Breaking News
Home / Uncategorized / ಪೀರನವಾಡಿ ವಿವಾದ ಎಡಿಜಿಪಿ ಸಂಧಾನ ಸಕ್ಸೆಸ್…..!

ಪೀರನವಾಡಿ ವಿವಾದ ಎಡಿಜಿಪಿ ಸಂಧಾನ ಸಕ್ಸೆಸ್…..!

.

ಬೆಳಗಾವಿ- ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾಪನೆ ವಿವಾದ ಸಂಬಂಧಿಸಿದಂತೆ ಇಂದು ಬೆಳಗಾವಿಯಲ್ಲಿ ಎಡಿಜಿಪಿ ಅಮರಕುಮಾರ್ ಪಾಂಡೆ ಅವರು ನಡೆಸಿದ, ಸಂಧಾನಸಭೆ ಸಕ್ಸಸ್ ಆಗಿದೆ

ಎಡಿಜಿಪಿ ಅಮರಕುಮಾರ ಪಾಂಡೆ ಅವರು ನಡೆಸಿದ ಕನ್ನಡಿಗರ – ಮರಾಠಿಗ ಭಾಷಿಕ ಮುಖಂಡರ ಜೊತೆ ನಡೆದ ಸಭೆ ಸಫಲವಾಗಿದೆ.

ಪೀರನವಾಡಿಯ ಲಕ್ಷ್ಮೀ ಮಹಲ್ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಕನ್ನಡ ಮತ್ತು ಮರಾಠಿ ಭಾಷಿಕರ ನಾಯಕರ ಸಭೆಯಲ್ಲಿ ಸೌಹಾರ್ದಯುತ ಸಲಹೆಗಳು ಪ್ರಸ್ತಾಪವಾಗಿ ವಿವಾದಕ್ಕೆ ಬಹುತೇಕ ತೆರೆಬಿದ್ದಿದೆ.

ರಾಯಣ್ಣ ಅಭಿಮಾನಿಗಳು ಪ್ರತಿಷ್ಠಾಪಿಸಿದ ಸ್ಥಳದಲ್ಲೇ ರಾಯಣ್ಣ ಪ್ರತಿಮೆ ಇರಲು ಮರಾಠಿ ಭಾಷಿಕರ ಒಪ್ಪಿಗೆ ಕೊಟ್ಟಿದ್ದಾರೆ. ಮೂರ್ತಿ ಪ್ರತಿಷ್ಠಾಪಿಸಿದ ವೃತ್ತಕ್ಕೆ ‘ಶಿವಾಜಿ ವೃತ್ತ’ ಎಂದು ನಾಮಕರಣಕ್ಕೆ ಕನ್ನಡಪರ ಮುಖಂಡರ ಒಪ್ಪಿಗೆ ಸೂಚಿಸಿದ್ದಾರೆ,ಎಂದು ತಿಳಿದು ಬಂದಿದ್ದು ಕನ್ನಡ ಮತ್ತು ಮರಾಠಿ ಭಾಷಿಕರ ಜೊತೆ ‌ನಡೆದ ಸಂಧಾನಸಭೆ ಸಫಲವಾಗಿದೆ.

ಡಿಸಿ ಎಂ.ಜಿ.ಹಿರೇಮಠ, ಎಡಿಜಿಪಿ ಅಮರಕುಮಾರ್ ಪಾಂಡೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪೀರನವಾಡಿ ವಿವಾದಕ್ಕೆ ಸೌಹಾರ್ದತೆಯ ತೆರೆ ಬಿದ್ದಿದೆ.

Check Also

ರದ್ದಾದ ಯೋಜನೆಗೆ ಮತ್ತೇ ಲೀಫ್ಟ್….ಶಾಸಕ ಅಭಯ ಪಾಟೀಲರಿಂದ ಬೆಳಗಾವಿಗೆ ಸ್ಪೇಷಲ್ ಗೀಫ್ಟ್….!

ಬೆಳಗಾವಿ-ಬೆಳಗಾವಿ ಮಹಾನಗರದ ಅಭಿವೃದ್ಧಿಯ ದೂರದೃಷ್ಟಿ ಹೊಂದಿರುವ ಶಾಸಕ ಅಭಯ ಪಾಟೀಲ ಅವರು ಸದ್ದಿಲ್ಲದೇ ಬೆಳಗಾವಿಯಿಂದ ಕೈಬಿಟ್ಟು ಹೋಗಿದ್ದ ನಿರಂತರ ನೀರು …

Leave a Reply

Your email address will not be published. Required fields are marked *