Breaking News
Home / Breaking News / ಡಿಕೆಶಿ ಸಣ್ಣತನದ ರಾಜಕೀಯ ಮಾಡುವದನ್ನು ಬಿಡಲಿ,- ರಮೇಶ್ ಜಾರಕಿಹೊಳಿ

ಡಿಕೆಶಿ ಸಣ್ಣತನದ ರಾಜಕೀಯ ಮಾಡುವದನ್ನು ಬಿಡಲಿ,- ರಮೇಶ್ ಜಾರಕಿಹೊಳಿ

ಬೆಳಗಾವಿ- ದಿ. ಸುರೇಶ್ ಅಂಗಡಿ ಅವರ ಪಾರ್ಥಿವ ಶರೀರ ಬೆಳಗಾವಿಗೆ ತರದ ಬಗ್ಗೆ ಡಿಕೆಶಿ ಮಾಡಿದ ಟೀಕೆಗೆ ಸಚಿವ ರಮೇಶ್ ಜಾರಕಿಹೊಳಿ ಪ್ರತ್ಯುತ್ತರ ನೀಡಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಡಿ.ಕೆ.ಶಿವಕುಮಾರ್ ಸುರೇಶ್ ಅಂಗಡಿ ಅಂತ್ಯಕ್ರಿಯೆ ವಿಚಾರದಲ್ಲಿ ಬಹುಶಃ ರಾಜಕೀಯ ಮಾಡುತ್ತಿದ್ದಾರೆ, ನಮ್ಮ ಪ್ರಧಾನಿ ಮೋದಿಯವರು ನಿರ್ಣಯ ಕೈಗೊಂಡಿದ್ದರು, ಎಷ್ಟೇ ದೊಡ್ಡವರಿದ್ದರೂ ಕೋವೀಡ್ ಮಾರ್ಗಸೂಚಿ ಪ್ರಕಾರ ಅಂತ್ಯಕ್ರಿಯೆಗೆ ನಿರ್ಣಯ ಕೈಗೊಂಡಿದ್ರು, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪಾರ್ಥಿವ ಶರೀರವನ್ನು ಕೊಲ್ಕತ್ತಾಗೆ ಒಯ್ದಿರಲಿಲ್ಲ ಅವರನ್ನೂ ದೆಹಲಿಯಲ್ಲಿಯೇ ಪ್ರಣಬ್ ಮುಖರ್ಜಿ ಅಂತ್ಯಕ್ರಿಯೆ ನೆರವೇರಿಸಲಾಯಿತು

ಡಿಕೆಶಿ ಸಣ್ಣತನ ರಾಜಕಾರಣ ಬಿಟ್ಟು ರಾಜ್ಯದ ಅಭಿವೃದ್ಧಿಗೆ ಕೈಜೋಡಿಸಲಿ,ಯಾವಾಗಲೂ ಡಿಕೆಶಿ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಾರೆ ಡಿಕೆಶಿ ಹತಾಶರಾಗಿ ಏನೇನೋ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ, ಸದ್ಯಕ್ಕೆ ಈ ಬಗ್ಗೆ ಹೆಚ್ಚು ಚರ್ಚೆ ಬೇಡ ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ, ಎಂದು ರಮೇಶ್ ಜಾರಕಿಹೊಳಿ ಡಿ.ಕೆ ಶಿವಕುಮಾರ್ ಅವರಿಗೆ ತಿರಗೇಟು ನೀಡಿದ್ರು,

ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡುವ ವಿಚಾರ, ಪಕ್ಷದ ಹೈಕಮಾಂಡ್ ನಿರ್ಣಯದಂತೆ ಅಭ್ಯರ್ಥಿ ಆಯ್ಕೆಯಾಗಲಿದೆ ನಮ್ಮ ಪಕ್ಷ ಬಗ್ಗೆ ಡಿಕೆಶಿ ಮಾತನಾಡದೇ ಅವರ ಪಕ್ಷದ ಬಗ್ಗೆ ಮಾತನಾಡಲಿ, ನಾವು ನಮ್ಮ ಪಕ್ಷದ ಸಿದ್ಧಾಂತದ ಮೇಲೆ ನಿರ್ಣಯ ಕೈಗೊಳ್ಳುತ್ತೇವೆ ಎಂದರು.

ಬೆಳಗಾವಿ ಲೋಕಸಭೆ ಬಿಜೆಪಿ ಟಿಕೆಟ್ ಬಗ್ಗೆ ಚರ್ಚೆ ಮಾಡಲ್ಲ,ಹೈಕಮಾಂಡ್ ತೀರ್ಮಾನ ಅಂತಿಮ, ಅದಕ್ಕೆ ಎಲ್ಲರೂ ಬದ್ಧ, ಪ್ರವಾಹ ಸಂತ್ರಸ್ತರಿಗೆ ಪರಿಹಾರ ತಲುಪಿಲ್ಲ ಎಂದು ಸಿದ್ದರಾಮಯ್ಯ ಆರೋಪ ವಿಚಾರ, ಸೂಕ್ತ ವೇದಿಕೆಯಲ್ಲಿ ಸಿದ್ದರಾಮಯ್ಯ ರಿಗೆ ಉತ್ತರಿಸುವೆ ಎಂದರು ರಮೇಶ್ ಜಶರಕಿಹೊಳಿ.

ಈಗಾಗಲೇ ಸಿಎಂ ಬಿಎಸ್‌ವೈ ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ, ಬಿಎಸ್‌ವೈ ಚೆಕ್ ಮೂಲಕ‌ ಲಂಚ ಪಡೆದ್ರೆ ಮೊಮ್ಮಗ ಆರ್‌ಟಿಜಿಎಸ್ ಮೂಲಕ ಲಂಚ ಪಡೆದಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರ ಪ್ರಸ್ತಾಪಿಸಿದ ಅವರು, ಸಿಎಂ ಬಿಎಸ್‌ವೈ ನೇರವಾಗಿ ಸವಾಲು ಹಾಕಿದ್ದಾರೆ
ಆರೋಪ ಸಾಬೀತಾದ್ರೆ ರಾಜಕೀಯ ನಿವೃತ್ತಿ ಕೈಗೊಳ್ಳುತ್ತೇನೆ ಎಂದು ಸವಾಲು ಹಾಕಿದ್ದಾರೆ*
ಈ ಆರೋಪವನ್ನು ಅವರು ಸಾಬೀತು ಪಡಿಸಲಿ ಎಂದ ರಮೇಶ್ ಜಾರಕಿಹೊಳಿ‌ ಹೇಳಿದ್ರು
[

*ದಿವಂಗತ ಸುರೇಶ ಅಂಗಡಿ ಕುಟುಂಬಕ್ಕೆ ಸಚಿವ ರಮೇಶ್ ಜಾರಕಿಹೊಳಿ ಸಾಂತ್ವನ ಹೇಳಿದರು ಬೆಳಗಾವಿಯ ವಿಶ್ವೇಶ್ವರಯ್ಯ ನಗರದ ಸುರೇಶ ಅಂಗಡಿ ಅವರ ನಿವಾಸಕ್ಕೆ ಭೇಟಿ ನೀಡಿದರು. ತಾಯಿ ಸೋಮವ್ವ, ಪತ್ನಿ ಮಂಗಳಾ, ಪುತ್ರಿಯರಾದ ಸ್ಪೂರ್ತಿ, ಶೃದ್ಧಾಗೆ ಸಾಂತ್ವನ ಹೇಳಿದರು.

ಜಗದೀಶ್ ಶೆಟ್ಟರ್, ಸುರೇಶ ಅಂಗಡಿ ಹಾಗೂ ನಾನು ಒಂದು ಶಕ್ತಿಯಾಗಿದ್ವಿ, ಸುರೇಶ್ ಅಂಗಡಿ ಪತ್ನಿ ಸಹೋದರಿ ಮಂಗಳ ನಮ್ಮ ಮನೆಯಲ್ಲಿ ಬೆಳೆದಿದ್ದಾರೆ‌, ವೈಯಕ್ತಿಕವಾಗಿ ರಮೇಶ ಜಾರಕಿಹೊಳಿ‌ಗೆ ದೊಡ್ಡ ನಷ್ಟ ಆಗಿದೆ, ದಿವಂಗತ ಸುರೇಶ ಅಂಗಡಿ ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೆ ಹೋಗುತ್ತಿದ್ದರು, ಸುರೇಶ್ ಅಂಗಡಿಯವರ ಧರ್ಮಪತ್ನಿ, ತಾಯಿಗೆ ದೈರ್ಯವನ್ನು ಹೇಳಿದ್ದೇನೆ, ಸುರೇಶ ಅಂಗಡಿ ಪಾರ್ಥಿವ ಶರೀರ ಬೆಳಗಾವಿಗೆ ತರದೇ ಇರೋ ವಿಷಯ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಹೇಳಿಕೆಗೆ ರಮೇಶ್ ಜಾರಕಿಹೊಳಿ‌ ಆಕ್ರೋಶ ವ್ಯೆಕ್ತಪಡಿಸಿದರು.
ಈ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಅವನಿಗೆ, ಬೆಳಗಾವಿ ಜಿಲ್ಲೆಯ ಜನರು ಒಳ್ಳೆಯ ವ್ಯಕ್ತಿಯನ್ನು ಕಳೆದುಕೊಂಡಿದೆ, ಸುರೇಶ್ ಅಂಗಡಿ ಪತ್ನಿ ನನ್ನ ಸಹೋದರಿ ಮಂಗಲಾರಿಗೆ ಏನೂ ಬೇಕಾದರೂ ಸಹಾಯ ಮಾಡಲು ನಾನು ರೆಡಿ, ಅವರ ಪುತ್ರಿಯರಾದ ಸ್ಪೂರ್ತಿ, ಶ್ರದ್ಧಾ ನಾವೆಲ್ಲರೂ ಕುಟುಂಬ ಸದಸ್ಯರು ಇದ್ದ ಹಾಗೇ ಸುರೇಶ್ ಅಂಗಡಿ ಬಿಜೆಪಿ ಕಾಂಗ್ರೆಸ್ ಎಲ್ಲಾ ಪಕ್ಷದವರಿಗೆ ಬೇಕಾದ ವ್ಯಕ್ತಿಯಾಗಿದ್ದರು, ನಾನು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಸುರೇಶ್ ಅಂಗಡಿ ವಿರುದ್ಧ ಸ್ಪರ್ಧಿಸಲು ಯಾರೂ ರೆಡಿ ಆಗುತ್ತಿರಲಿಲ್ಲ ಎಂದು ರಮೇಶ್ ಜಾರಕಿಹೊಳಿ ಸುರೇಶ್ ಅಂಗಡಿ ಅವರನ್ನು ಸ್ಮರಿಸದರು.

ಸುರೇಶ ಅಂಗಡಿ ಬದುಕಿದ್ರೆ ಸಿಎಂ ಆಗುತ್ತಿದ್ರು ಎಂದು ಅಂಗಡಿ ಸೋದರ ಮಾವ ಲಿಂಗರಾಜ ಪಾಟೀಲ್ ಹೇಳಿಕೆ ವಿಚಾರ, ಈ ಬಗ್ಗೆ ಈ ಚರ್ಚೆ ಬೇಡ, ಸಮಯ ಬಂದಾಗ ನಾನೇ ಹೇಳುತ್ತೇನೆ ಎಂದರು

Check Also

ಮೇ 2 ರಂದು ಏಕನಾಥ, 3 ರಂದು ಅಮೀತ್ ಶಾ ಬೆಳಗಾವಿಗೆ….

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ರಂಗೇರಿದೆ, ಮತಬೇಟೆಗಾಗಿ ಮೇ 2 ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಮೇ …

Leave a Reply

Your email address will not be published. Required fields are marked *