ಪ್ರಧಾನಿ ಮೋದಿ ವಿರುದ್ಧ ಟಿಕ್ ಟಾಕ್ ವಿಡಿಯೋ ಮಾಡಿದ ಬೆಳಗಾವಿ ಜಿಲ್ಲೆಯ ಅಮನ್ ಅವಟೆ ಅರೆಸ್ಟ್…

ಬೆಳಗಾವಿ- ಪ್ರಧಾನಿ ಮೋದಿ,ಅಮೀತ ಷಾ,ಯೋಗಿ ಆದಿತ್ಯನಾಥ ವಿರುದ್ಧ ದಿನಕ್ಕೊಂದು ಟಿಕ್ ಟ್ಯಾಕ್ ಮಾಡಿ ಸೋಸಿಯಲ್ ಮಿಡಿಯಾದಲ್ಲಿ ಈ ವಿಡಿಯೋಗಳನ್ನು ಅಪ್ ಲೋಡ್ ಮಾಡುತ್ತಿದ್ದ ಸಂಕೇಶ್ವರದ ಆಸಾಮಿಯೊಬ್ಬ ಈಗ ಅರೆಸ್ಟ್ ಆಗಿದ್ದಾನೆ  ಬಂಧಿತ ಯುವಕನನ್ನು ನಗರದ ನಮಾಜ್ ಮಾಳದ ನಿವಾಸಿ ಅಮನ್ ವಾಹಿದ್ ಅವಟೆ ಎಂದು ಪೊಲೀಸರು‌ ತಿಳಿಸಿದ್ದಾರೆ.

ಅಮನ್ ಈತ ಕಳೆದ ಎರಡು ದಿನಗಳ‌ ಹಿಂದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ ಶಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ ಅವರ ಪೊಟೊಗಳನ್ನು ಉಪಯೋಗಿಸಿ ಒಂದು ಹಾಡಿನ ಮೂಲಕ ಅವಹೇಳ ಮಾಡಿರುವ ವಿಡಿಯೋ ಹಾಗೂ ಪ್ರಧಾನಿ ಮೋದಿ ಅವರು ಗಂಗಾ ವಿಕ್ಷಣೆ ಸಮಯದಲ್ಲಿ ಮುಗ್ಗರಿಸಿ ಬಿದ್ದಿರುವ ವಿಡಿಯೋಗೆ ಅವಹೇಳನ ಮಾಡಿರುವ ವಿಡಿಯೋಗಳನ್ನು ತಯಾರಿಸಿ ಅವುಗಳನ್ನು ಸಾಮಾಜಿಕ ಅಂತರ ಜಾಲದ‌ ಮೂಲಕ ಹರಿಬಿಟ್ಟಿದ್ದನು. ಈ‌ ಕುರಿತು ಸಾರ್ವಜನಿಕರಲ್ಲಿ ಗಲಭೆ ಸೃಷ್ಟಿಸುವ ಚಟುವಟಿಕೆ ಮಾಡುವ ಆರೋಪದಡಿಯಲ್ಲಿ ಸಂಕೇಶ್ವರ ಪೊಲೀಸರು ಅಮನ್ ಅವಟೆ ಇತನನ್ನು ಬಂಧಿಸಿದ್ದಾರೆ. ಈ ಕುರಿತು ಸಂಕೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *