಲು ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು

ಸಿದ್ದು ನ್ಯಾಮಗೌಡ – ಒಮ್ಮೆ ವಿಧಾನ ಪರಿಷತ್ ಸದಸ್ಯರಾಗಿದ್ದ ಸಿದ್ದು – ಪಿ.ವಿ.ನರಸಿಂಹ ರಾವ್ ಸಂಪುಟದಲ್ಲಿ ಕಲ್ಲಿದ್ದಲು ಸಚಿವರಾಗಿ ಸೇವೆ ಮಾಡಿದ್ದರು

ಕೃಷ್ಣ ತೀರದಲ್ಲಿ ರೈತ ಸಂಘದ ಮೂಲಕ ರೈತ ಪರ ಕಾರ್ಯಕ್ಕೆ ಖ್ಯಾತಿ ಪಡೆದಿದ್ದ ಅವರು ರೈತರ ಶ್ರಮ ಹಾಗು ಆರ್ಥಿಕ ನೆರವಿನಿಂದ ಎರಡು ಬ್ಯಾರೇಜ್ ನಿರ್ಮಾಣ ಮಾಡಿದ್ದರು ಜಮಖಂಡಿ ಹಾಗೂ ಅಥಣಿ ತಾಲೂಕಿಗೆ ನೀರಿನ ಸೆಲೆಯಾದ ಬ್ಯಾರೇಜ್ ಗಳು – ರೈತ ಪರ ಕಾಳಜಿ ಗಮನಿಸಿಯೇ ಎಂಪಿಯಾಗಿ ಆಯ್ಕೆ ಮಾಡಿದ್ದ ಜನರು – ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರನ್ನೇ ಸೋಲಿಸಿದ್ದ ಹೆಗ್ಗಳಿಕೆ – ಹೆಗಡೆ ವಿರುದ್ಧ ಸಿದ್ದು ನ್ಯಾಮಗೌಡ ಕಣಕ್ಕಿಳಿಸಿದ್ದರು

ಆಗಿನ CM ಬಂಗಾರಪ್ಪ – ರೈತ ನಾಯಕ ಎಂದು ಗುರುತಿಸಿ ಟಿಕೆಟ್ ಕೊಡಿಸಿದ್ದರು ಸಮ್ಮಿಶ್ರ ಸರ್ಕಾರದಲ್ಲಿ ಈ ಬಾರಿ ಸಚಿವರಾಗುವ ಸಾಧ್ಯತೆ ಇತ್ತು – ಆದರೆ ಕಾರು ಅಪಘಾತದಲ್ಲಿ ಅಕಾಲಿಕವಾಗಿ ನಿಧನರಾದ ಸಿದ್ದು ನ್ಯಾಮಗೌಡ

ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ನಿಧನ ಹಿನ್ನೆಲೆ ಬಿಜೆಪಿ ಪ್ರತಿಭಟನೆ ಹಿಂಪಡೆದ ಬಿಜೆಪಿ ಮುಖಂಡರು

ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಬಾಗಲಕೋಟೆ ಜಿಲೆಯಲ್ಲಿ ಸ್ಥಳೀಯವಾಗಿ ಆಯ್ಕೆಯಾದ ಏಕೈಕ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ

ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ವಿರುದ್ದ ಜಯ ಸಾಧಿಸಿದ್ದರು.

49245 ಮತ ಪಡೆದಿದ್ದರು

-2795 ಅಂತರದಿಂದ ಗೆದ್ದಿದ್ದರು

ಸಿದ್ದು ನ್ಯಾಮಗೌಡ ಪ್ರಭಲ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು

ಗಾಣಿಗ ಸಮುದಾಯದ ಪ್ರಮುಖ ಮುಖಂಡ
ಕೋಟಾದಡಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು.

ಕಳೆದ ಬಾರಿ ಸಚಿವ ಸ್ಥಾನದಿಂದ ವಂಚಿತರಾಗಿದ್ದರು

ಈ ಬಾರಿ ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದ ನ್ಯಾಮಗೌಡ

ಕಾಂಗ್ರೆಸ್ ದೆಹಲಿ ಹೈಕಮಾಂಡ್ ನಲ್ಲಿ ಉತ್ತ‌ಮ ಬಾಂದವ್ಯ ಕಾಯ್ದುಕೊಂಡಿದ್ದ ಸಿದ್ದು‌ನ್ಯಾಮಗೌಡ
ಶಾಸಕ ಸಿದ್ದು ನ್ಯಾಮಗೌಡ ಮರಣೋತ್ತರ ಪರೀಕ್ಷೆ ಮುಕ್ತಾಯ

ಬಾಗಲಕೋಟೆ ಜಿಲ್ಲಾಸ್ಪತ್ರೆ ಶವಾಗಾರದಲ್ಲಿ ನಡೆದ ಮರಣೋತ್ತರ ಪರೀಕ್ಷೆ

ಬಳಿಕ ಪೊಲೊ ಕ್ರೀಡಾಂಗಣದಲ್ಲಿ ಪಾರ್ಥೀವ ಶರೀರ
೨೦೧೮ ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಬಾಗಲಕೋಟೆ ಜಿಲೆಯಲ್ಲಿ ಸ್ಥಳೀಯವಾಗಿ ಆಯ್ಕೆಯಾದ ಏಕೈಕ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ
ಸಿದ್ದು ನ್ಯಾಮಗೌಡ ಅವರಿಗೆ ಐದು ಜನ ಮಕ್ಕಳು

ಇಬ್ಬರು ಪುತ್ರರು,ಮೂವರು ಪುತ್ರಿಯರು
ಮೂರು ಜನ ಹೆಣ್ಣು ಮಕ್ಕಳು
ಇಬ್ಬರ ಗಂಡು ಮಕ್ಕಳು

ಸಿಂಗಾಪುರ್, ಶ್ವೇತಾ
ಶೋಭಾ ಅಮೇರಿಕಾ
ಬೆಂಗಳೂರು, ಸುಜಾತಾ

ಅಮೆರಿಕ, ಬೆಂಗಳೂರು ನವರು ಬರಬೇಕು

ಅಳಿಯಂದಿರು, ಮಕ್ಕಳು ಆಗಮಿಸುತ್ತಿದ್ದಾರೆ
ಸಿದ್ದು ನ್ಯಾಮಗೌಡ ಕುಟುಂಬದ ವಿವರ:

ಮೂರು ಜನ ಹೆಣ್ಣು ಮಕ್ಕಳು
ಇಬ್ಬರು ಗಂಡು ಮಕ್ಕಳು

ಆನಂದ ನ್ಯಾಮಗೌಡ, ಬಸವರಾಜ ನ್ಯಾಮಗೌಡ ಪುತ್ರರು

ಸಿಂಗಾಪುರ,ಅಮೇರಿಕಾದಲ್ಲಿ ನೆಲೆಸಿರುವ ಹೆಣ್ಣು ಮಕ್ಕಳು

ಶ್ವೇತಾ ,ಸುಜಾತಾ,ಶೋಭಾ ಹೆಣ್ಣು ಮಕ್ಕಳು
ಶೋಭಾ ಅಮೇರಿಕಾದಿಂದ ಬರಬೇಕಾದ ಮಗಳು

ಬೆಂಗಳೂರಿನಿಂದ ಜಮಖಂಡಿ ನಗರಕ್ಕೆ ಬರುತ್ತಿರುವ ಪುತ್ರಿ ಸುಜಾತಾ

ವಿದೇಶದಿಂದ ಬರುತ್ತಿರುವ ಅಳಿಯಂದಿರು

Check Also

ಜೇಬಿನಲ್ಲಿ ಪಟಾಕಿ ಸಿಡಿದು ಯುವಕನಿಗೆ ಗಂಭೀರ ಗಾಯ…..!!

ಬೆಳಗಾವಿ-ಬೆಳಗಾವಿಯಲ್ಲಿ ಗಣೇಶ ಚತುರ್ಥಿ ಹಿನ್ನಲ ಪಟಾಕಿ ಸಿಡಿದು ಯುವಕನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆಬೆಳಗಾವಿ ನಗರದಲ್ಲಿ ನಡೆದಿದೆ. ಬೆಳಗಾವಿಯರಾಮನಗರದಲ್ಲಿ ಈ ಘಟನೆ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.