Breaking News
Home / Uncategorized / ಪಕ್ಷ ದ್ರೋಹದ ಆರೋಪ ನನಗೆ ಅನ್ವಯಿಸುವದಿಲ್ಲ- ಅಶೋಕ ಪೂಜಾರಿ

ಪಕ್ಷ ದ್ರೋಹದ ಆರೋಪ ನನಗೆ ಅನ್ವಯಿಸುವದಿಲ್ಲ- ಅಶೋಕ ಪೂಜಾರಿ

ಬೆಳಗಾವಿ-ಯಾವುದೇ ಕಾರಣಕ್ಕೂ ನಾಮಪತ್ರ ವಾಪಸ್ ಪಡೆಯಲ್ಲ, ಚುನಾವಣೆ ಸ್ಪರ್ಧೆಗೆ ಬದ್ಧನಾಗಿದ್ದೇನೆ ಕಣದಿಂದ ವಾಪಸ್ ಹೋಗುವ ಪ್ರಶ್ನೇಯೇ ಉದ್ಭವಿಸುವದಿಲ್ಲ ಎಂದು ಗೋಕಾಕ್‌ದಲ್ಲಿ ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿ ಹೇಳಿದ್ದಾರೆ.

ಹೆಚ್‌ಡಿಕೆ‌ ಇಂದು ರಾತ್ರಿ ಸಭೆ ಕರೆದಿದ್ದು ಸಂಜೆ ಬೆಂಗಳೂರಿಗೆ ತೆರಳುವೆ ಚುನಾವಣಾ ಸಿದ್ಧತೆ, ಪ್ರಚಾರ ಬಗ್ಗೆ ಮಾತುಕತೆಗೆ ಸಭೆ ಕರೆದಿದ್ದಾರೆ ಜೆಡಿಎಸ್ ಪಕ್ಷದ ಎಲ್ಲ ನಾಯಕರಿಂದಲೂ ಗೋಕಾಕ್‌ದಲ್ಲಿ ಪ್ರಚಾರ ನಡೆಯಲಿದೆ ಎಂದು ಅಶೋಕ ಪೂಜಾರಿ ಹೇಳಿದ್ದಾರೆ.

ಸಹಜವಾಗಿ ಸ್ಥಳೀಯ ಬಿಜೆಪಿ ನಾಯಕರು ಮನವೊಲಿಕೆಗೆ ಯತ್ನಿಸುತ್ತಿದ್ದಾರೆ
ಆದ್ರೆ ನಾನು ಸ್ಪರ್ಧೆಗೆ ಬದ್ಧನಿದ್ದೇನೆ ಎಂದ ಅಶೋಕ್ ಪೂಜಾರಿ
ಮಧ್ಯಾಹ್ನ ಮೂರು ಗಂಟೆಯವರೆಗೂ ಮನವೊಲಿಕೆಗೆ ನಾಯಕರ ಪ್ರಯತ್ನ ಸಹಜ ಎಂದರು

ಶನಿವಾರದಿಂದ ಗೋಕಾಕ್ ಕ್ಷೇತ್ರದಿಂದ ಚುನಾವಣಾ ಪ್ರಚಾರ ಆರಂಭಿಸುತ್ತೇನೆ
ನಾನು ಬಿಎಸ್‌ವೈಗೆ ಯಾವ ರೀತಿ ಮೋಸ‌ ಮಾಡಿದ್ದೇನೆ
ಶಾಸಕನಾಗಿ ಆಯ್ಕೆಯಾಗಿ ರಾಜೀನಾಮೆ ನೀಡಿದ್ರೆ ಮೋಸವಾಗುತ್ತೆ
ಪಕ್ಷ ದ್ರೋಹ ಆರೋಪ ನನಗೆ ಅನ್ವಯಿಸುವುದಿಲ್ಲ

ಗೋಕಾಕ್ ಸ್ಥಳೀಯ ಬಿಜೆಪಿ ನಾಯಕರು ನನ್ನ ಆತ್ಮೀಯರು
ಆದರೆ ರಾಜಕೀಯ‌ ನಿರ್ಧಾರ ನಾನೇ ತಗೆದುಕೊಳ್ಳಬೇಕು ಎಂದು ಅಶೋಕ ಪೂಜಾರಿ ಹೇಳಿದರು

Check Also

ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರ ಮುಖಕ್ಕೆ ಕಪ್ಪು ಮಸಿ ಎರಚಿದ್ರು…!!

ಬೆಳಗಾವಿ-ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಅವರ ಮುಖಕ್ಕೆ ಮಸಿ ಬಳಿದ ಘಟನೆ ಇಂದು ಮಹಾರಾಷ್ಟ್ರದ ಪೂನೆಯಯಲ್ಲಿ ನಡೆದಿದೆ. …

Leave a Reply

Your email address will not be published. Required fields are marked *