ಬೆಳಗಾವಿ- ಗೋಕಾಕ ಕ್ಷೇತ್ರದಲ್ಲಿ ಹೈ ವೋಲ್ಟೇಜ್ ಪಾಲಿಟಿಕ್ಸ ನಡೆಯುತ್ತಿದೆ.ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಸರ್ಕಾರ ಪತನಗೊಳಿಸಿದ ಅನರ್ಹ ಶಾಸಕರ ಗ್ರೂಪ್ ಲೀಡರ್ ರಮೇಶ್ ಜಾರಕಿಹೊಳಿ ಅವರನ್ನು ಸೋಲೀಸಲು ಬೆಂಗಳೂರಿನಲ್ಲಿ ಕುಳಿತುಕೊಂಡೇ ಅಖಾಡಾ ರೆಡಿ ಮಾಡುತ್ತಿದ್ದಾರೆ.
ಗೋಕಾಕಿನ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಅವರಿಗೆ ಅರ್ಜಂಟ್ ಬೆಂಗಳೂರಿಗೆ ಬುಲಾವ್ ಬಂದಿದ್ದು ಅಶೋಕ ಪೂಜಾರಿ ಇಂದು ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿಯಾಗಲು ಬೆಂಗಳೂರಿಗೆ ಹೊರಟಿದ್ದಾರೆ ಇಂದು ಬೆಂಗಳೂರಿನಲ್ಲಿ ಗೋಕಾಕ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ರಣತಂತ್ರ ರೂಪಿಸಲಾಗುತ್ತಿದೆ.ಅಶೋಕ ಪೂಜಾರಿಯವರ ಬೆಂಗಳೂರು ಭೇಟಿ ಮಹತ್ವ ಪಡೆದುಕೊಂಡಿದ್ದು ಶುಕ್ರವಾರದಿಂದ ಮಾಜಿ ಮಂತ್ರಿ ಸಾರಾ ಮಹೇಶ್ ಚುನಾವಣೆ ಮುಗಿಯುವವರೆಗೂ ಗೋಕಾಕಿನಲ್ಲೇ ಠಿಖಾನಿ ಹೂಡಲಿದ್ದಾರೆ .
ಅಶೋಕ ಪೂಜಾರಿಯವರ ಪರ ಪ್ರಚಾರಕ್ಕಾಗಿ ಯುವ ಸಮುದಾಯದ ಮತ ಸೆಳೆಯಲು ನಿಖಿಲ್ ಕುಮಾರಸ್ವಾಮಿ ನಾಲ್ಕು ದಿನ ಗೋಕಾಕಿನಲ್ಲೇ ವಾಸ್ತವ್ಯ ಮಾಡಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಜೆಡಿಎಸ್ ಪಕ್ಷದ ನಾಯಕರು ಮತ್ತು ಜಾರಕಿಹೊಳಿ ಸಹೋದರರ ವಿರೋಧಿಗಳು ಇಬ್ಬರು ಸೇರಿಕೊಂಡೇ ರಣತಂತ್ರ ರೂಪಿಸುತ್ತಿದ್ದು ಸಾರಾ ಮಹೇಶ್ ಗೋಕಾಕಿಗೆ ಬಂದ ಬಳಿಕ ಜೆಡಿಎಸ್ ತನ್ನ ಬತ್ತಳಿಕೆಯಿಂದ ಬಾಣಗಳನ್ನು ಬಿಡಲು ನಿರ್ಧರಿಸಿದೆ.
ಅಶೋಕ ಪೂಜಾರಿ ಬೆಂಗಳೂರಿಗೆ ಹೋಗಿ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಮಾತ್ರ ಭೇಟಿ ಆಗ್ತಾರಾ ಅಥವಾ ಬೇರೆ ಪಕ್ಷದ ಪ್ರಭಾವಿ ನಾಯಕರ ಜೊತೆ ಅವರ ಮೀಟಿಂಗ್ ಫಿಕ್ಸ ಆಗಿದೆಯಾ.? ಎನ್ನೋದು ತೀವ್ರ ಕುತೂಹಲ ಕೆರಳಿಸಿದೆ
ಇನ್ನೊಂದೆಡೆ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದು ಸಹೋದರ ಬಾಲಚಂದ್ರ ಜಾರಕಿಹೊಳಿ ನಿನ್ನೆಯಿಂದ ಅಖಾಡಾಕ್ಕೆ ಇಳಿದಿದ್ದಾರೆ ಸಹೋದರನಿಗೆ ಫುಲ್ ಸಾಥ್ ಕೊಡುತ್ತಿದ್ದಾರೆ
ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕೊಹೊಳಿ ಮತ್ತು ಸತೀಶ್ ಜಾರಕಿಹೊಳಿ ಅವರು ಗೋಕಾಕ್ ಕ್ಷೇತ್ರದಲ್ಲಿ ಕೈ ಬಲಪಡಿಸಲು ಭರ್ಜರಿ ಪ್ರಚಾರ ನಡೆಸಿದ್ದಾರೆ.