Breaking News
Home / Breaking News / ಗೀತ ಸಾಹಿತಿ ಕೆ ಕಲ್ಯಾಣ ಕುಟುಂಬವನ್ನು ವಶೀಕರಣ ಮಾಡಿದ ಮಂತ್ರವಾದಿ

ಗೀತ ಸಾಹಿತಿ ಕೆ ಕಲ್ಯಾಣ ಕುಟುಂಬವನ್ನು ವಶೀಕರಣ ಮಾಡಿದ ಮಂತ್ರವಾದಿ

ಬೆಳಗಾವಿ- ಕರ್ನಾಟಕದ ಸುಪ್ರಸಿದ್ದ ಗೀತ ಸಾಹಿತಿ ಕೆ ಕಲ್ಯಾಣ ಅವರ ಮಡದಿ,ಅತ್ತೆ ಮತ್ತು ಮಾವ,ನನ್ನು ಮಂತ್ರವಾದಿಯೊಬ್ಬ ಕಿಡ್ನ್ಯಾಪ್ ಮಾಡಿದ್ದಾನೆಂದು ಆರೋಪಿಸಿ ಬೆಳಗಾವಿ ಮಾಳ ಮಾರುತಿ ಠಾಣೆಯಲ್ಲಿ ದೂರು ದಾಖಲಾಗಿದೆ

ಬೀಳಗಿಯ ಮಂತ್ರವಾದಿ ಶಿವಾನಂದ ವಾಲಿ ಗೀತ ಸಾಹಿತಿ ಜೆ.ಕಲ್ಯಾಣ ಅವರ ಹೆಂಡತಿ,ಅತ್ತೆ ಮತ್ತು ಮಾವನನ್ನು ಕಿಡ್ನ್ಯಾಪ್ ಮಾಡಿ ಕೋಟ್ಯಾಂತರ ರೂಪಾಯಿ ಆಸ್ತಿಯನ್ನು,ಬ್ಯಾಂಕ್ ಬ್ಯಾಲೇನ್ಸ್ ನ್ನು ಲಪಟಾಯಿಸಿದ್ದಾನೆ ಎಂದು ಕೆ.ಕಲ್ಯಾಣ ಅವರು ಮಂತ್ರವಾದಿ ಶಿವಾನಂದ ವಾಲಿ ವಿರುದ್ಧ ಬೆಳಗಾವಿಯ ಮಾಳ ಮಾರುತಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೀಳಗಿಯ ಮಂತ್ರವಾದಿಯ ಮಂತ್ರ ಕೆ.ಕಲ್ಯಾಣ ಅವರ ಕುಟುಂಬದ ಮೇಲೆ ಪ್ರಭಾವ ಬೀರಿದ್ದು,ಈಗ ಸದ್ಯ ಖ್ಯಾತ ಗೀತ ಸಾಹಿತಿ ಕೆ. ಕಲ್ಯಾಣ ಅವರ ಹೆಂಡತಿ,ಅತ್ತೆ ಮತ್ತು ಮಾವ,ಮಂತ್ರವಾದಿ ಶಿವಾನಂದ ವಾಲಿ ಅವರ ವಶದಲ್ಲಿದ್ದಾರೆ

ಬೆಳಗಾವಿಯಲ್ಲಿ ಕೆ. ಕಲ್ಯಾಣ ಅವರ ಮಾವನ ಆಸ್ತಿ ಇತ್ತು ಈ ಆಸ್ತಿ ಮಾಳಮಾರುತಿ ಠಾಣೆಯ ವ್ಯಾಪ್ತಿಯಲ್ಲಿದೆ.ಮಂತ್ರವಾದಿ ಶಿವಾನಂದ ವಾಲಿ,ಆಸ್ತಿ ಬರೆಯಿಸಿಕೊಂಡು ಕಿಡ್ನ್ಯಾಪ್ ಮಾಡಿದ್ದಾನೆ ಎಂಬುದು ಕೆ. ಕಲ್ಯಾಣ ಅವರ ಆರೋಪವಾಗಿದೆ.

ಬೆಳಗಾವಿಯ ಮಾಳ ಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಪಿಐ ಗಡ್ಡೇಕರ ಅವರು ತನಿಖೆ ಮುಂದುವರೆಸಿದ್ದಾರೆ

Check Also

ವಿವೇಕರಾವ್ ಪಾಟೀಲ ಇಂದು ಬಿಜೆಪಿಗೆ ಸೇರ್ಪಡೆ…!!

ಬೆಳಗಾವಿ- ಪ್ರತಾಪ್ ರಾವ್ ಪಾಟೀಲ್ ಚಿಕ್ಕೋಡಿ ಅಭ್ಯರ್ಥಿಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ ಬೆನ್ನಲ್ಲಿಯೇ ನಿರೀಕ್ಷೆಯಂತೆ ಇಂದು ಹುಕ್ಕೇರಿಯಲ್ಲಿ ಅಮೀತ್ ಶಾ …

Leave a Reply

Your email address will not be published. Required fields are marked *