Breaking News
Home / BGAdmin (page 180)

BGAdmin

ಸಾರ್ಟ್ ಸಿಟಿ ಕಾಮಗಾರಿ ನೋಡಿದ್ರು….ನಂತರ ಮಸಾಲೆ ದೋಸೆ ತಿಂದ್ರು…!!!

ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರಿಂದ ಸ್ಮಾರ್ಟ್ ಸಿಟಿ ಕಾಮಗಾರಿ ಪರಿಶೀಲನೆ ——————————————————– “ಡಿಸೆಂಬರ್ ಅಂತ್ಯಕ್ಕೆ ಸ್ಮಾರ್ಟ್ ಸಿಟಿ ಕಾಮಗಾರಿ ಪೂರ್ಣ” ಬೆ ಬೆಳಗಾವಿ-  ಸ್ಮಾರ್ಟ್ ಸಿಟಿ ಯೋಜನೆಯ ವಿವಿಧ ಕಾಮಗಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ಗುರುವಾರ(ಫೆ.24) ಪರಿಶೀಲಿಸಿದರು. ನಗರದ ಸಿ.ಬಿ.ಟಿ. ಕಾಮಗಾರಿ, ವಿವಿಧ ರಸ್ತೆಗಳು, ಇಂಟಿಗ್ರೇಟೆಡ್ ಕಮಾಂಡ್ ಆ್ಯಂಡ್ ಕಂಟ್ರೋಲ್‌ ಸೆಂಟರ್, ಟಿಳಕವಾಡಿಯ ಕಲಾಮಂದಿರ ಮತ್ತಿತರ ಕಾಮಗಾರಿಗಳನ್ನು ಅವರು ವೀಕ್ಷಿಸಿದರು. ಸಿಬಿಟ 2018 ರಲ್ಲಿ …

Read More »

ಬೆಳಗಾವಿ ಸಿಟಿಯಲ್ಲಿ ಡಿಸಿ ಹಿರೇಮಠ ರೌಂಡ್ಸ್……

ರುಕ್ಮಿಣಿ ನಗರಕ್ಕೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಭೇಟಿ,ಗುಡಿಸಲು ನಿವಾಸಿಗಳಿಗೆ ವಸತಿ ಕಲ್ಪಿಸಲು ಸೂಚನೆ ಬೆಳಗಾವಿ, – ರುಕ್ಮಿಣಿ ನಗರದಲ್ಲಿ ಪಾಲಿಕೆಯ ಜಾಗೆಯಲ್ಲಿ ಗುಡಿಸಲುಗಳಲ್ಲಿ ವಾಸಿಸುವ ಕುಟುಂಬಗಳ ಪಟ್ಟಿಯನ್ನು ಸಿದ್ಧಪಡಿಸಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಅವರಿಗೆ ಮನೆ ನಿರ್ಮಿಸಿ ಕೊಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ರುಕ್ಮಿಣಿ ನಗರಕ್ಕೆ ಬುಧವಾರ (ಫೆ.23) ಭೇಟಿ ನೀಡಿ ಪರಿಶೀಲಿಸಿದ ಅವರು, ಸ್ಥಳೀಯ ಜನರ ಅಹವಾಲುಗಳನ್ನು ಆಲಿಸಿದರು. …

Read More »

ಜನಪರ ಕಾಳಜಿ ಇದ್ರೆ ಹಿಂಗ್ ಇರಬೇಕ್ ನೋಡ್ರಿ….!!

ಶಾಸಕ ಅಭಯ ಪಾಟೀಲ ಸಿಎಂ ಬೊಮ್ಮಾಯಿ ಅವರನ್ನು ತುರ್ತಾಗಿ ಭೇಟಿಯಾಗಿದ್ದು ಯಾಕೆ ಗೊತ್ತಾ…?? ಬೆಳಗಾವಿ- ಮಹಾನಗರಗಳಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸುವ ವಸತಿ ಯೋಜನೆಗಳಲ್ಲಿ ಬಡವರಿಗೂ ನಿವೇಶನಗಳನ್ನು ಮೀಸಲಿಡುವ ನಿಯಮ ರೂಪಿಸುವಂತೆ ಶಾಸಕ ಅಭಯ ಪಾಟೀಲ ಅವರು ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ತುರ್ತಾಗಿ ಭೇಟಿ ಮಾಡಿ ಮನವಿ ಅರ್ಪಿಸಿದ್ದಾರೆ. ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ, …

Read More »

ಖಾನಾಪೂರದಲ್ಲಿ ಎಂಈಎಸ್ ವೇಗಕ್ಕೆ ಬ್ರೇಕ್ ಹಾಕಲು, ಲಕ್ಷ್ಮಣ ರೇಖೆ……!!!!!

ಬೆಳಗಾವಿ- ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ ಆದರೂ ಬೆಳಗಾವಿ ಜಿಲ್ಲೆಯಲ್ಲಿ ಚುನಾವಣೆಯ ಪರ್ವ ಆರಂಭವಾಗಿದೆ. ಖಾನಾಪೂರ ಕ್ಷೇತ್ರದ ಮಾಜಿ ಎಂಈಎಸ್ ಶಾಸಕ ಅರವಿಂದ್ ಪಾಟೀಲ ನಾಡವಿರೋಧಿ ಎಂಈಎಸ್ ತೊರೆದು ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದ ಕಾರಣ ಖಾನಾಪೂರ ಕ್ಷೇತ್ರದಲ್ಲಿ ಎಂಈಎಸ್ ಈಗ ಸಂಪೂರ್ಣವಾಗಿ ಕಂಗಾಲಾಗಿದ್ದು ಈ ಕ್ಷೇತ್ರದಲ್ಲಿ ಎಂಈಎಸ್ ಸಂಘಟನೆಯೇ ಸಮಾಧಿಯಾಗಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಅರವಿಂದ ಪಾಟೀಲ ಎಂಈಎಸ್ ನಿಂದ ಸ್ಪರ್ದೆ ಮಾಡಿ ಅಲ್ಪ …

Read More »

ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ದಿಲೀಪ ಕುರುಂದವಾಡೆ ಆಯ್ಕೆ…

ಬೆಳಗಾವಿ- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಳಗಾವಿ ಘಟಕದ ಜಿಲ್ಲಾಧ್ಯಕ್ಷರಾಗಿ ಹಿರಿಯ ಪತ್ರಕರ್ತ ದಿಲೀಪ ಕುರುಂದವಾಡೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಉಳಿದ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು,ಸಂಘಸ ಗೌರವ ಅಧ್ಯಕ್ಷರಾಗಿ ಭೀಮಶಿ ಜಾರಕಿಹೊಳಿ ಅವರು ಆಯ್ಕೆಯಾಗಿದ್ದಾರೆ. ಬೆಳಗಾವಿಯಲ್ಲಿ ಚುನಾವಣೆ ಪ್ರಕ್ರಿಯೆ ನಡೆದಿತ್ತು ಜಿಲ್ಲಾ ಕಾರ್ಯಕಾರಿಣಿ ಸದಸ್ಯರ 15 ಸ್ಥಾನಕ್ಕಾಗಿ 16 ಜನ ನಾಮಪತ್ರ ಸಲ್ಲಿಸಿದ್ದರು ನಾಮಪತ್ರ ವಾಪಸ್ ಪಡೆಯಲು ಇಂದು ಶನಿವಾರ ಮಧ್ಯಾಹ್ನ 1ಗಂಟೆಯವರೆಗೆ ಕೊನೆಯ. ಅವಧಿಯಾಗಿತ್ತು ಇಂದು ಬೆಳಿಗ್ಗೆ …

Read More »

ಆಕಾಶದಲ್ಲಿ ಸಂಚರಿಸುವ ಕಾರು ಬೆಳಗಾವಿಗೂ ಬರತೈತಿ…!!!

ಬೆಳಗಾವಿ- ಶಾಸಕ ಅಭಯ ಪಾಟೀಲ ಪರಿಶ್ರಮದ ಫಲದಿಂದ ಬಜೆಟ್ ನಲ್ಲಿ ಬೆಳಗಾವಿಗೆ ಬಂಪರ್ ಸಿಗುವ ನಿರೀಕ್ಷೆ ಬೆಳಗಾವಿ: ಅಭಿವೃದ್ಧಿ ಕೆಲಸಗಳ ಮೂಲಕ ಮಿಸ್ಟರ್ ಡೆವಲೆಫ್ ಮೆಂಟ್ ಎಂದೇ ಖ್ಯಾತಿ ಪಡೆದಿರುವ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ರಾಜ್ಯ ಬಜೆಟ್ ನಲ್ಲಿ ಕುಂದಾನಗರಿ ಜನತೆಗೆ ಬಂಪರ್ ಕೊಡುಗೆ ಕೊಡಿಸಲು ವೇದಿಕೆ ಸಿದ್ಧಗೊಳಿಸಿದ್ದಾರೆ. ಅವರ ಪರಿಶ್ರಮದ ಫಲವಾಗಿ ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಬೆಳಗಾವಿಗರಿಗೆ ವಿಶೇಷ ಕೊಡುಗೆ ಸಿಗುವ …

Read More »

ಬಾರ್ ಒಳಗೆ, ಬಿಡಲಿಲ್ಲ, ಎಂಎಲ್ಎ ಫೋನ್ ರಿಸೀವ್ ಮಾಡಲಿಲ್ಲ,

ಬೆಳಗಾವಿಯ ಗಾಂಧಿ ನಗರದಲ್ಲಿ ಬ್ಲೇಡ್ ಹಲ್ಲೆಯಿಂದ ಗಾಯಗೊಂಡಿರುವ ಮಹ್ಮದ ಕೈಫ್ ಬಾಗವಾನ್ ಬೆಳಗಾವಿ- ಇತ್ತೀಚಿಗೆ ಕುಡಿದ ಅಮಲಿನಲ್ಲಿ ಶಾಸಕ ಅನೀಲ ಬೆನಕೆ ಅವರ ಕಚೇರಿಯ ಮೇಲೆ ಕಲ್ಲು ತೂರಾಟ ಮಾಡಿ ಕಿಡಕಿ ಗಾಜುಗಳನ್ನು ಧ್ವಂಸ ಮಾಡಿದ್ದ ಆರೋಪಿಯನ್ನು ಮಾರ್ಕೆಟ್ ಠಾಣೆಯ ಪೋಲೀಸರು ಬಂಧಿಸಿದ್ದಾರೆ. ಬೆಳಗಾವಿಯ ಬಾರ್ ವೊಂದಕ್ಕೆ ಹೋಗಿದ್ದ ಸತ್ಯಂ ಜ್ಯೋತೀಬಾ ನಾಯಕ್ ಎಂಬಾತನನ್ನು ಬಾರ್ ಒಳಗೆ ಬಿಟ್ಟಿಲ್ಲ, ಸಿಟ್ಟಿಗೆದ್ದ ಈತ ನೇರವಾಗಿ ಶಾಸಕ ಅನೀಲ ಬೆನಕೆ ಅವರಿಗೆ ಫೋನ್ …

Read More »

ಬೆಳಗಾವಿಗೆ ಎರಡು ಕೋಟಿ ಕೊಡಲು ಸಹಿ ಹಾಕಿದ ಸಿಎಂ ಬೊಮ್ಮಾಯಿ…

ಬೆಳಗಾವಿ-ಬೆಳಗಾವಿಯ ನ್ಯಾಯಾಲಯದ ಆವರಣದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು,ನ್ಯಾಯಾಲಯದ ಕಟ್ಟಡಗಳನ್ನು ನವೀಕರಿಸಲು ಸರ್ಕಾರ ವಿಶೇಷ ಅನುದಾನ ನೀಡುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಶಾಸಕರ ನಿಯೋಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿತು. ಬೆಳಗಾವಿ ಬಾರ್ ಅಸೋಸಿಯೇಷನ್ ಹಾಗೂ ಕೋರ್ಟ್ ಆವರಣದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಹಾಗೂ ಕಟ್ಟಡಗಳನ್ನು ನವೀಕರಿಸಿ ಸುಸಜ್ಜಿತವಾಗಿ ನಿರ್ಮಿಸಲು ರೂ. 02.00 ಕೋಟಿಗಳ ವಿಶೇಷ ಅನುದಾನವನ್ನು ಮಂಜೂರು ಮಾಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಬೆಳಗಾವಿ ಜಿಲ್ಲೆಯ …

Read More »

ಕಿರಣ ಜಾಧವ ಅವರ ತಂದೆ,ಹಿರಿಯ ಪತ್ರಿಕಾ ವಿತರಕ ಮಾರುತಿರಾವ್ ಇನ್ನಿಲ್ಲ…

ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ಹಲವಾರು ದಶಕಗಳ ಕಾಲ ಪತ್ರಿಕಾ ವಿತರಕರಾಗಿ ಕಾರ್ಯನಿರ್ವಹಿಸಿದ ಮಾರುತಿರಾವ್ ಚನ್ನಪ್ಪಾ ಜಾಧವ ಅವರು ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ. ಬೆಳಗಾವಿಯ ಬಿಜೆಪಿ ಮುಖಂಡ ಕಿರಣ ಜಾಧವ ಅವರ ತಂದೆ ಆಗಿರುವ ಮಾರುತಿರಾವ್ ಜಾದವ್ ಅವರು 82 ನೇಯ ವಯಸ್ಸಿನಲ್ಲಿ ಅಗಲಿದ್ದು ಅವರ ಅಂತ್ಯಸಂಸ್ಕಾರ ಇಂದು ಮಧ್ಯಾಹ್ನ 12-00 ಗಂಟೆಗೆ ಸದಾಶಿವ ನಗರದ ಸ್ಮಶಾನದಲ್ಲಿ ನೆರವೇರಲಿದೆ. ಮೃತರಿಗೆ ಬಿಜೆಪಿ ಮುಖಂಡ ಕಿರಣ ಜಾಧವ ಸೇರಿದಂತೆ ಇಬ್ಬರು ಗಂಡು …

Read More »

ಡಿಸಿಗೆ ದೂರು ನೀಡಿದ್ದಕ್ಕೆ ವ್ಯಕ್ತಿಯ ಮೇಲೆ ಹಲ್ಲೆ,ಮನೆಯ ಮೇಲೆ ಕಲ್ಲು ತೂರಾಟ..

ಬೆಳಗಾವಿ-ಗ್ರಾಮದಲ್ಲಿ ನಡೆದ ಬ್ರಷ್ಟಾಚಾರದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಮಾರನೇಯ ದಿನವೇ ದೂರು ನೀಡಿದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ,ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಇಂದು ಬೆಳಿಗ್ಗೆ ಬೆಳಗಾವಿ ಸಮೀಪದ ಬೋಡಕೇನಟ್ಟಿ ಗ್ರಾಮದಲ್ಲಿ ನಡೆದಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ, ಮಾಜಿ ಸದಸ್ಯರು ಮತ್ತು ಬೆಂಬಲಿಗರ ಸೇರಿ ದೂರು ನೀಡಿದ ವ್ಯೆಕ್ತಿಯ ಮೇಲೆ ಗೂಂಡಾಗಿರಿ ಮಾಡಿ,ಆತನಿಗೆ ಮನಬಂದಂತೆ ಥಳಿಸಿದ ಘಟನೆ ಬೆಳಗಾವಿ ತಾಲೂಕಿನ ಬೋಡಕೇನಟ್ಟಿ ಗ್ರಾಮದಲ್ಲಿ ನಡೆದಿದೆ. ನಿನ್ನೆ …

Read More »