Breaking News
Home / Breaking News / ಝಿರೋ ಟ್ರಾಫಿಕ್ ನಲ್ಲಿ ಧಾರವಾಡದಿಂದ ಬೆಳಗಾವಿಗೆ ಬರುತ್ತಿದೆ ಕಿಡ್ನಿ….

ಝಿರೋ ಟ್ರಾಫಿಕ್ ನಲ್ಲಿ ಧಾರವಾಡದಿಂದ ಬೆಳಗಾವಿಗೆ ಬರುತ್ತಿದೆ ಕಿಡ್ನಿ….

ಬೆಳಗಾವಿ- 15 ರ ಯುವತಿಯ ಹೃದಯವನ್ನು ಧಾರವಾಡದ ಎಸ್ ಡಿ ಎಂ ಹಾಸ್ಪಿಟಲ್‌ ನಿಂದ ಬೆಳಗಾವಿಯ ಕೆ.ಎಲ್ ಇ ಆಸ್ಪತ್ರೆಗೆ ಗ್ರೀನ್ ಕಾರಿಡಾರ್ ಮೂಲಕ ತಂದು ಮುಸ್ಲೀಂ ಯುವಕನಿಗೆ ಈ ಹೃದಯ ಕಸಿ ಮಾಡಿದ ಬೆನ್ನಲ್ಲಿಯೇ ಈಗ ಮತ್ತೊಂದು ಅಂಗಾಗ ಬೆಳಗಾವಿಗೆ ಬರುತ್ತಿದೆ.

ಧಾರವಾಡದ ಎಸ್ ಡಿ ಎಂ ಆಸ್ಪತ್ರೆಯಿಂದ ಕಿಡ್ನಿಯನ್ನು ಅಂಬ್ಯುಲೆನ್ಸ್ ಮೂಲಕ ಝಿರೋ ಟ್ರಾಫಿಕ್ ಮೂಲಕ ಬೆಳಗಾವಿಗೆ ತರಲಾಗುತ್ತಿದೆ.ಇನ್ನು ಕೆಲವೇ ಕ್ಷಣಗಳಲ್ಲಿ ಈ ಅಂಬ್ಯುಲೆನ್ಸ್ ಬೆಳಗಾವಿಗೆ ತಲುಪಲಿದೆ.

ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಅವರು ಖುದ್ದಾಗಿ ನಿಂತು ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದು , ಇತ್ತ ಕೆ.ಎಲ್ ಇ ಆಸ್ಪತ್ರೆಯಲ್ಲಿ ಧಾರವಾಡದಿಂದ. ಬರುತ್ತಿರುವ ಕಿಡ್ನಿಯನ್ನು ಮತ್ತೊಬ್ಬನಿಗೆ ಜೋಡಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ.

Check Also

ಮನೆ,ಮನೆಗೆ ಹೋಗಿ ಮತದಾರರ ಚೀಟಿ ವಿತರಿಸಲು ಡಿಸಿ ನಿತೇಶ್ ಪಾಟೀಲ್ ಸೂಚನೆ

ಬೆಳಗಾವಿ, ):ಮತದಾರರಿಗೆ ತಮ್ಮ ಮತಗಟ್ಟೆಗಳ ಬಗ್ಗೆ ಮುಂಚಿತವಾಗಿ ಮತದಾರರ ಚೀಟಿ(ವೋಟರ್ ಸ್ಲಿಪ್)ಗಳನ್ನು ನೀಡಿದರೆ ಮತದಾನ ಮಾಡಲು ಅನುಕೂಲವಾಗಲಿದೆ. ಆದ್ದರಿಂದ ಪ್ರತಿಯೊಂದು …

Leave a Reply

Your email address will not be published. Required fields are marked *