Breaking News
Home / BGAdmin (page 18)

BGAdmin

ಯುವಕನ, ಆತ್ಮಹತ್ಯೆಗೆ ಬಂಧನದ ಭೀತಿಯೇ ಕಾರಣ..

ಬೆಳಗಾವಿ- ಊರಲ್ಲಿ ಗಲಾಟೆ ಮಾಡಿ,ಪೋಲೀಸರು ಬಂಧಿಸುತ್ತಾರೆ ಎಂದು ಹೆದರಿ,ಯುವಕನೊಬ್ಬ ಇಂದು ಮಧ್ಯಾಹ್ನ ಬೆಳಗಾವಿ ಡಿಸಿ ಕಚೇರಿಯಲ್ಲಿ ಪಿನೈಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಲಗಮೇಶ್ವರ್ ಗ್ರಾಮದ ಯುವಕ ಕುಮಾರ ಕೊಪ್ಪದ ಎಂಬಾತ ಈ ಹಿಂದೆ ಊರಲ್ಲಿ ಗಲಾಟೆ ಮಾಡಿದ್ದು ಇನ್ನೇನು ಪೋಲೀಸರು ಬಂದಿಸುತ್ತಾರೆ ಎಂದು ಹೆದರಿ ಬೆಳಗಾವಿಗೆ ಬಂದಿದ್ದ, ಬೆಳಗಾವಿಯಲ್ಲಿ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದ ಆದ್ರೆ ಸಂಭಂಧಿಕರಿಗೆ ಈತ ಗಲಾಟೆ ಮಾಡಿ ಬಂದಿರುವ ವಿಷಯ ಗೊತ್ತಾದ …

Read More »

ಬೆಳಗಾವಿ ಎಂದೆಂದಿಗೂ ಕರ್ನಾಟಕದ ಅವಿಭಾಜ್ಯ ಅಂಗ- ಹೆಬ್ಬಾಳಕರ್..

*ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ* *ಬೆಂಗಳೂರು* : ಬೆಳಗಾವಿ ಎಂದೆಂದಿಗೂ ಕರ್ನಾಟಕದ ಅವಿಭಾಜ್ಯ ಅಂಗ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತು ಎಂಬ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಬೇಡಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಮನವಿ ಮಾಡಿದ್ದಾರೆ. ಕ್ವೀನ್ಸ್ ರಸ್ತೆಯಲ್ಲಿರುವ ಇಂದಿರಾಗಾಂಧಿ ಭವನದಲ್ಲಿ ನಡೆದ ಜಿಲ್ಲಾ …

Read More »

ಬೆಳಗಾವಿ ಡಿಸಿ ಕಚೇರಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಯುವಕ…

ಬೆಳಗಾವಿ-ಬೆಳಗಾವಿ ಡಿಸಿ ಆಫೀಸ್ ನಲ್ಲಿ ಫಿನಾಯಿಲ್ ಕುಡಿದು ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಲಗಮೇಶ್ವರ ಗ್ರಾಮದ ಕುಮಾರ್ ಕೊಪ್ಪದ (23) ಎಂಬಾತನೇ ಆತ್ಮಹತ್ಯೆಗೆ ಯತ್ನಿಸಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾನೆ. ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ ಯುವಕನ ಸ್ಥಿತಿ ಚಿಂತಾಜನಕವಾಗಿದೆ.ಮಾಹಿತಿ ತಿಳಿದು ಕೂಡಲೇ ಬೆಳಗಾವಿ ಮಾರ್ಕೆಟ್ ಪೊಲೀಸರು ಯುವಕನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.ಯುವಕನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ …

Read More »

ಸವದತ್ತಿ ಯಲ್ಲಮ್ಮ ಸುಕ್ಷೇತ್ರ ಅಭಿವೃದ್ಧಿಗೆ ಮಾಸ್ಟರ್ ಫ್ಲ್ಯಾನ್….

ಸ್ವಚ್ಛತೆ, ಸಮರ್ಪಕ ಪಾರ್ಕಿಂಗ್ ವ್ಯವಸ್ಥೆಗೆ ಆದ್ಯತೆ: ಸಚಿವ ರಾಮಲಿಂಗಾರೆಡ್ಡಿ ಬೆಳಗಾವಿ, – ಪ್ರತಿವರ್ಷ ಕೋಟ್ಯಂತರ ಜನರು ಭೇಟಿ ನೀಡುವ ಸವದತ್ತಿ ಯಲ್ಲಮ್ಮ ದೇವಸ್ಥಾನ ಹಾಗೂ ಯಲ್ಲಮ್ಮ ಗುಡ್ಡದ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಫ್ಲ್ಯಾನ್ ರೂಪಿಸಲಾಗುವುದು ಎಂದು ಸಾರಿಗೆ ಹಾಗೂ ಮುಜರಾಯಿ ಇಲಾಖೆಯ ಸಚಿವರಾದ ರಾಮಲಿಂಗಾರೆಡ್ಡಿ ಅವರು ತಿಳಿಸಿದರು. ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಸೋಮವಾರ(ಜ.9) ಭೇಟಿ ನೀಡಿ ದೇವಿ ದರ್ಶನ ಪಡೆದು ಅಧಿಕಾರಿಗಳ ಸಭೆಯನ್ನು ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಉತ್ತರ …

Read More »

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಂದ ಕನ್ನಡಿಗರನ್ನು ಕೆರಳಿಸುವ ಹೇಳಿಕೆ…!!!

ಬೆಳಗಾವಿ – ಲಕ್ಷ್ಮೀ ಹೆಬ್ಬಾಳಕರ್ ಅವರು ಈ ರಾಜ್ಯದ ಮಂತ್ರಿಯಾಗಿ ಕನ್ನಡಿಗರು ಯಾವತ್ತಿಗೂ ಸಹಿಸಲಾರದ,ಉಹಿಸಲಾರದ,ಕ್ಷಮಿಸಲಾರದ ಹೇಳಿಕೆ ನೀಡಿದ್ದಾರೆ.ಮಾತಿನ ಭರದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಈ ರಾಜ್ಯದ ಕನ್ನಡಿಗರನ್ನು ಕೆರಳಿಸಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತು.,ಎಂದುಕಾರದಗಾ ಗ್ರಾಮದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೇಳಿಕೆ ನೀಡುವ ಮೂಲಕ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮರಾಠಿ ಭಾಷಿಕರನ್ನು ಓಲೈಸುವದಕ್ಕಾಗಿ ಕನ್ನಡಿಗರ ಹಿತವನ್ನು ಕನ್ನಡಿಗರ ಸ್ವಾಭಿಮಾನವನ್ನು ಲಕ್ಷ್ಮೀ ಹೆಬ್ಬಾಳಕರ್ ಕೆಣಕಿದ್ದಾರೆ. …

Read More »

ಬೆಳಗಾವಿ ವಿಮಾನ ನಿಲ್ಧಾಣದಲ್ಲಿ ಜೀವಂತ ಗುಂಡು ಪತ್ತೆ…!!

ಬೆಳಗಾವಿ-ಬೆಳಗಾವಿಯ ಸಾಂಭ್ರಾ ವಿಮಾನ ನಿಲ್ಧಾಣದಲ್ಲಿ,ಜೀವಂತ ಗುಂಡು ಸಮೇತ ವಿಮಾನ ಪ್ರಯಾಣಕ್ಕೆ ಅಣಿ ಆಗ್ತಿದ್ದ ಸೇನಾಧಿಕಾರಿ, ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಾಕಿಕೊಂಡಿದ್ದಾನೆ. ಸದ್ಯ ಡೆಹ್ರಾಡೂನ್‌ನಲ್ಲಿ ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸುತ್ತಿರುವ ಈ ಅಧಿಕಾರಿ,ಹೆಚ್ಚಿನ ತರಬೇತಿಗೆ ಬೆಳಗಾವಿಯ ಕಮಾಂಡೋ ಸೆಂಟರ್‌ಗೆ ಬಂದಿದ್ದ‌ತರಬೇತಿ ಮುಗಿಸಿ ಮರಳುವಾಗ ಬ್ಯಾಗ್‌ನಲ್ಲಿ ಜೀವಂತ ಗುಂಡು ಪತ್ತೆಯಾಗಿದೆ. ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಹೈದ್ರಾಬಾದ್‌ಗೆ ಪ್ರಯಾಣ ಬೆಳೆಸುತ್ತಿದ್ದ ಅಧಿಕಾರಿ,ಬೆಳಗಾವಿಯ ಸಾಂಭ್ರಾ ವಿಮಾನ ನಿಲ್ಧಾಣದಲ್ಲಿ ಜೀವಂತ …

Read More »

ಬೆಳಗಾವಿಯಲ್ಲಿ ಫ್ಲೈ ಓವರ್ ಆಗೋದು ಫಿಕ್ಸ್….!!

ಬೆಳಗಾವಿ‌ ಫ್ಲೈಓವರ್ ಯೋಜನೆ: ಅಧಿಕಾರಿಗಳ ಸಮನ್ವಯ  ಸಭೆ ಬೆಳಗಾವಿ, -ನಗರದಲ್ಲಿ ವಾಹನ ಸಂಚಾರ ಮತ್ತಷ್ಟು ಸುಗಮಗೊಳಿಸುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ-48 ರಿಂದ ಕಿತ್ತೂರು ಚೆನ್ನಮ್ಮ ವೃತ್ತದವರೆಗೆ ಒಟ್ಟಾರೆ 4.50 ಕಿ.ಮೀ. ಉದ್ದದ ಫ್ಲೈಓವರ್ ನಿರ್ಮಾಣ ಮಾಡಬೇಕು ಎಂಬ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಬಹುದಿನಗಳ ಕನಸಿನ ಯೋಜನೆಗೆ ಇದೀಗ ಚಾಲನೆ ಲಭಿಸಿದೆ. ಬೆಳಗಾವಿ‌ ನಗರದ ಫ್ಲೈಓವರ್ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರ ಅಧ್ಯಕ್ಷತೆಯಲ್ಲಿ …

Read More »

ಯುವಕ ಯುವತಿ ಕೂಡಿ ಕುಂತಾಗ ನೈತಿಕ ಪೋಲೀಸ್ಗಿರಿ…..!!!

ಬೆಳಗಾವಿ- ಹುಡುಗ ಹುಡುಗಿ ಕೂಡಿ ಕುಂತಾಗ ಅವರಿಬ್ಬರ ಮೇಲೆ ಏಕಾ ಏಕಿ ದಾಳಿ ಮಾಡಿದ ಹದಿನೈದು ಜನ ಯುವಕರ ಗುಂಪು ಅವರನ್ನು ಥಳಿಸಿ ಇಬ್ಬರನ್ನು ಬಲವಂತವಾಗಿ ಮನೆಯೊಂದರಲ್ಲಿ ದಿನವಿಡೀ ಕೂಡಿ ಹಾಕಿದ ಘಟನೆ ಬೆಳಗಾವಿ ಮಹಾನಗರದ ಕೋಟೆ ಕೆರೆಯ ಧ್ವಜದ ಆವರಣದಲ್ಲಿ ನಡೆದಿದೆ. ಬೆಳಗಾವಿಯ ಕೋಟೆ ಕೆರೆ ಕಿನಾರೆ ಈಗ ಪ್ರೇಮಿಗಳ ಅಡ್ಡಾ ಆಗಿದೆ. ಇಲ್ಲಿ ದಿನನಿತ್ಯ ನೂರಾರು ಜನ ಪ್ರೇಮಿಗಳು ಬರ್ತಾರೆ ಹೋಗ್ತಾರೆ. ಹುಡುಗ ಮತ್ತು ಹುಡುಗಿ ಇಬ್ಬರ …

Read More »

ಎಂಇಎಸ್ ,ಪುಂಡರ ಪುಂಡಾಟಿಕೆ ನೋಡಿದ್ರೆ, ಕನ್ಡಡಿಗರ ರಕ್ತ ಕುದಿಯುತ್ತೆ…!!

ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ಮರಾಠಿಯಲ್ಲಿ ಬೋರ್ಡ್ ಹಾಕಿದವರ ಜೊತೆ ವ್ಯವಹಾರ ಮಾಡಬೇಕು,ಕನ್ನಡ ಫಲಕ ಹಾಕುವ ಕನ್ನಡ ಸಂಘಟನೆಗಳ ಹೋರಾಟ ತಡೆಯಬೇಕು‌ ಎಂದು ಆಗ್ರಹಿಸಿ ಎಂಇಎಸ್ ಪುಂಡರು ಬರುವ ಮಂಗಳವಾರ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸುವ ಪುಂಡಾಟಿಕೆಯ ನಿರ್ಧಾರ ಕೈಗೊಂಡಿದ್ದಾರೆ‌. ಎಂಇಎಸ್ ನಾಯಕರ ಪುಂಡಾಟಿಕೆ,ನಾಡ ವಿರೋಧಿ ಮಾತುಗಳನ್ನು ಕೇಳಿದ್ರೆ,ರಾಜ್ಯದಲ್ಲಿ ಕನ್ನಡದ ಸರ್ಕಾರ ಸತ್ತಿದೆಯೋ,? ಜೀವಂತವಾಗಿದೆಯೋ ? ಎನ್ನುವ ಅನುಮಾನ ಕನ್ನಡಿಗರನ್ನು ಕಾಡುತ್ತಿದೆ. ಯಾಕಂದ್ರೆ ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಕನ್ನಡ …

Read More »

ಮದುವೆಗೆ ಬಂದಿದ್ದ…..ಆಭರಣ ಕದ್ದು ಪರಾರಿಯಾಗಿದ್ದ, ಕಾಲಿಮಿರ್ಚಿ ಕೈಗೆ ಸಿಕ್ಕಿಬಿದ್ದ…..!!

ಬೆಳಗಾವಿ-ಮಾಳಮಾರುತಿ ಪೊಲೀಸರು ಕಳ್ಳನನ್ನು ಬಂಧಿಸಿ;3.5 ಲಕ್ಷದ ಆಭರಣ ವಶಕ್ಕೆ ಪಡೆದಿದ್ದಾರೆ. ಮದುವೆಗೆ ಬಂದಿದ್ದ…..ಆಭರಣ ಕದ್ದು ಪರಾರಿಯಾಗಿದ್ದ, cpiಕಾಲಿಮಿರ್ಚಿ ಕೈಗೆ ಸಿಕ್ಕಿಬಿದ್ದ…..! ಕೇವಲ 24 ಗಂಟೆಗಳಲ್ಲಿ ಕಳ್ಳತನ ಪ್ರಕರಣ ಭೇದಿಸುವಲ್ಲಿ ಪೋಲೀಸರು ಯಶಸ್ವಿಯಾಗಿದ್ದಾರೆ.ದಿನಾಂಕ 4-1.2024 ರಂದು ಮಾಳಮಾರುತಿ ಠಾಣಾ ವ್ಯಾಪ್ತಿಯ ವಿದ್ಯಾಧಿರಾಜ ಕಲ್ಯಾಣ ಮಂಟಪದಲ್ಲಿ ಮದುವೆಗೆ ಆಗಮಿಸಿದ .ಪಂಚಾಕ್ಷರಿ ಎಂ ಕೆ ಸಾ. ದಾವಣಗೆರೆ ಇವರ ಹೆಂಡತಿಯ ವೆನಿಟಿ ಬ್ಯಾಗಿನಲ್ಲಿ ಇಟ್ಟಿದ್ದ ಸುಮಾರು 3,51,000 ಮೌಲ್ಯದ ಬಂಗಾರದ ಆಭರಣ ಹಾಗೂ 3500/- …

Read More »