ಬೆಳಗಾವಿ- ಹಲಗಾ ಸಮೀಪ ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಕಿತ್ತೂರ ತಾಲ್ಲೂಕಿನ ಬೈಲೂರ ಗ್ರಾಮದ ಯುವಕನೊಬ್ಬ ಸಾವನ್ನಪ್ಪಿದ್ದು ಇನ್ನೊಬ್ಬನ ಸ್ಥಿತಿ ಚಿಂತಾಜನಕವಾಗಿದೆ
ಬೈಲೂರ ಗ್ರಾಮದ ಶಂಕರಗೌಡ ಬಸನಗೌಡ ಹನಮಸಾಗರ 28 ಮೃತ ದುರ್ದೈವಿಯಾಗಿದ್ದು ನಾಗೇಶ ಚನ್ನಬಸಪ್ಪ ಜಿಂಗೋಡಿ ಎಂಬಾತ ಗಂಭೀರವಾಗಿ ಗಾಯಗೊಂಡು ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ
ಇವರಿಬ್ಬರು ಅನಮೋಡ ದಿಂದ ಬೈಲೂರಿಗೆ ತೆರಳುವಾಗ ಹಲಗಾ ಸಮೀಪ ಬೈಕ್ ನಿಯಂತ್ರಣ ತಪ್ಪಿ ಡುವೈಡರ್ ಗೆ ಡಿಕ್ಕಿ ಹೊಡೆದಿದೆ ಹಿರೇಬಾಗೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ