ಬೆಳಗಾವಿ- ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ದೇಸ್ಥಾನದ ಅಭಿವೃದ್ಧಿಯ ಕುರಿತು 17 ಕೋಟಿ ರೂ ಯೋಜನೆಯ ಪ್ರಸ್ತಾವನೆ ಸಲ್ಲಿಕೆ ಯಾಗಿದೆ.ಆದಷ್ಟು ಬೇಗ ಯೋಜನೆಯ ಬಗ್ಗೆ ಚರ್ಚಿಸಿ ಅನುಮೋದನೆ ನೀಡುತ್ತೇವೆ ಎಂದು ರಾಜ್ಯ ಮುಜರಾಯಿ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಲಾಖೆಯ ಪ್ರಗತಿ ಪರಶೀಲನೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಅವರು ಯಲ್ಲಮ್ಮನ ದೇವಸ್ಥಾನ ದಲ್ಲಿ ರಾಸಾಯನ ಕುಂಕುಮ ಮಾರಾಟ,ಕೋಲ್ಡ್ರಿಂಕ್ಸ ಹೆಸರಿನಲ್ಲಿ ಸರಾಯಿ ಮಾರಾಟದ ಕುರಿತು ತನಖೆ ಮಾಡಿ ಕ್ರಮ ಕೈಗೊಳ್ಳುತ್ತೇವೆ.ರಾಜ್ಯದಲ್ಲಿರುವ A ದರ್ಜೆಯ ದೇವಸ್ಥಾನಗಳನ್ನು ಗುರುತಿಸಿ ಅಲ್ಲಿ ಸಪ್ತಪದಿ ಕಾರ್ಯಕ್ರಮ ನಡೆಸುತ್ತಿದ್ದೇವೆ.ಅದಕ್ಕಾಗಿ ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ದೇವಸ್ಥಾನ,ಚಿಂಚಲಿ ಮಾಯಕ್ಕನ ದೇವಸ್ಥಾನ ಆಯ್ಕೆ ಮಾಡಿದ್ದೇವೆ.ಮಾರ್ಚ 7 ರಂದು ಯಲ್ಲಮ್ಮನ ದೇವಸ್ಥಾನದಲ್ಲಿ ಸಪ್ತಪದಿ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.ಸಪ್ತಪದಿ ಕುರಿತು ಜಾಗೃತಿ ಮೂಡಿಸುವದಕ್ಕಾಗಿ ರಾಜ್ಯದಲ್ಲಿ ಸಪ್ತಪದಿ ರಥ ಸಂಚರಿಸುತ್ತಿದೆ ಎಂದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು
ಮಾಜಿ ಸಿಎಂ ಸಿದ್ರಾಮಯ್ಯ ಟ್ರಂಪ್ ಪ್ರವಾಸದಿಂದ ಭಾರತಕ್ಕೆ ಯಾವುದೇ ಲಾಭವಿಲ್ಲ ಅಂತಾ ಹೇಳೋದು ಸರಿಯಲ್ಲ,ವಿದೇಶದಿಂದ ಗಣ್ಯ ಅತಿಥಿಯೊಬ್ಬರು ಭಾರತಕ್ಕೆ ಬೇಟಿ ನೀಡಿದಾಗ ಅವರನ್ನು ಗೌರವಿಸುವದು ಭಾರತೀಯ ಸಂಸ್ಕೃತಿ ಎಂದು ಕೋಟ ಶ್ರೀನಿವಾಸ ಪೂಜಾರಿ ಸಿದ್ರಾಮಯ್ಯನವರಿಗೆ ತಿರಿಗೇಟು ನೀಡಿದರು.