ಎಲ್ಲ ಸಮೀಕ್ಷೆಗಳಲ್ಲಿ ಬಿಜೆಪಿ ಗೆಲುವು- ಬಾಲಚಂದ್ರ ಜಾರಕಿಹೊಳಿ

ಬೆಳಗಾವಿಗೆ ಇನ್ನೂ ನಾಲ್ಕು ಸಚಿವ ಸ್ಥಾನ ಸಿಗಲಿದೆ; ಬಾಲಚಂದ್ರ ಜಾರಕಿಹೊಳಿ‌

ಬೆಳಗಾವಿ:
ಉಪಚುನಾವಣೆ ಫಲಿತಾಂಶ ಬಳಿಕ ಬೆಳಗಾವಿ ಜಿಲ್ಲೆಗೆ ಇನ್ನೂ ನಾಲ್ಕು ಸಚಿವ ಸ್ಥಾನ ಸಿಗಲಿವೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌ ವಿಶ್ವಾಸ ವ್ಯಕ್ತಪಡಿಸಿದರು.
ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಜಿಲ್ಲೆಗೆ ಎರಡು ಸಚಿವ ದೊರೆತಿವೆ. ಫಲಿತಾಂಶ ಬಳಿ ಉಮೇಶ ಕತ್ತಿ ಸೇರಿ ಮೂವರು ಅನರ್ಹ ಶಾಸಕರಿಗೂ ಸಚಿವ ಸ್ಥಾನ ಸಿಗಲಿವೆ. ಹೆಚ್ಚಿನ ಸಚಿವ ಸ್ಥಾನ ಸಿಗುವುದು ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿ ಆಗಲಿದೆ ಎಂದರು.
ಗೋಕಾಕ ಕ್ಷೇತ್ರದ ಬಹುತೇಕ ಕಡೆ ಪ್ರಚಾರ‌ ಮಾಡಿದ್ದೇವೆ. ಜಿಲ್ಲೆಯ ಹಿರಿಯ ನಾಯಕರಾದ ಉಮೇಶ ಕತ್ತಿ, ಪ್ರಭಾಕರ ಕೋರೆ, ಸುರೇಶ ಅಂಗಡಿ ಸೇರಿ ಎಲ್ಲರೂ ಟೀಂ ವರ್ಕ್ ಮಾಡ್ತಿದ್ದೇವೆ. ಹೀಗಾಗಿ ಕ್ಷೇತ್ರದಲ್ಲಿ ಬಿಜೆಪಿ ಪರ ಅಲೆ ಇದೆ. ೫೦ ಮತಗಳ ಅಂತರದಿಂದ ಗೆಲುವು ‌ದಾಖಲಿಸಲಿದ್ದಾರೆ. ಗುಪ್ತಚರ ಇಲಾಖೆ ಹಾಗೂ ಖಾಸಗಿ ಸಂಸ್ಥೆಗಳ ವರದಿ ಅನ್ವಯ ಬಿಜೆಪಿಗೆ ಗೆಲುವಾಗಲಿದೆ. ನಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಇದ್ದು, ಈಗಿನ ಟ್ರೆಂಡ್ ಕಾಪಾಡಿಕೊಂಡು ಹೋಗಬೇಕಿದೆ ಎಂದರು.

Check Also

ಮಹಾರಾಷ್ಟ್ರದ ನಾಗಪೂರದಲ್ಲಿ ಬೆಳಗಾವಿ ಗ್ರಾಮೀಣದ ನಾಗೇಶ್…!!

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಮುಖಂಡ,ಈ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ನಾಗೇಶ್ ಮುನ್ನೋಳಕರ ಕಾಲಿಗೆ ಚಕ್ರ ಕಟ್ಟಕೊಂಡು …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.