Breaking News
Home / Breaking News / IPL ಕ್ರಿಕೇಟ್ ಹಂಗಾಮಾ,ಬೆಟ್ಟಿಂಗ್ ಮಾಫಿಯಾ ಮೇಲೆ ಪೋಲೀಸರ ಹದ್ದಿನ ಕಣ್ಣು..!!!

IPL ಕ್ರಿಕೇಟ್ ಹಂಗಾಮಾ,ಬೆಟ್ಟಿಂಗ್ ಮಾಫಿಯಾ ಮೇಲೆ ಪೋಲೀಸರ ಹದ್ದಿನ ಕಣ್ಣು..!!!

ಬೆಳಗಾವಿ- ಐಪಿಎಲ್ ಕ್ರಿಕೆಟ್ ಹಂಗಾಮಾ ಶುರುವಾಗಿದೆ ಎಲ್ಲಿ ನೋಡಿದರೂ ಕ್ರಕೇಟ್ ಬಗ್ಗೆ ಚರ್ಚೆ ನಡೆಯುತ್ತಿದೆ ಸೂರ್ಯಾಸ್ತವಾಗುತ್ತಿದ್ದಂತೆಯೇ ಕ್ರಿಕೆಟ್ ಪ್ರೇಮಿಗಳು ಮನೆ ಸೇರಿ ಟಿವ್ಹಿ ಎದುರು ಠಿಖಾನಿ ಹೂಡುವ ದೃಶ್ಯಗಳು ಈಗ ಸಾಮಾನ್ಯವಾಗಿದೆ

ನಗರದ ದೊಡ್ಡ ದೊಡ್ಡ ಹೊಟೇಲ್ ಗಳಲ್ಲಿ ದೊಡ್ಡ ದೊಡ್ಡ ಸ್ಕ್ರೀನ್ ಹಾಕಿ ಕ್ರಿಕೆಟ್ ಪ್ರೇಮಿಗಳನ್ನು ಆಕರ್ಷಿಸಲಾಗುತ್ತಿದೆ ನಗರದಲ್ಲಿ ಕ್ರಿಕೇಟ್ ಕ್ರೇಜ್ ಹೆಚ್ಚಾಗಿದೆ ಆದರೆ ಕ್ರಿಕೇಟ್ ಅಭಮಾನಿಗಳ ಅಭಿಮಾನದ ಹೊಳೆಯಲ್ಲಿ ಡೈವ್ ಹೊಡೆಯಲು ಬೆಟ್ಟಿಂಗ್ ಬುಕ್ಕಿಗಳು ಜಾಲ ಬೀಸಿದ್ದಾರೆ

ನಗರದಲ್ಲಿ ಸದ್ದಿಲ್ಲದೇ ಬೆಟ್ಟಿಂಗ್ ಮಾಫಿಯಾ ಬಾಲ ಬಿಚ್ಚಿದೆ ಲಕ್ಷಗಟ್ಟಲೆ ಬೆಟ್ಟಿಂಗ್ ನಡೆಯುತ್ತಿದೆ ಎನ್ನುವ ಸುದ್ಧಿ ಜಿಲ್ಲೆಯಾದ್ಯಂತ ಪ್ರಚಾರ ಪಡೆದಿದೆ.ಬೆಕ್ಕು ಕಣ್ಮುಚ್ಚಿ ಹಾಲು ಕುಡಿದರೆ ಜಗತ್ತಿಗೆ ಗೊತ್ತಾಗುವದೇ ಇಲ್ಲ ಎನ್ನುವ ರೀತಿಯಲ್ಲಿ ಬೆಟ್ಟಿಂಗ್ ಬುಕ್ಕಿಗಳು ತಮ್ಮ ಕೈಚಳಕ ತೋರಿಸುತ್ತಿದ್ದಾರೆ

ಆದರೆ ಪೋಲೀಸರೂ ಬೆಟ್ಟಿಂಗ್ ಮಾಫಿಯಾ ಮೇಲೆ ಹದ್ದಿನ ಕಣ್ಣಿಟ್ಟು ಎಲ್ಲಿ ಬೆಟ್ಟಿಂಗ್ ನಡೀತಾ ಇದೆ ಬುಕ್ಕಿಗಳು ಯಾರು? ಎನ್ನುವ ಮಾಹಿತಿಯನ್ನು ಕಲೆ ಹಾಕಿ ಬುಕ್ಕಿಗಳ ಪತ್ತೆಗೆ ಜಾಲ ಬೀಸಿದ್ದಾರೆ ಪೋಲೀಸರ ತಂಡ ಬುಕ್ಕಿಗಳನ್ನು ಬಲೆಗೆ ಬೀಳಿಸಲು ಸದ್ದಿಲ್ಲದೇ ಕಾರ್ಯಾಚರಣೆ ನಡೆಸಿದೆ

ಬೆಟ್ಟಿಂಗ್ ಹಾವಳಿಯಲ್ಲಿ ಸಿಲುಕಿ ಲಕ್ಷಗಟ್ಟಲೇ ಸಾಲ ಮಾಡಿ ಮುಗ್ಧರು ಬಲಿಯಾದ ಅನೇಕ ಉಧಾಹರಣೆಗಳು ಇವೆ ಕ್ರಿಕೆಟ್ ಬೆಟ್ಟಿಂಗ್ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಸಿಕ್ಕಲ್ಲಿ ತಕ್ಷಣ ಪೋಲೀಸರಿಗೆ ಮಾಹಿತಿ ನೀಡುವದು ಅತ್ಯಗತ್ಯವಾಗಿದೆ

Check Also

ವಿವೇಕರಾವ್ ಪಾಟೀಲ ಇಂದು ಬಿಜೆಪಿಗೆ ಸೇರ್ಪಡೆ…!!

ಬೆಳಗಾವಿ- ಪ್ರತಾಪ್ ರಾವ್ ಪಾಟೀಲ್ ಚಿಕ್ಕೋಡಿ ಅಭ್ಯರ್ಥಿಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ ಬೆನ್ನಲ್ಲಿಯೇ ನಿರೀಕ್ಷೆಯಂತೆ ಇಂದು ಹುಕ್ಕೇರಿಯಲ್ಲಿ ಅಮೀತ್ ಶಾ …

Leave a Reply

Your email address will not be published. Required fields are marked *