Home / ಬೆಳಗಾವಿ ನಗರ / ಸಂವಿಧಾನ ಶಿಲ್ಪಿಯ ಮೂರ್ತಿ ಉದ್ಘಾಟನೆಗೆ ಸಿಎಂ

ಸಂವಿಧಾನ ಶಿಲ್ಪಿಯ ಮೂರ್ತಿ ಉದ್ಘಾಟನೆಗೆ ಸಿಎಂ

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಆವರಣದಲ್ಲಿ ನಿರ್ಮಿಸಲಾಗಿರುವ ಸಂವಿಧಾನ ಶಿಲ್ಪಿ,ಭಾರತ ರತ್ನ,ಮಹಾ ಮಾನವತಾ ವಾದಿ,ಡಾ.ಬಾಬಾ ಸಾಹೇಬ ಅಂಬೇಡ್ಕರ್ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳನ್ನು ಅಹ್ವಾನಿಸಲಾಗುವದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ

ಬೆಳಗಾವಿಯ ಡಾ ಬಾಬಾ ಸಾಹೇಬ ಅಂಬೇಡ್ಕರ್ ಜಯಂತಿ ಉತ್ಸವ ಮಹಾ ಮಂಡಳದ ಪದಾಧಿಕಾರಿಗಳು ಮಹಾ ಮಂಡಳದ ಅಧ್ಯಕ್ಷ ಮಲ್ಲೇಶ ಚೌಗಲೆ ನೇತೃತ್ವದಲ್ಲಿ ಸಚಿವರನ್ನು ಭೇಟಿಯಾಗಿ ಮೂರ್ತಿ ಪ್ರತಿಷ್ಠಾಪನೆಯ ಕುರಿತು ಸಚಿವರೊಂದಿಗೆ ಸಮಾಲೋಚನೆ ನಡೆಸಿದರು

ಈ ಸಂಧರ್ಭದಲ್ಲಿ ಮಾತನಾಡಿದ ಸಚಿವ ರಮೇಶ ಜಾರಕಿಹೊಳಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಗೃಹ ಸಚಿವ ಪರಮೇಶ್ವರ,ಲೋಕಸಭೆಯ ಪ್ರತಿ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಆಮಂತ್ರಣ ನೀಡುತ್ತೇನೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ದಿನಾಂಕ ನಿಗದಿ ಮಾಡುತ್ತೇನೆ ಎಂದು ಸಚಿವರು ಭರವಸೆ ನೀಡಿದರು

ಉಪ ಮಹಾಪೌರ ನಾಗೇಶ ಮಂಡೋಳ್ಕರ್,ಅರ್ಜುನ್ ದೇಮಟ್ಟಿ.ಮಲ್ಲೇಶ ಕುರಂಗಿ ಜೀವನ ಕರುಣೆ ಶಂಕರ ಮುನವಳ್ಳಿ ಸುರೇಶ ತಳವಾರ ,ಮಾರುತಿ ಚೌಗಲೆ ದಲಿತ ಸಮಾಜದ ಮುಖಂಡರು ಉಪಸ್ಥಿತರಿದ್ದರು

About admin

Check Also

ಜಿಲ್ಲೆಯ ಎರಡು ಕಡೆ SSLC ಹಿಂದಿ ಪ್ರಶ್ನೆ ಪತ್ರಿಕೆ ಸೋರಿಕೆ

ಬೆಳಗಾವಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಮತ್ತು ಗೋಕಾಕ ತಾಲ್ಲೂಕಿನ ಮೂಡಲಗಿಯಲ್ಲಿ SSLC ಪರೀಕ್ಷೆಯ ಹಿಂದಿ ಪ್ರಶ್ನೆ ಪತ್ರಿಕೆ …

Leave a Reply

Your email address will not be published. Required fields are marked *

WP Facebook Auto Publish Powered By : XYZScripts.com