Home / Breaking News / ಹಳ್ಳ ಹಿಡಿದ ಬೇಸ್ ಮೇಟ್ ತೆರವು ಕಾರ್ಯಾಚರಣೆ…!!!

ಹಳ್ಳ ಹಿಡಿದ ಬೇಸ್ ಮೇಟ್ ತೆರವು ಕಾರ್ಯಾಚರಣೆ…!!!

 

 

ಬೆಳಗಾವಿ- ನಗರದ ಬೃಹತ್ ವಾಣಿಜ್ಯ ಮಳಿಗೆಗಳ ಬೇಸ್ ಮೇಟ್ ನಲ್ಲಿರುವ ಮಳಿಗೆಗಳನ್ನು ತೆರವು ಮಾಡಿ ಬೇಸ್ ಮೇಟ್ ಗಳನ್ನು ಪಾರ್ಕಿಂಗ್ ಗೆ ಅನಕೂಲ ಮಾಡಿ ಕೊಡುವ ಪಾಲಿಕೆ ಆಯುಕ್ತ ಶಶಿಧರ ಕುರೇರ ನಡೆಸಿದ ಕಾರ್ಯಾಚರಣೆ ಹಳ್ಳ ಹಿಡಿದಂತಾಗಿದೆ

ನಗರದಲ್ಲಿರುವ ಸುಮಾರು ನಾಲ್ಕು ನೂರಕ್ಕೂ ಹೆಚ್ಚು ಬೇಸ್ ಮೇಟ್ ಗಳನ್ನು ತೆರವು ಮಾಡಬೇಕು ಎನ್ನುವ ಬೇಡಿಕೆ ಇಂದು ನಿನ್ನೆಯದಲ್ಲ ಹಲವಾರು ವರ್ಷಗಳಿಂದ ಬೇಸ್ ಮೇಟ್ ತೆರವು ಮಾಡುವಂತೆ ನಗರದ ವಿವಿಧ ಸಂಘಟನೆಗಳು ಹೋರಾಟ ಮಾಡಿವೆ ಜೊತೆಗೆ ಅನೇಕ ಪತ್ರಿಕೆಗಳು ಸರಣಿ ರೂಪದಲ್ಲಿ ವರದಿಗಳನ್ನು ಪ್ರಕಟಿಸಿವೆ
ಪ್ರಿಯಾಂಕಾ ಪ್ರಾನ್ಸೀಸ್ ಅವರು ಪಾಲಿಕೆ ಆಯುಕ್ತರಾಗಿದ್ದಾಗ ಬೇಸ್ ಮೇಟ್ ಗಳನ್ನು ತೆರವು ಮಾಡುವ ಪ್ರಯತ್ನ ಮಾಡಿದಾಗ ಅವರನ್ನು ಸ್ಥಳೀಯ ರಾಜಕಾರಣಿಗಳು ಪ್ರಿಯಾಂಕಾ ಪ್ರಾನ್ಸಿಸ್ ಅವರನ್ನು ಎತ್ತಂಗಡಿ ಮಾಡಿದರು
ಇದಾದ ಬಳಿಕ ಆಯುಕ್ತರಾಗಿದ್ದ ರವಿಕುಮಾರ್ ಬೇಸ್ ಮೇಟ್ ಮತ್ತು ರಸ್ತೆ ಅಗಲೀಕರಣ ಕೈ ಹಾಕಿ ರಾಜಕಾರಣಿಗಳ ಒತ್ತಡಕ್ಕೆ ಮಣಿಯದೇ ಕೆಲವು ರಸ್ತೆಗಳನ್ನು ಅಗಲೀಕರಣ ಮಾಡಿ ಕಾರ್ಯಾಚರಣೆ ಪೂರ್ಣವಾಗಿ ಮುಗಿಸದೇ ಇಲ್ಲಿಂದ ಟ್ರಾನ್ಸಫರ್ ಆದರು

ಇದಾದ ಬಳಿಕ ಆಯುಕ್ತ ಜಿ ಪ್ರಭು ಅವರು ಬೇಸ್ ಮೇಟ್ ತೆರವು ಮಾಡುವ ಪ್ರಯತ್ನ ಮಾಡಿದರು ಅವರೂ ಕೂಡಾ ಸಫಲರಾಗಲು ಸ್ಥಳೀಯ ರಾಜಕಾರಣಿಗಳು ಬಿಡಲಿಲ್ಲ
ಈಗ ಪಾಲಿಕೆ ಆಯುಕ್ತ ಶಶಿಧರ ಕುರೇರ ಅವರು ಬೇಸ್ ಮೇಟ್ ಗಳ ವಿರುದ್ಧ ಸಮರ ಸಾರಿ ನಗರದ ಖಡೇಬಝಾರ್,ಗಣಪತಿ ಗಲ್ಲಿ ಮಾರುತಿ ಗಲ್ಲಿಯ ಬೇಸ್ ಮೇಟ್ ಗಳನ್ನು ದ್ವಂಸ ಮಾಡಿದಾಗ ಸ್ಥಳೀಯ ಶಾಸಕ ಫಿರೋಜ್ ಸೇಠ ಗ್ರಾಮೀಣ ಶಾಸಕ ಸಂಜಯ ಪಾಟೀಲ ಮತ್ತು ಬಿಜೆಪಿ ಮುಖಂಡ ಅನೀಲ ಬೆನಕೆ ಪಾಲಿಕೆ ಆಯುಕ್ತರ ವಿರುದ್ಧ ಗರಂ ಆಗಿ ಕಾರ್ಯಾಚರಣೆ ನಿಲ್ಲಿಸಿರುವ ವಿಷಯ ಈಗ ಚರ್ಚೆಗೆ ಗ್ರಾಸವಾಗಿದೆ
ಸ್ಥಳೀಯ ರಾಜಕಾರಣಿಗಳ ಒತ್ತಡದ ಪರಿಣಾಮ ಬೇಸ್ ಮೇಟ್ ತೆರವು ಕಾರ್ಯಾಚರಣೆ ಹಳ್ಳ ಹಿಡಿದಂತಾಗಿದೆ ಬಂದ್ ಆಗಿದ್ದ ಬೇಸ್ ಮೇಟ್ ಮಳಿಗೆಗಳಲ್ಲಿ ವ್ಯಾಪಾರ ವಹಿವಾಟು ಮತ್ತೆ ಮುಂದುವರೆದಿದೆ
ಬೇಸ್ ಮೇಟ್ ತೆರವು ಮಾಡುವಂತೆ ಅನೇಕ ಸಂಘಟನೆಗಳು ನಡೆಸಿದ ಹೋರಾಟ ವ್ಯರ್ಥ ವಾಗಿದೆ ಪಾಲಿಕೆ ಆಯುಕ್ತ ಶಶಿಧರ ಕುರೇರ ಅವರ ತೆಗೆದು ಕೊಂಡ ದಿಟ್ಟ ನಿರ್ಧಾರ ಸಾಕಾರ ಗೊಳ್ಳುವ ಮೊದಲೇ ನುಚ್ಚು ನೂರಾಗಿದೆ

ಬೇಸ್ ಮೇಟ್ ತೆರವು ಕಾರ್ಯಾಚರಣೆ ಸಫಲ ಆಗಬೇಕಾದರೆ ನಗರದ ವಿವಿಧ ಜನಪರ ಸಂಘಟನೆಗಳು ಪಾಲಿಕೆ ಆಯುಕ್ತರ ಬೆಂಬಲಕ್ಕೆ ನಿಲ್ಲುವದು ಅನಿವಾರ್ಯ
ಒಬ್ಬ ಅಧಿಕಾರಿ ಜನರ ಪರವಾಗಿ ದಿಟ್ಟ ನಿರ್ಧಾರ ಕೈಗೊಂಡಾಗ ಅವರ ಜೊತೆ ಸಾರ್ವಜನಿಕರು ಮತ್ತು ಜನಪರ ಸಂಘಟನೆಗಳು ಕೈಜೋಡಿಸಿದರೇ ಮಾತ್ರ ಕಂಡ ಕನಸು ನನಸಾಗ ಬಹುದು

Check Also

ಆಮೀಷಗಳಿಗೆ ಬಲಿಯಾಗಬೇಡಿ, -ಬಾಲಚಂದ್ರ ಜಾರಕಿಹೊಳಿ

ಮೂಡಲಗಿ- ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರ ಪರ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮತಬೇಟೆ ಮುಂದುವರೆಸಿದ್ದಾರೆ‌ …

Leave a Reply

Your email address will not be published. Required fields are marked *