Breaking News
Home / Breaking News / ಮೌಲಾನಾ ಸಜ್ಜಾದ ವಿರುದ್ದದ ಪ್ರಕರಣ ಹಿಂಪಡೆಯಲು ಆಗ್ರಹ

ಮೌಲಾನಾ ಸಜ್ಜಾದ ವಿರುದ್ದದ ಪ್ರಕರಣ ಹಿಂಪಡೆಯಲು ಆಗ್ರಹ

ಬೆಳಗಾವಿ-

ಉತ್ತರ ಪ್ರದೇಶದ ಹಜರತ ಮೌಲಾನಾ ಸಜ್ಜಾದ ನೊಮಾನಿ ಮೇಲೆ ರಾಜಕೀಯ ಪ್ರೇರಿತವಾಗಿ ಕೋಮುವಾದಿಗಳು ದಾಖಲಿಸಿರುವ ಸುಳ್ಳು ಪ್ರಕರಣವನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಬುಧುವಾರ ಭಾರತ ಮುಕ್ತಿ ಮೋರ್ಚಾ ಹಾಗೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಿದರು.
ಮುಸ್ಲಿಂ ರಿಜ್ವಿಯ ಹಜರತ್ ಮೌಲಾನಾ ಸಜ್ಜಾದ ನೊಮಾನಿ ಸಾಹಬರ ಫೆ.9 ರಂದು ಹೈದ್ರಾಬಾದನಲ್ಲಿ ಮಾಡಿದ ಪ್ರವಚನದಲ್ಲಿ ದೇಶದ ಐಕ್ಯೆತೆಗೆ ಧಕ್ಕೆ ತರುವಂತೆ ಮಾತನಾಡಿದ್ದಾರೆ ಎಂದು ಭಾವಿಸಿ ಅವರ ಮೇಲೆ ದೇಶ ದ್ರೋಹದ ಆಪಾದನೆ ಮಾಡಿದ್ದಾರೆ. ಅದು ಸತ್ಯಕ್ಕೆ ದೂರವಾಗಿದೆ ಸುಳ್ಳು ಪ್ರಕರಣವನ್ನು ಹಿಂಪಡೆದುಕೊಳ್ಳಬೇಕೆಂದು ಪ್ರತಿಭಟನಾಕಾರರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಹಜರತ್ ಮೌಲಾನಾ ಸಜ್ಜಾದ ನೊಮಾನಿ ಸಹಾಬರವರ ಮೇಲೆ ಸುಳ್ಳು ಪ್ರಕರಣದ ದಾಖಲಿಸಿದ್ದ ವಸೀಂ ರಿಜ್ವಿಯಾ ಮೇಲೆ ಕೇಂದ್ರ ಸರಕಾರ ಮೊಕದ್ದಮೆ ಹೂಡಬೇಕು.  ದೇಶದ ಮುಸಲ್ಮಾನರಿಗೆ ಬೆದರಿಕೆ ನೀಡಿದ ರವಿಶಂಕರ ಮೇಲೂ ಸರಕಾರ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದ್ದಾರೆ.
ಮದರಸಾಗಳ ಮೇಲೆ ವಸೀಂ ರಿಜ್ವಿಯ ಮಾಡಿದ ಆರೋಪ ಸುಳ್ಳಾಗಿದೆ. ಆದ್ದರಿಂದ ಕೇಂದ್ರ ಸರಕಾರದ ಸತ್ಯಾಸತ್ಯತೆ ಅರಿತು ಸುಳ್ಳು ಪ್ರಕರಣ ಹಿಂಪಡೆಯಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಸೈಯದ ತಮಟಗಾರ, ದಾವಲಸಾಬ್ ನದಾಫ್. ಇರ್ಷಾದ ಮಲ್ಲಿಖಾನ್, ರಹಮಾನ ಕಾತರಕಿ, ಮುನೀರ ರೋಟಿವಾಲೆ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

About BGAdmin

Check Also

ಬೆಳಗಾವಿ ಮೇಯರ್ ಉಪಮೇಯರ್ ಗೆ ಶಿಮ್ಲಾ ಟೋಪಿ

ಬೆಳಗಾವಿ ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಸೇರ್ಪಡೆಯಾಗಿ ಮೆಟ್ರೋಪಾಲಿಟಿನ್ ಸಿಟಿಯಾಗುವತ್ತ ದಾಪುಗಾಲು ಹಾಕುತ್ತಿರುವ ಬೆಳಗಾವಿ ನಗರ ದೇಶದ ಗಮನ ಸೆಳೆಯುತ್ತಿದೆ. ಕುಂದಾನಗರಿ …

Leave a Reply

Your email address will not be published. Required fields are marked *

WP Facebook Auto Publish Powered By : XYZScripts.com