Breaking News
Home / Breaking News / ಅವರು ಮೀಟಿಂಗ್ ಗೆ ಹೋಗದಿದ್ದರೂ ಅವರ ಹೆಸರು ಚರ್ಚೆಗೆ ಬಂತು….!!!

ಅವರು ಮೀಟಿಂಗ್ ಗೆ ಹೋಗದಿದ್ದರೂ ಅವರ ಹೆಸರು ಚರ್ಚೆಗೆ ಬಂತು….!!!

ಬೆಳಗಾವಿ-ಬೆಳಗಾವಿ ಲೋಕಸಭಾ ಮತಕ್ಷೇತ್ರದ ಉಪ ಚುನಾವಣೆಯ ದಿನಾಂಕ ಇನ್ನೂ ಘೋಷಣೆ ಆಗಿಲ್ಲ,ಆದ್ರೆ ಕಾಂಗ್ರೆಸ್ ನಲ್ಲಿ ಅಭ್ಯರ್ಥಿ ಆಯ್ಕೆಗೆ ಸರಣಿ ಸಭೆಗಳು ನಡೆಯುತ್ತಿವೆ‌‌.

ಕಾಂಗ್ರೆಸ್ ಬೆಳಗಾವಿ ಅಭ್ಯರ್ಥಿ ಆಯ್ಕೆಗೆ ಮಾಜಿ ಸಚಿವ ಎಂ.ಬಿ ಪಾಟೀಲ ಅವರ ನೇತ್ರತ್ವದಲ್ಲಿ ಒಂದು ಸಮೀತಿ ರಚಿಸಿದೆ,ಈ ಸಮೀತಿ ಈಗಾಗಲೇ ಬೆಳಗಾವಿಯಲ್ಲಿ ಒಂದು ಸುತ್ತಿನ ಸಭೆ ನಡೆಸಿದೆ.ಸೋಮವಾರ ಬೆಂಗಳೂರಲ್ಲೂ ಅಭ್ಯರ್ಥಿ ಆಯ್ಕೆ ಕುರಿತು ಸಭೆ ನಡೆಸಿ ಚರ್ಚೆ ನಡೆಸಿದೆ‌.

ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯ,ಡಿಕೆ ಶಿವಕುಮಾರ್ ಈಶ್ವರ ಖಂಡ್ರೆ,ಎಂ ಬಿ ಪಾಟೀಲ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಭಾಗವಹಿಸಿದ್ದರು.

ಸಭೆಯಲ್ಲಿ ಖಾನಾಪೂರ ಶಾಸಕಿ ಅಂಜಲಿ ನಿಂಬಾಳ್ಕರ್ ಭಾಗವಹಿಸಿರಲಿಲ್ಲ.ಬೆಳಗಾವಿಯ ಇತರ ಕಾಂಗ್ರೆಸ್ ಸದಸ್ಯರು ಭಾಗವಹಿಸಿದ್ದರು,ಅಂಜಲಿ ನಿಂಬಾಳ್ಕರ್ ಅವರು ಸಭೆಯಲ್ಲಿ ಭಾಗವಹಿಸದಿದ್ದರೂ ಅವರ ಹೆಸರು ಚರ್ಚೆಗೆ ಬಂದಿದ್ದು,ಬೆಳಗಾವಿ ಲೋಕಸಭಾ ಮತಕ್ಷೇತ್ರದಿಂದ ಅಂಜಲಿ ನಿಂಬಾಳ್ಕರ್,ಅನೀಲ ಲಾಡ್ ಅಥವಾ ಸತೀಶ್ ಜಾರಕಿಹೊಳಿ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆದಿದೆ.

ಕೆಪಿಸಿಸಿ ವಕ್ತಾರರು ಆಗಿರುವ ಅಂಜಲಿ‌ ನಿಂಬಾಳ್ಕರ್ ಅವರ ಕಾರ್ಯ ವೈಖರಿ ಮತ್ತು ಮಾತಿನ ಧಾಟಿ, ಈಗ ಕಾಂಗ್ರೆಸ್ ನಾಯಕರ ಗಮನ ಸೆಳೆದಿದ್ದು,ಅಂಜಲಿ ನಿಂಬಾಳ್ಕರ್ ಈಗ ರಾಜ್ಯಮಟ್ಡದಲ್ಲಿ ಹೆಸರು ಮಾಡುತ್ತಿದ್ದು,ಕಾಂಗ್ರೆಸ್ ನಲ್ಲಿ ಹೊಸ ಛಾಪು ಮೂಡಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಸಮೀತಿಯು ಶೀಘ್ರದಲ್ಲೇ ಇನ್ನೊಂದು ಬಾರಿ ಬೆಳಗಾವಿಯಲ್ಲಿ ಸಭೆ ಸೇರಲಿದ್ದು,ಒಟ್ಡು ನಾಲ್ಕು ಹೆಸರುಗಳನ್ನು ಶಿಫಾರಸು ಮಾಡಲಿದೆ ಎಂದು ಗೊತ್ತಾಗಿದೆ.

ಕಾಂಗ್ರೆಸ್ ಪಕ್ಷದ ನಂಬಲರ್ಹ ಮೂಲಗಳ ಪ್ರಕಾರ ಸತೀಶ್ ಜಾರಕಿಹೊಳಿ,ಚನ್ನರಾಜ್ ಹಟ್ಟಿಹೊಳಿ,ಮಹಾಂತೇಶ್ ಕೌಜಲಗಿ,ಅನೀಲ್ ಲಾಡ್,ಮತ್ತು ಅಂಜಲಿ ನಿಂಬಾಳ್ಕರ್ ಅವರ ಹೆಸರು ಶಿಫಾರಸು ಮಾಡಿದ್ರೂ ಅಂತಿಮವಾಗಿ ಚನ್ನರಾಜ್ ಹಟ್ಟಿಹೊಳಿ ಅವರಿಗೆ ಟಿಕೆಟ್ ಕೊಡುವ ತೀರ್ಮಾಣ ಆಗಿಬಿಟ್ಟಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಕೆಪಿಸಿಸಿ ಅಧಿಕೃತವಾಗಿ ಅಭ್ಯರ್ಥಿಯ ಘೋಷಣೆ ಮಾಡುವದಷ್ಟೇ ಬಾಕಿ ಇದೆ.

Check Also

ದ ಮೇಕರ್ ಆಫ್ ನ್ಯೂ ಇಂಡಿಯಾ ಪುಸ್ತಕ ರೆಡಿ ಮಾಡಿದವರು ಯಾರು ಗೊತ್ತಾ..??

ಪ್ರಾಮಿಸ್ಡ್ ನೇಷನ್’ ಪ್ರಧಾನಿಗೆ ಅರ್ಪಣೆ * ಹುಬ್ಬಳ್ಳಿಯ ‘ಸೆನ್ಸ್ ಎಸೆನ್ಸ್’ ಸಂಸ್ಥೆಯಿಂದ ಅಂಧರಿಗಾಗಿ ಸಿದ್ಧಪಡಿಸಿದ ಪುಸ್ತಕ ಬೆಂಗಳೂರು ದೇಶದ ಏಳು …

Leave a Reply

Your email address will not be published. Required fields are marked *