Breaking News
Home / Uncategorized / ಗೋಕಾಕ್ ಕ್ಷೇತ್ರದಿಂದ ಕಾಂಗ್ರೆಸ್ ಉಸ್ತುವಾರಿ ಲಕ್ಷ್ಮೀ ಹೆಬ್ಬಾಳಕರ ದೂರ ಉಳಿಯಲು ಕಾರಣವೇನು ???

ಗೋಕಾಕ್ ಕ್ಷೇತ್ರದಿಂದ ಕಾಂಗ್ರೆಸ್ ಉಸ್ತುವಾರಿ ಲಕ್ಷ್ಮೀ ಹೆಬ್ಬಾಳಕರ ದೂರ ಉಳಿಯಲು ಕಾರಣವೇನು ???

ಬೆಳಗಾವಿ-ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಲಿಂಗಾಯತ ಸಮುದಾಯದ ಪ್ರಬಲ ನಾಯಕಿ ಈ ನಾಯಕಿಯ ಅಗತ್ಯತೆ ಈಗ ಗೋಕಾಕಿನಲ್ಲಿ ಎದುರಾಗಿದೆ.ಸ್ವತಹ ಸತೀಶ್ ಜಾರಕಿಹೊಳಿ ಲಕ್ಷ್ಮೀ ಪವರ್ ಫುಲ್ ನಾಯಕಿ ಅಂತ ಅಧಿಕೃತವಾಗಿ ಘೋಷಣೆ ಮಾಡಿದ ಮೇಲೆಯೂ ಲಕ್ಷ್ಮೀ ಹೆಬ್ಬಾಳಕರ ಗೋಕಾಕಿನತ್ತ ಮುಖ ಮಾಡದೇ ಇರುವದು ಚರ್ಚೆಗೆ ಗ್ರಾಸವಾಗಿದೆ.
ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಗೋಕಾಕ ಕ್ಷೇತ್ರದ ಉಸ್ತುವಾರಿ ವಹಿಸಲಾಗಿತ್ತು .ಗೋಕಾಕಿನಲ್ಲಿ ಲಕ್ಷ್ಮೀ ಹೆಬ್ಬಾಳಕರ ಲಿಂಗಾಯತ ಸಮುದಾಯದ ಮತಗಳನ್ನು ಪಕ್ಷಕ್ಕೆ ತಂದು ಕೊಡಬಹುದು ಎಂದು ಲೆಕ್ಕ ಹಾಕಿ ಅವರಿಗೆ ಗೋಕಾಕ್ ಕ್ಷೇತ್ರದಲ್ಲಿ ಕಾಂಗ್ರೆಸ್ ಜವಾಬ್ದಾರಿ ಕೊಟ್ಟಿತ್ತು.ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರು ನಾಮಪತ್ರ ಸಲ್ಲಿಸುವಾಗ ಲಕ್ಷ್ಮೀ ಹೆಬ್ಬಾಳಕರ ಗೈರಾಗಿರುವದು ಅನೇಕ ಅನುಮಾನಗಳಿಗೆ ಎಡೆಮಾಡಿದೆ.

ಗೋಕಾಕ್ ಕ್ಷೇತ್ರದಲ್ಲಿ ಲಕ್ಷ್ಮೀ ಹೆಬ್ಬಾಳಕರ ಅವರ ಅವಶ್ಯಕತೆ ಇದೆ ಅವರು ಲಿಂಗಾಯತ ಸಮುದಾಯವನ್ನು ಓಲೈಸಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವು ತಂದುಕೊಡಬಹುದು ಜೊತೆಗೆ ಕಾಂಗ್ರೆಸ್ ಪಕ್ಷಕ್ಕೆ ಮೋಸ ಮಾಡಿದ ರಮೇಶ್ ಜಾರಕಿಹೊಳಿಗೂ ಪಾಠ ಕಲಿಸಬಹುದು ಎನ್ನುವ ಲೆಕ್ಕ ಹಾಕಿಕೊಂಡೇ ಲಕ್ಷ್ಮೀ ಗೆ ಗೋಕಾಕ್ ಕ್ಷೇತ್ರದ ಜವಾಬ್ದಾರಿ ನೀಡಿದರೂ ಲಕ್ಷ್ಮೀ ಹೆಬ್ಬಾಳಕರ ಗೋಕಾಕಿನತ್ತ ಮುಖ ಮಾಡದೇ ಇರುವದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.
ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿಯಲ್ಲಿ ಬದಲಾವಣೆ ಆಯಿತೇ..? ಬದಲಾವಣೆ ಆದಲ್ಲಿ ಈ ಬದಲಾವಣೆ ಮಾಡಿದವರು ಯಾರು..? ಲಕ್ಷ್ಮೀ ಹೆಬ್ಬಾಳಕರ ಪರೋಕ್ಷವಾಗಿ ಲಿಂಗಾಯತ ಸಮುದಾಯದ ಅಭ್ಯರ್ಥಿ ಯನ್ನು ಬೆಂಬಲಿಸಲು ಗೋಕಾಕ್ ಕ್ಷೇತ್ರದಿಂದ ದೂರ ಉಳಿದು ಎಲ್ಲ ಸಂಕಷ್ಟಗಳಿಂದ ಬಚಾವ್ ಆಗಲು ಹೆಬ್ಬಾಳಕರ ಎಂ ಬಿ ಪಾಟೀಲರ ಮೊರೆ ಹೋದರಾ..? ಈ ಎಲ್ಲ ಪ್ರಶ್ನೆಗಳಿಗೆ ಲಕ್ಷ್ಮೀ ಹೆಬ್ಬಾಳಕರ ಉತ್ತರ ಕೊಡಬೇಕಾಗಿದೆ.

ಲಕ್ಷ್ಮೀ ಹೆಬ್ಬಾಳಕರ ಪವರ್ ಫುಲ್ ನಾಯಕಿ ಎಂದು ಸತೀಶ್ ಜಾರಕಿಹೊಳಿ ಸಮರ್ಥನೆ ಮಾಡಿಕೊಂಡರೂ ಲಕ್ಷ್ಮೀ ಹೆಬ್ಬಾಳಕರ ಗೋಕಾಕ ಕ್ಷೇತ್ರದ ಕಡೆ ಮುಖ ಮಾಡದೇ ಇರುವದು ಚರ್ಚೆಗೆ ಗ್ರಾಸವಾಗಿದ್ದು ಗೋಕಾಕ್ ಕ್ಷೇತ್ರದಲ್ಲಿ ಲಕ್ಷ್ಮೀ ಹೆಬ್ಬಾಳಕರ ಮುಂದಿನ ನಡೆ ಏನು? ಅದನ್ನು ಅವರೇ ಹೇಳ ಬೇಕಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಕಷ್ಟದಲ್ಲಿದ್ದಾಗ ಲಕ್ಷ್ಮೀ ಹೆಬ್ಬಾಳಕರ ಅಲ್ಲಿ ಸ್ವ ಇಚ್ಛೆಯಿಂದ ಸಹಾಯ ಮಾಡಿದ್ದಾರೆ ಗೋಕಾಕ್ ಕ್ಷೇತ್ರದ ಬಗ್ಗೆ ಲಕ್ಷ್ಮೀ ಗೆ ಅಸಡ್ಡೆ ಏಕೆ ..? ಎನ್ನುವ ಪ್ರಶ್ನೆಗೆ ಗುಂಡುರಾವ್ ಉತ್ತರ ಕೊಡ್ತಾರಾ..? ಹೆಬ್ಬಾಳಕರ ಉತ್ತರ ಕೊಡ್ತಾರಾ‌..? ಕಾದು ನೋಡಬೇಕಾಗಿದೆ.

Check Also

ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರ ಮುಖಕ್ಕೆ ಕಪ್ಪು ಮಸಿ ಎರಚಿದ್ರು…!!

ಬೆಳಗಾವಿ-ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಅವರ ಮುಖಕ್ಕೆ ಮಸಿ ಬಳಿದ ಘಟನೆ ಇಂದು ಮಹಾರಾಷ್ಟ್ರದ ಪೂನೆಯಯಲ್ಲಿ ನಡೆದಿದೆ. …

Leave a Reply

Your email address will not be published. Required fields are marked *