Breaking News

ಕಟ್ಟಿಗೆ ಕಡಿಯುವಾಗ ಹೆಬ್ಬೆರಳು ಕಟ್….ಡಾ ರವಿ ಪಾಟೀಲರಿಂದ ಫಿಟ್…!!!

ಕಟ್ಟಿಗೆ ಕಡಿಯುವಾಗ ಹೆಬ್ಬೆರಳು ಕಟ್….ಡಾ ರವಿ ಪಾಟೀಲರಿಂದ ಫಿಟ್…!!!

ಬೆಳಗಾವಿ- ಅವಘಡದಲ್ಲಿ ,ಅಪಘಾತದಲ್ಲಿ ಕೈ ಕಾಲು ಅಥವಾ ಯಾವುದೇ ಅಂಗಾಗಳಿಗೆ ಪೆಟ್ಟು ಬಿದ್ದಾಗ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ದಾಖಲಾದ್ರೆ ಪೆಟ್ಟು ಬಿದ್ದ ಅಂಗಾಗಗಳನ್ನು ಫಿಟ್ ಮಾಡಲು ಸಾಧ್ಯ ಎಂದು ಬೆಳಗಾವಿ ಡಾ ರವಿ ಪಾಟೀಲ ಸಾಭೀತು ಮಾಡಿ ತೋರಿಸಿದ್ದಾರೆ.

ಶಾಲೆಗೆ ಹೋಗುವ ಅವಸರಸಲ್ಲಿ ಹೇಮಾ ಎಂಬ ಬಾಲಕಿ ಕಟ್ಟಿಗೆ ಕಡಿಯುವಾಗ ಹೆಬ್ಬರಳು ಕಟ್ ಆಗಿ ಸರಿಯಾದ ಸಮಯಕ್ಕೆ ವಿಜಯಾ ಆಸ್ಪತ್ರೆಯ ದಾಖಲಾದ ಈಕೆಯ ಬೆರಳನ್ನು ಜೋಡಿಸಲು ನಮ್ಮ ವೈದ್ಯಕೀಯ ತಂಡ ಯಶಸ್ವಿಯಾಗಿದೆ ಎಂದು ಡಾ.ರವಿ ಪಾಟೀಲ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸವದತ್ತಿ ತಾಲೂಕಿನ ಗೋರನಕೊಳ್ಳದ ಹೇಮಾ ಎಂಬ ಬಾಲಕಿ ಪ್ರಥಮ ಪಿಯುಸಿ ವಿಧ್ಯಾರ್ಥಿಯಾಗಿದ್ದಾಳೆ ಕಾಲೇಜಿಗೆ ಹೋಗುವ ತರಾತುರಿಯಲ್ಲಿ ಕೊಡಲಿಯಿಂದ ಕಟ್ಟಿಗೆ ಕಡೆಯುವಾಗ ಬೆರಳು ತುಂಡಾಗಿದೆ. ಕೂಡಲೇ ಮನೆಯವರು ಆಸ್ಪತ್ರೆಗೆ ಕರೆ ತಂದ ಹಿನ್ನೆಲೆಯಲ್ಲಿ ಯುವತಿಯ ಬೆರಳು ಜೋಡಿಸಲು ಸಹಾಯವಾಯಿತು.

ಯಾವುದೇ ಸಂದರ್ಭದಲ್ಲಿ ಇಂಥ ಅಪಘಾತವಾದ ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲು ಮಾಡಿದರೆ ಮನುಷ್ಯನ ಅಂಗಾಗಳನ್ನು ಜೋಡಿಸಬಹುದು ಎಂದು ಹೇಳಿದರು. ಬಸವರಾಜ ರೊಟ್ಟಿ ಡಾ. ಸಿಂಧು, ಡಾ. ಸುನೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *