Breaking News

ಬೆಳಗಾವಿಯಲ್ಲಿ ಹೊಸ ವರ್ಷಕ್ಕೆ ರೆಡಿಯಾಗಲಿದೆ ಹೊಸ ಕಮಾಂಡ್ ಸೆಂಟರ್….!!!

ಬೆಳಗಾವಿಯಲ್ಲಿ ಹೊಸ ವರ್ಷಕ್ಕೆ ರೆಡಿಯಾಗಲಿದೆ ಹೊಸ ಕಮಾಂಡ್ ಸೆಂಟರ್….!!!

ಬೆಳಗಾವಿ- ಹೊಸ ವರ್ಷದ ಆರಂಭದಲ್ಲೇ ಬೆಳಗಾವಿಯ ಸ್ಮಾರ್ಟ್ ಕಮಾಂಡ್ ಆ್ಯಂಡ್ ಕಂಟ್ರೋಲ್ ಸಿದ್ಧಗೊಳ್ಳಲಿದ್ದು ಬೆಳಗಾವಿ ಮಹಾನಗರ ಪಾಲಿಕೆಯ ವ್ಯೆವಸ್ಥೆಯ ಮೇಲೆ ಈ ಕಮಾಂಡ್ ಸೆಂಟರ್ ಹದ್ದಿನ ಕಣ್ಣಿಡಲಿದೆ.

ಬೆಳಗಾವಿಯ ವಿಶ್ವೇಶ್ವರಯ್ಯ ನಗರದಲ್ಲಿ ಸ್ಮಾರ್ಟ್ ಸಿಟಿಯ ಕಮಾಂಡ್ ಸೆಂಟರ್ ನಿರ್ಮಾಣ ಮಾಡಲಾಗುತ್ತಿದ್ದು ಈ ಕಮಾಂಡ್ ಸೆಂಟರ್ ಕಾಮಗಾರಿ ಎರಡು ವಾರದಲ್ಲಿ ಮುಗಿಯಲಿದೆ ಎಂದು ಸಾರ್ಟ್ ಸಿಟಿ ಎಂಡಿ ಶಶಿಧರ ಕುರೇರ ವಿಶ್ವಾಸ ವ್ತೆಕ್ತ ಪಡಿಸಿದ್ದಾರೆ.

ಏನಿದು ಕಮಾಂಡ್ ಸೆಂಟರ್,ಇದು ಏನೆಲ್ಲಾ ಕೆಲಸ ಮಾಡುತ್ತೆ..?

ಬೆಳಗಾವಿ ನಗರ ಈಗ ಸ್ಮಾರ್ಟ್ ಸಿಟಿಯಾಗುವತ್ತ ದಾಪುಗಾಲು ಹಾಕುತ್ತಿದೆ‌.ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಗರದ ಪ್ರಮುಖ ರಸ್ತೆಗಳನ್ನು ಸ್ಮಾರ್ಟ್ ಅಂದ್ರೆ ಕಾಂಕ್ರೀಟ್ ರಸ್ತೆಗಳನ್ನಾಗಿ ಅಭಿವೃದ್ಧಿ ಪಡಿಸಿ ಸ್ಮಾರ್ಟ್ ರಸ್ತೆಗಳನ್ನಾಗಿ ಮಾಡುವ ಕಾಮಗಾರಿಗಳು ಯುದ್ದೋಪಾದಿಯಲ್ಲಿ ನಡೆದಿವೆ ಈ ರಸ್ತೆಗಳಲ್ಲಿ ಸ್ಮಾರ್ಟ್ ವಿದ್ಯುತ್‌ ಪೋಲ್ ಗಳನ್ನು ,ಸ್ಮಾರ್ಟ್ ಎಲ್ ಇ ಡಿ ಲ್ಯಾಂಪ್ ಗಳನ್ನು ಅಳವಡಿಸಲಾಗುತ್ತಿದೆ ಸ್ಮಾರ್ಟ್ ಸಿಟಿಯ ಕಮಾಂಡ್ ಸೆಂಟರ್ ನಗರದಲ್ಲಿ ಅಳವಡಿಸಿರುವ ಎಲ್ಲ ಸಿಸಿ ಟಿವಿ ಕ್ಯಾಮರಾಗಳ ಮೂಲಕ ಯಾವ ಬೀದಿ ದೀಪ ಬಂದ್ ಆಗಿದೆ ಎಂದು ಕಮಾಂಡ್ ಸೆಂಟರ್ ಮೂಲಕ ಗುರುತಿಸಿ ತಕ್ಷಣ ಸಮಂಧಿಸಿದ ಅಧಿಕಾರಿಗಳಿಗೆ ಮೆಸ್ಸೇಜ್ ಮಾಡುತ್ತದೆ

ನಗರದಲ್ಲಿ ಯಾವ ಪ್ರದೇಶದಲ್ಲಿ ಸಮಯಕ್ಕೆ ಸರಿಯಾಗಿ ಕಸ ಸಂಗ್ರಹ ಆಗುತ್ತಿದೆ ಎಲ್ಲಿ ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ ,ನೀರು ಸರಬರಾಜು ಎಲ್ಲಿ ಯಾವಾಗ ? ಎಲ್ಲಿ ನೀರು ಸರಬರಾಜು ಆಗುತ್ತಿಲ್ಲ ಹೀಗೆ ಹತ್ತು ಹಲವಾರು ಮಹತ್ವದ ವಿಷಯಗಳನ್ನು ಈ ಕಮಾಂಡ್ ಸೆಂಟರ್ ಕಂಟ್ರೋಲ್ ಮಾಡಲಿದೆ .

ನಗರದ ಸ್ವಚ್ಛತೆ, ನೀರು ಸರಬರಾಜು,ಕಸ ವಿಲೇವಾರಿ,ಮಹಾನಗರ ಪಾಲಿಕೆಯ ಆನ್ ಲೈನ್ ವ್ಯೆವಸ್ಥೆಯನ್ನೂ ಕಮಾಂಡ್ ಸೆಂಟರ್ ಕಂಟ್ರೋಲ್ ಮಾಡುತ್ತದೆ.

ಮನೆ ಮನೆಗೆ ಹೋಗಿ ಕಸ ಸಂಗ್ರಹ ಮಾಡುವ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರ ಹತ್ತಿರ ಒಂದು ಚಿಕ್ಕ ಯಂತ್ರ ಕೊಡಲಾಗುತ್ತದೆ ನಗರದ ಎಲ್ಲ ಮನೆಗಳಿಗೆ ಈಗಾಗಲೇ ಒಂದು ಚಿಪ್ ಅಳವಡಿಸಲಾಗಿದೆ ಯಾವ ಪೌರ ಕಾರ್ಮಿಕ ಯಾವ ಮನೆಯ ಕಸ ಸಂಗ್ರಹ ಮಾಡಿದ ಎನ್ನುವ ಬಗ್ಗೆಯೂ ಈ ಕಮಾಂಡ್ ಸೆಂಟರ್ ನಿಗಾ ವಹಿಸಲಿದೆ

ಹೀಗೆ ಹತ್ತು ಹಲವಾರು ಸಾರ್ವಜನಿಕರ ಸೇವೆಯ ವ್ಯೆವಸ್ಥೆಯ ಮೇಲೆ ನಿಗಾ ಇಟ್ಟು ಅದನ್ನು ಅಚ್ವು ಕಟ್ಟಾಗಿ ಕಂಟ್ರೋಲ್ ಮಾಡಲಿದೆ

ಬೆಳಗಾವಿ ನಗರದಲ್ಲಿ ಒಂಬತ್ತು ಸ್ಮಾರ್ಟ್ ಪೋಲ್ ಗಳನ್ನು ನಿರ್ಮಿಸಲಾಗುತ್ತಿದ್ದು ಈ ಸ್ಮಾರ್ಟ್ ಪೋಲ್ ಗಳ ಮೇಲೆ ಬಿ ಎಸ್ ಎನ್ ಎಲ್ ಸೇರಿದಂತೆ ವಿವಿಧ ಖಾಸಗಿ ಕಂಪನಿಗಳ ನೆಟವರ್ಕ್ ಸುಧಾರಿಸುವ ಯಂತ್ರಗಳನ್ನು ಅಳವಡಿಸಲಾಗುತ್ತಿದ್ದು ನಗರದಲ್ಲಿ ಯಾವುದೇ ಕಂಪನಿಯ ನೆಟವರ್ಕ್ ವೀಕ್ ಆಗದಂತೆ ಈ ಸ್ಮಾರ್ಟ್ ಪೋಲ್ ಗಳು ಕಾರ್ಯ ನಿರ್ವಹಿಸುತ್ತದೆ ಈ ಸ್ಮಾರ್ಟ್ ಪೋಲ್ ಗಳನ್ನು ಕಮಾಂಡ್ ಸೆಂಟರ್ ಕಂಟ್ರೋಲ್ ಮಾಡುತ್ತದೆ‌.

ನಗರದ ಎಲ್ಲ ಸಿಗ್ನಲ್ ಗಳನ್ನು ಕಂಟ್ರೋಲ್ ಮಾಡಲಿರುವ ಕಮಾಂಡ್ ಸೆಂಟರ್ ಆಸ್ಪತ್ರೆಯಿಂದ ಅಂಬ್ಯುಲೆನ್ಸ ಹೊರಗಡೆ ಬಂದ ತಕ್ಷಣ ಅದು ಸಾಗುವ ದಾರಿಯಲ್ಲಿ ಝಿರೋ ಟ್ರಾಫಿಕ್ ಮಾಡುವದು,ಫೈರ್ ಬ್ರಿಗೇಡ್ ವಾಹನ ಹೋಗುವಾಗ ಝಿರೋ ಟ್ರಾಫಿಕ್ ಮಾಡುವದು ಸೇರಿದಂತೆ ಹತ್ತು ಹಲವಾರು ಮಹತ್ವದ ಕಾರ್ಯಗಳನ್ನು ನಿರ್ವಹಣೆ ಮಾಡಲಿದೆ ಈ ಕಮಾಂಡ್ ಸೆಂಟರ್

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಗರದಲ್ಲಿ ಹೈಟೆಕ್ ಬಸ್ ಶೆಲ್ಟರ್ ಗಳನ್ನು ಈ ಬಸ್ ಶೆಲ್ಟರ್ ಗಳಲ್ಲಿ ಡಿಜಿಟಲ್ ಡಿಸ್ ಪ್ಲೇ ಬೋರ್ಡ್ ಗಳನ್ನು ಅಳವಡಿಸಲಾಗುತ್ತಿದೆ ಬಸ್ ನಿಲ್ದಾಣ ದಿಂದ ಯಾವ ಬಸ್ ಯಾವ ಸಮಯಕ್ಕೆ ಬಿಡುತ್ತದೆ ಯಾವ ಬಸ್ ಶೆಲ್ಟರ್ ಗೆ ಯಾವಾಗ ತಲುಪುತ್ತದೆ ಎಂದು ಬಸ್ ಶೆಲ್ಟರ್ ಗಳಲ್ಲಿ ಅಳವಡಿಸಿರುವ ಡಿಜಿಟಲ್ ಬೋರ್ಡಗಳಲ್ಲಿ ಮಾಹಿತಿ ಡಿಸ್ ಪ್ಲೇ ಮಾಡುವ ಕಾರ್ಯವನ್ನೂ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ಮಾಡುತ್ತದೆ

ಸ್ಮಾರ್ಟ್ ಸಿಟಿಯ ಕಮಾಂಡ್ ಸೆಂಟರ್ ಭಾರತ ಇಲೆಕ್ಟ್ರಾನಿಕ ಲಿಮಿಟೆಡ್ ನವರು ನಿರ್ಮಾಣ ಮಾಡುತ್ತಿದ್ದು ಇದಕ್ಕೆ 46 ಕೋಟಿ ರೂ ಅನುದಾನ ಖರ್ಚಾಗಿದೆ ಈ
ಕಮಾಂಡ್ ಸೆಂಟರ್ ಜನೇವರಿ ಮೊದಲನೇಯ ವಾರದಲ್ಲೇ ರೆಡಿಯಾಗಲಿದೆ .ಇನ್ನು ಮುಂದು ಕುಂದಾನಗರಿಯ ಎಲ್ಲ ಸಾರ್ವಜನಿಕ ಸೇವೆಗಳು ಸ್ಮಾರ್ಟ್ ಮತ್ತು ಹೈಟೆಕ್ ಆಗುವ ಕಾಲ ತೀರಾ ಹತ್ತಿರವಾಗಿದೆ.

Check Also

ಬೆಳಗಾವಿ ಜಿಲ್ಲಾಧಿಕಾರಿಗಳ ಇದೊಂದು ಕಾರ್ಯ ಶ್ಲಾಘನೀಯ

ಬೆಳಗಾವಿ- ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್ ಅವರು ಮಾಡಿರುವ ಇದೊಂದು ಕಾರ್ಯ ಶ್ಲಾಘನೀಯ ಅದು ಏನಂದ್ರೆ ಸುವರ್ಣಸೌಧಕ್ಕೆ ಪಾಸ್ ಪಡೆದು …

Leave a Reply

Your email address will not be published. Required fields are marked *