Breaking News

ಗ್ರಹಣದ ವೇಳೆ ಬೆಳಗಾವಿ ಜಿಲ್ಲೆಯ ಮಂದಿರಗಳಲ್ಲಿ ಏನೇನು ನಡೆಯುತ್ತೆ ಗೊತ್ತಾ..??

ಬೆಳಗಾವಿ-ದೀಪಾವಳಿ ಅಮಾವಾಸ್ಯೆಯಂದೇ ಖಂಡಗ್ರಾಸ ಸೂರ್ಯಗ್ರಹಣ ಬಂದಿದೆ.ಬೆಳಗಾವಿಯ ಬಹುತೇಕ ದೇವಸ್ಥಾನಗಳಲ್ಲಿ ಗ್ರಹಣ ವೇಳೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.ಬೆಳಗಾವಿ ನಗರದಲ್ಲಿ ಗ್ರಹಣ ಆರಂಭ ಸಮಯ ಸಂಜೆ 5 ಗಂಟೆ 11 ನಿಮಿಷ,ಗ್ರಹಣ ಮಧ್ಯಕಾಲ ಸಂಜೆ 5 ಗಂಟೆ 50 ನಿಮಿಷ, ಗ್ರಹಣ ಮೋಕ್ಷ ಕಾಲ ಸಂಜೆ 6 ಗಂಟೆ 28 ನಿಮಿಷ,ಇದೆ.

ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದಲ್ಲಿ ಎಂದಿನಂತೆ ಪೂಜಾ ಕೈಂಕರ್ಯ ನಡೆಯಿತ್ತಿದೆ.ದಕ್ಷಿಣಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಕಪಿಲೇಶ್ವರ ದೇವಸ್ಥಾನದಲ್ಲಿ ಶಿವಲಿಂಗಕ್ಕೆ ರುದ್ರಾಭಿಷೇಕ ಮಾಡಲಾಗುತ್ತಿದೆ.ಸಂಜೆ 4 ಗಂಟೆಯಿಂದ 6.30ರವರೆಗೆ ಮಹಾಮೃತ್ಯುಂಜಯ ಜಪ ನಡೆಯುತ್ತಿದೆ.ಸೂರ್ಯಗ್ರಹಣ ವೇಳೆ ಬಿಲ್ವಪತ್ರೆಗಳಿಂದ ಶಿವಲಿಂಗವನ್ನು ಅರ್ಚಕರು ಸಂಪೂರ್ಣವಾಗಿ ಮುಚ್ಚಲಿದ್ದಾರೆ.

ಗ್ರಹಣ ಸಮಯದಲ್ಲಿ ಭಕ್ತರಿಗೆ ದೇಗುಲ ಪ್ರವೇಶಕ್ಕೆ ಯಾವುದೇ ನಿರ್ಬಂಧ ಇಲ್ಲ,ದೇವಸ್ಥಾನಕ್ಕೆ ಭಕ್ತರು ಆಗಮಿಸಿ ದರ್ಶನ ಪಡೆದು, ಮಹಾಮೃತ್ಯುಂಜಯ ಜಪದಲ್ಲಿ ಭಾಗಿಯಾಗಲು ಅವಕಾಶ ಮಾಡಿಕೊಡಲಾಗಿದೆ.ಗ್ರಹಣ ಸಮಾಪ್ತಿ ಬಳಿಕ ದೇವಸ್ಥಾನ ಶುಚಿಗೊಳಿಸಿ ವಿಶೇಷ ಪೂಜೆ ಮಾಡಲಾಗುತ್ತಿದೆ.

ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಯಥಾಪ್ರಕಾರ ಪೂಜೆ ನಡೆಯುತ್ತಿದೆ.ಸವದತ್ತಿಯಲ್ಲಿ ಗ್ರಹಣ ಆರಂಭ ಸಮಯ ಸಂಜೆ 4 ಗಂಟೆ 24 ನಿಮಿಷ,ಗ್ರಹಣ ಮಧ್ಯಕಾಲ – ಸಂಜೆ 5.27ಕ್ಕೆ, ಗ್ರಹಣ ಅಂತ್ಯ – ಸಂಜೆ 6.25ಕ್ಕೆ ಇದೆ,ಗ್ರಹಣ ಸಮಯದಲ್ಲಿ ಸವದತ್ತಿ ಯಲ್ಲಮ್ಮದೇವಿ ದೇವಸ್ಥಾನದಲ್ಲಿ ದರ್ಶನಕ್ಕೆ ಅವಕಾಶ ಇದೆ.ನಿತ್ಯ ಸಂಜೆ 4.30ಕ್ಕೆ ನೆರವೇರಬೇಕಿದ್ದ ಪೂಜೆ ಗ್ರಹಣ ಸಮಾಪ್ತಿ ಬಳಿಕ ನೆರವೇರಿಸಲು ನಿರ್ಧಾರ ಮಾಡಲಾಗಿದೆ.ಸಂಜೆ 6.27ರ ಬಳಿಕ ಇಡೀ ದೇವಸ್ಥಾನ ಶುಚಿಗೊಳಿಸಿ ಯಲ್ಲಮ್ಮದೇವಿಗೆ ವಿಶೇಷ ಪೂಜೆ ಮಾಡಲಾಗುತ್ತಿದೆ.

ಚಿಕ್ಕೋಡಿಯಲ್ಲಿ ಗ್ರಹಣ ಆರಂಭ ಸಮಯ ಸಂಜೆ 4 ಗಂಟೆ 49 ನಿಮಿಷ,ಗ್ರಹಣ ಮಧ್ಯಕಾಲ – ಸಂಜೆ 5.43, ಗ್ರಹಣ ಮೋಕ್ಷ ಕಾಲ – ಸಂಜೆ 6.07,ಚಿಕ್ಕೋಡಿಯ ಮಹಾದೇವ ಮಂದಿರವೂ ಗ್ರಹಣ ವೇಳೆ ಓಪನ್ ಇರುತ್ತದೆ‌.ಗ್ರಹಣ ಸಮಾಪ್ತಿ ಬಳಿಕ ದೇವಸ್ಥಾನ ಶುಚಿಗೊಳಿಸಿ ವಿಶೇಷ ಪೂಜೆ ಮಾಡಲಾಗುತ್ತದೆ.ಅಥಣಿ ತಾಲೂಕು ಕೊಕಟನೂರು ಯಲ್ಲಮ್ಮದೇವಿ ದೇವಸ್ಥಾನದಲ್ಲೂ ದರ್ಶನಕ್ಕೆ ಯಾವುದೇ ನಿರ್ಬಂಧವಿಲ್ಲ,ಗ್ರಹಣ ಸಮಾಪ್ತಿ ಬಳಿಕ ಕೃಷ್ಣಾ ನದಿ ನೀರು ತಂದು ದೇವಸ್ಥಾನ ಶುಚಿಗೊಳಿಸಿ ವಿಶೇಷ ಪೂಜೆ ಮಾಡುತ್ತಾರೆಚಿಂಚಲಿ ಮಾಯಕ್ಕದೇವಿ ದೇವಸ್ಥಾನದಲ್ಲಿ ಗ್ರಹಣ ವೇಳೆ ಯಾವುದೇ ಆಚರಣೆ ಇರಲ್ಲ,ಚಿಂಚಲಿ ಮಾಯಕ್ಕದೇವಿ ದೇವಸ್ಥಾನದಲ್ಲಿ ಎಂದಿನಂತೆ ಪೂಜಾ ಕೈಂಕರ್ಯ ನಡೆಯತ್ತದೆ.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *