Breaking News
Home / BGAdmin (page 46)

BGAdmin

ಚಂದ್ರಯಾನ 3 ಲ್ಯಾಂಡಿಂಗ್ ಆಗುವ 15 ನಿಮಿಷದ ಪ್ರಕ್ರಿಯೆ ರೋಚಕ…!

ಭಾರತೀಯ ವಿಜ್ಞಾನಿಗಳ ಪರಿಶ್ರಮ ನಾಳೆ ಸಂಜೆ ಸಾರ್ಥಕವಾಗಲಿ,ನಮ್ಮ ವಿಜ್ಞಾನಿಗಳು ನಮ್ಮ ಹೆಮ್ಮೆ,ಚಂದ್ರಯಾನ 3 ಯಶಸ್ವಿಯಾಗಲಿ ಭಾರತದ ಕೀರ್ತಿ ಜಾಗತಿಕವಾಗಿ ಬೆಳಗಲಿ ಜೈ ಹಿಂದ್…. ಭಾರತ್ ಮಾತಾ ಕೀ ಜೈ… ಇಂದು ಬುಧವಾರ ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದ್ರಯಾನ 3  ಲ್ಯಾಂಡಿಂಗ್ ಆಗಲಿದೆ. ಸುಮಾರು 5 ಗಂಟೆ 45 ನಿಮಿಷಕ್ಕೆ ನೌಕಾಯಾನದ ವೇಗವನ್ನು ಕಂಟ್ರೋಲ್ ಮಾಡುವ ಪ್ರಕ್ರಿಯೆ ಶುರುವಾಗಲಿದೆ ಈ ಹದಿನೈದು ನಿಮಿಷ ಭಾರತೀಯ ವಿಜ್ಞಾನಿಗಳಿಗೆ ಅಗ್ನಿ ಪರೀಕ್ಷೆ …

Read More »

ಲಕ್ಷ್ಮೀ ಹೆಬ್ಬಾಳಕರ್ ಹುಟ್ಟೂರಿನಲ್ಲಿ ಹೂವಿನ ಮಳೆ….!!

ಹುಟ್ಟೂರಿನ ಅಭಿವೃದ್ಧಿಗೆ 60 ಕೋಟಿ ರೂ. ಯೋಜನೆ – ಬೆಳಗಾವಿ: ತಾವು ಹುಟ್ಟಿ, ಬೆಳೆದ ಊರು ಖಾನಾಪುರ ತಾಲೂಕಿನ ಚಿಕ್ಕಹಟ್ಟಿಹೊಳಿಯಲ್ಲಿ ಮಂಗಳವಾರ ಅದ್ಧೂರಿ ಸನ್ಮಾನ ಸ್ವೀಕರಿಸಿದ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಮಲಪ್ರಭಾ ನದಿಗೆ ಅಡ್ಡಲಾಗಿ ವೀರಭದ್ರೇಶ್ವರ ದೇವಸ್ಥಾನದ ಬಳಿ ಬ್ರಿಜ್ ಕಂ ಬ್ಯಾರೇಜ್, ತಡೆಗೋಡೆ, ಕಲ್ಯಾಣ ಮಂಟಪ ಮತ್ತಿತರ ಕಾಮಗಾರಿಗಳಿಗೆ ಒಟ್ಟಾರೆ 60 ಕೋಟಿ ರೂ. ಯೋಜನೆ ತಯಾರಿಸಿರುವುದಾಗಿ ಪ್ರಕಟಿಸಿದ್ದಾರೆ. ಜೊತೆಗೆ, ಚಿಕ್ಕಹಟ್ಟಿಹೊಳಿ …

Read More »

ಪಂಚ ರಾಜ್ಯಗಳಲ್ಲಿ ಬಿಜೆಪಿ ಗೆಲುವಿಗೆ ಅಭಯ ಸೂತ್ರ…!!

ಛತ್ತೀಸಗಡ- ದೇಶದಲ್ಲಿ ಪಂಚರಾಜ್ಯಗಳ ವಿಧಾನಸಭೆ ನಡೆಯಲಿದ್ದು ಪಂಚರಾಜ್ಯಗಳಲ್ಲಿ ಗೆಲುವು ಸಾಧಿಸಲು ಬಿಜೆಪಿ ತಾಲೀಮು ಶುರುವಾಗಿದೆ.ಈ ಕುರಿತು ಛತ್ತೀಸಗಡ ರಾಯಾಪೂರದಲ್ಲಿ ಪಂಚರಾಜ್ಯಗಳ ಆಯ್ದ ಶಾಸಕರ ಮಹತ್ವದ ಅಭ್ಯಾಸ ವರ್ಗ ನಡೆಯಿತು ಈ ಅಭ್ಯಾಸ ವರ್ಗದಲ್ಲಿ ಬೆಳಗಾವಿ ದಕ್ಷಿಣ ಮತ್ಷೇತ್ರದ ಶಾಸಕ ಅಭಯ ಪಾಟೀಲ ಚುನಾವಣೆಯಲ್ಲಿ ಅನುಸರಿಸಬೇಕಾದ ತಂತ್ರಗಾರಿಕೆಯ ಬಗ್ಗೆ ಪಂಚರಾಜ್ಯಗಳ ಶಾಸಕರಿಗೆ ವಿಶೇಷ ಉಪನ್ಯಾಸ ಮಾಡಿದರು. ಪಶ್ಚಿಮ ಬಂಗಾಳ,ಬಿಹಾರ,ಜಾರ್ಖಂಡ,ಆಸ್ಸಾಂ ಹಾಗೂ ಓಡಿಸಾ ರಾಜ್ಯಗಳ ಸುಮಾರು 55 ಶಾಸಕರು ಹಾಗೂ ಪಂಚರಾಜ್ಯಗಳ ಬಿಜೆಪಿಯ …

Read More »

ಬೆಳಗಾವಿ DDPI ಪುಂಡಲೀಕ ಖುರ್ಚಿಗೆ ಮತ್ತೆ ನಲತವಾಡ ಲಗ್ಗೆ….!!

ಬೆಳಗಾವಿ- ಬೆಳಗಾವಿ DDPI ಖುರ್ಚಿಗಾಗಿ ಇವತ್ತಿಗೂ ಗುದ್ದಾಟ ಮುಂದುವರೆದಿದೆ.ಈ ರೀತಿಯ ಗುದ್ದಾಟ ಬಹುಶ ಯಾವ ಇಲಾಖೆಯಲ್ಲೂ ನಡೆದಿಲ್ಲ.ಆದ್ರೆ ಇಬ್ಬರ ನಡುವಿನ ತಿಕ್ಕಾಟ ತಾರಕ್ಕೇರಿದ್ದು ಈ ಗುದ್ದಾಟ ಅಪಹಾಸ್ಯಕ್ಕೆ ಗುರಿಯಾಗಿದೆ. ಇಬ್ಬರ ನಡುವೆ ಹಲವಾರು ತಿಂಗಳು ಗಳಿಂದ ಖೋ.ಖೋ ಆಟ ನಡೆಯುತ್ತಲೇ ಇದೆ. ಪುಂಡಲೀಕ್ ಅವರು DDPI ಆಗಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹನ ಮಾಡಿದ ಬಳಿಕ ಈಗ ಮತ್ತೆ ಅವರ ಖುರ್ಚಿಗೆ ಕುತ್ತು ಬಂದಿದೆ ಎನ್ನಲಾಗಿದೆ.KAT ಯಲ್ಲಿ ನಲತವಾಡ ಪರವಾಗಿ ತೀರ್ಪು ಹೊರಬಂದಿದೆ …

Read More »

ಚಂದ್ರಯಾನ 3 ಲ್ಯಾಂಡಿಂಗ್, ಅಗಸ್ಟ್ 23 ಸಂಜೆ ಶುಭ ಘಳಿಗೆ….!!

ಆಗಸ್ಟ್ 21ರಂದು ಚಂದ್ರಯಾನ-3 ಲ್ಯಾಂಡಿಂಗ್ ಕುರಿತು ಇಸ್ರೋ ಇತ್ತೀಚಿನ ಅಪ್ಡೇಟ್ ಬಿಡುಗಡೆ ಮಾಡಿದೆ. ಲ್ಯಾಂಡಿಂಗ್ ಸಮಯವನ್ನು ಆಗಸ್ಟ್ 23ರಂದು ಸಂಜೆ 6.04ಕ್ಕೆ ಇರಿಸಲಾಗಿದೆ ಎಂದು ಹೇಳಿದರು. ಈ ಸಮಯದಲ್ಲಿ, ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಮತ್ತು ಸಾಫ್ಟ್ ಲ್ಯಾಂಡಿಂಗ್ಗಾಗಿ ಪ್ರಯತ್ನಿಸಲಾಗುತ್ತದೆ. ಸ್ಥಳೀಯ ಕಾಲಮಾನ ಸಂಜೆ 5.20ಕ್ಕೆ ಲ್ಯಾಂಡಿಂಗ್ ಕಾರ್ಯಕ್ರಮದ ನೇರ ಪ್ರಸಾರ ಆರಂಭವಾಗಲಿದೆ ಎಂದು ಇಸ್ರೋ ತಿಳಿಸಿದೆ. 2023ರ ಆಗಸ್ಟ್ 21ರಂದು ಚಂದ್ರಯಾನ-3 ಚಂದ್ರನ ಕಡೆಗೆ ಚಲಿಸುವ ಮೂಲಕ ಚಂದ್ರಯಾನ-2ರ ಆರ್ಬಿಟರ್‌ನೊಂದಿಗೆ …

Read More »

MP ಎಲೆಕ್ಷನ್, ಚಿಕ್ಕೋಡಿಗೂ ಸೈ,ಬೆಳಗಾವಿಗೂ ಸೈ…!!

ಬೆಳಗಾವಿ-ಪ್ರಕಾಶ್ ಹುಕ್ಕೇರಿಯವರಿಗೆ ಈ ವಯಸ್ಸಿನಲ್ಲೂ ಅವರಲ್ಲಿರುವ ಚೈತನ್ಯ,ಛಲಗಾರಿಕೆ ನೋಡಿದ್ರೆ ನಿಜವಾಗಿಯೂ ಅಚ್ಚರಿ ಆಗುತ್ತೆ, ಶಿಕ್ಷಕರ ಕ್ಷೇತ್ರದಿಂದ ಎಂಎಎಲ್ಸಿ ಆಗಿರುವ ಪ್ರಕಾಶ್ ಹುಕ್ಕೇರಿ ಅವರು ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿಯಾದಾಗಿನಿಂದ ಅವರಲ್ಲಿನ ಹುಮ್ಮಸ್ಸು ಇಮ್ಮಡಿಯಾಗಿದೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಇವತ್ತು ಮಾದ್ಯಮಗಳ ಜೊತೆ ಮಾತನಾಡುತ್ತ ಪ್ರಕಾಶ್ ಹುಕ್ಕೇರಿಯವರ ಕುರಿತು ಅಚ್ಚರಿಯ ಸಂಗತಿಯೊಂದನ್ನು ಹೇಳಿದ್ದಾರೆ.ಬರುವ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಮತ್ತು ಬೆಳಗಾವಿ ಎರಡೂ ಕ್ಷೇತ್ರದಿಂದ ಟಿಕೆಟ್ ಕೇಳಿದ್ದಾರೆ …

Read More »

ಕೃಷ್ಣಾ ನದಿಯಲ್ಲಿ ಮುಳುಗುತ್ತಿದ್ದ ಇಬ್ಬರ ರಕ್ಷಣೆ, ಓರ್ವ ನೀರು ಪಾಲು..

ಬೆಳಗಾವಿ-ದರ್ಗಾ ದರ್ಶನಕ್ಕೆ ಬಂದಿದ್ದ ಯುವಕ ಕೃಷ್ಣಾ ನದಿಯಲ್ಲಿ ನೀರುಪಾಲಾದ ಘಟನೆ,ಕುಡಚಿ ಹೊರವಲಯ ಗಡ್ಡೆ ಪ್ರದೇಶ ಬಳಿ ಕೃಷ್ಣಾ ನದಿ ತೀರದಲ್ಲಿ ನಿನ್ನೆ ಸಂಜೆ ನಡೆದಿದೆ. ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ.ಬೆಳಗಾವಿಯ ಗಾಂಧಿನಗರ ನಿವಾಸಿ ಹುಸೇನ್ ಅರಕಟ್ಟಿ ನೀರುಪಾಲಾದ ಯುವಕನಾಗಿದ್ದಾನೆ. ಕುಟುಂಬಸ್ಥರು, ಸ್ನೇಹಿತರ ಜೊತೆ ಕುಡಚಿಯ ದರ್ಗಾಗೆ ಬಂದಿದ್ದ ಹುಸೇನ್,ಕುಡಚಿ ಹೊರವಲಯ ಗಡ್ಡೆ ಪ್ರದೇಶದ ಹಜರತ್ ಶೇಖ್ ಶಿರಾಜುದ್ದೀನ್ ಜುನೈದಿ ದರ್ಗಾದಲ್ಲಿ ದರ್ಶನ ಪಡೆದ …

Read More »

ಸಿಎಂಕ್ಕಿಂತ ನಾವು ದೊಡ್ಡವರಲ್ಲ ಅಂತಾ ಸಾಹುಕಾರ್ ಹೇಳಿದ್ರು…!!

ಅದು ಇಲ್ಲಿಗೆ ಬಂದಿದ್ದು ಗೊತ್ತಿಲ್ಲ,ಅಲ್ಲಿಗೆ ಹೋಗಿದ್ದು ಗೊತ್ತಿಲ್ಲ.- ಸತೀಶ್ ಜಾರಕಿಹೊಳಿ ಬೆಳಗಾವಿ-ಗೃಹಲಕ್ಷ್ಮಿ ಯೋಜನೆ ಚಾಲನೆ ಬೆಳಗಾವಿಯಿಂದ ಮೈಸೂರಿಗೆ ಶಿಫ್ಟ್ ಆದ ವಿಚಾರವಾಗಿ,ಬೆಳಗಾವಿಯಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು,ಇದು ಮುಖ್ಯಮಂತ್ರಿಗಳ ತೀರ್ಮಾನ, ಸಿಎಂಕ್ಕಿಂತ ನಾವು ದೊಡ್ಡವರಲ್ಲ ಎಂದು ಹೇಳಿದ್ದಾರೆ. ನಾವು ಜಿಲ್ಲಾ ಕೋರ್ಟ್ ಇದ್ದಂಗೆ ಅವರು ಹೈಕೋರ್ಟ್ ಮೇಲೆ ಸುಪ್ರೀಂ ಕೋರ್ಟ್ ಇದ್ದಂಗೆ,ಅಲ್ಲಿ ಏನಾಗಿದೆ ನಮಗೆ ಗೊತ್ತಿಲ್ಲ.ನೀವು ಸಿಎಂ ಅವರಿಗೆ ಹಾಗೂ ಅಧ್ಯಕ್ಷರಿಗೆ ಕೇಳಿ, ಅವರು ಉತ್ತರ ಕೊಡಬಹುದು,ಕಾರ್ಯಕ್ರಮ …

Read More »

ಲಕ್ಷ್ಮಣ ಸವದಿ,ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿಯಿಂದ ಆಫರ್…!!

ಚಿಕ್ಕಮಂಗಳೂರು-ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗಿದ್ದವರು ಕಾಂಗ್ರೆಸ್‌ ಪಕ್ಷಕ್ಕೆ ವಾಪಸ್ ಆಗ್ತಾರೆ ಅನ್ನೋ ವಿಚಾರ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಕಾಂಗ್ರೆಸ್ ನಾಯಕರು ಕೆಲ ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಲೋಕ ಸಮರಕ್ಕೂ ಮುನ್ನ ಆಪರೇಷನ್ ಹಸ್ತದ ಸುಳಿವು ಸಿಕ್ತಿದ್ದಂತೆ ಬಿಜೆಪಿ ನಾಯಕರು ಅಲರ್ಟ್‌ ಆಗಿದ್ದಾರೆ. ಬಿಜೆಪಿ ಶಾಸಕರು ಪಕ್ಷ ಬಿಟ್ಟು ಹೋಗದಂತೆ ತಡೆಯಲು ನಾನಾ ಸರ್ಕಸ್ ಮಾಡುತ್ತಿದ್ದಾರೆ. ಈ ಮಧ್ಯೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ …

Read More »

ಬೆಳಗಾವಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ನೊಂದವರಿಗೆ ಖಾಕಿ ಸ್ಪಂದನೆ…

ಬೆಳಗಾವಿ- ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಢಾಧಿಕಾರಿಗಳ ಸೂಚನೆ ಮೇರೆಗೆ ಬೆಳಗಾವಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ನೊಂದವರ ದಿನಾಚರಣೆಯನ್ನು (#Victim_Day) ಆಚರಿಸಲಾಯಿತು. ಈ ಸಭೆಯಲ್ಲಿ ವಿವಿಧ ಪ್ರಕರಣಗಳಲ್ಲಿ ನೊಂದವರಿಗೆ ಸಂಬಂಧಿಸಿದ ಪ್ರಕರಣದ ಪ್ರಸ್ತುತ ಹಂತ & ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿ ಹೇಳಲಾಯಿತು. ನೊಂದವರಿಗೆ ಪೋಲೀಸರು ಸ್ಪಂದಿಸಿದರು.

Read More »