Breaking News

ಬೆಳಗಾವಿ ಕಾರವಾರ ನಿಪ್ಪಾಣಿಯನ್ನು ಕಾಶ್ಮೀರ ದ P.O.K ಗೆ ಹೋಲಿಸಿದ ಮಹಾ ಸಿಎಂ ಉದ್ಧವ ಠಾಖ್ರೆ

ಬೆಳಗಾವಿ ಕಾರವಾರ ನಿಪ್ಪಾಣಿಯನ್ನು ಕಾಶ್ಮೀರ ದ P.O.K ಗೆ ಹೋಲಿಸಿದ ಮಹಾ ಸಿಎಂ ಉದ್ಧವ ಠಾಖ್ರೆ

ಬೆಳಗಾವಿ ,- ಬೆಳಗಾವಿ ,ಕಾರವಾರ ನಿಪ್ಪಾಣಿಯ ಮರಾಠಿಗರು ಹಲವಾರು ವರ್ಷಗಳಿಂದ ಮಹಾರಾಷ್ಟ್ರಕ್ಕೆ ಸೇರಲು ಪರದಾಡುತ್ತಿದ್ದಾರೆ ಬೆಳಗಾವಿ,ಕಾರವಾರ,ನಿಪ್ಪಾಣಿ ಪ್ರದೇಶ ಕರ್ನಾಟಕ ಆಕ್ರಮಿತ ಮಹಾರಾಷ್ಟ್ರದ ಪ್ರದೇಶವಾಗಿದೆ ಅಲ್ಲಿರುವ ಮರಾಠಿಗರು ಹಿಂದೂಗಳಲ್ಲವೇ ಎಂದು ಮಹಾರಾಷ್ಟ್ರ ಸಿಎಂ ಉದ್ಧವ ಠಾಖ್ರೆ ಪ್ರಶ್ನೆ ಮಾಡಿ ಮತ್ತೆ ಕಾಲು ಕೆದರಿ ಗಡಿ ವಿವಾದವನ್ನು ಕೆಣಕಿದ್ದಾರೆ.

ನಾಗಪೂರದಲ್ಲಿ ನಡೆಯುತ್ತಿರುವ ಮಹಾರಾಷ್ಟ್ರದ ಚಳಿಗಾಲದ ಅಧಿವೇಶನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಮಾತನಾಡುವಾಗ ಗಡಿ ವಿವಾದವನ್ನು ಪ್ರಸ್ತಾಪಿಸಿ ಮಾತನಾಡಿದ ಉದ್ಧವ ಠಾಖ್ರೆ ,ಬೆಳಗಾವಿ ಕಾರವಾರ,ಪಾಕ್ಇಸ್ತಾನದಲ್ಲಿದೆಯೋ,ಅಥವಾ ಬ್ರಹ್ಮದೇಶದಲ್ಲಿದೆಯೋ.?ಅಥವಾ ಭಾರತದಲ್ಲಿದೆಯೋ ? ಎಂದು ಪ್ರಶ್ನೆ ಮಾಡಿರುವ ಉದ್ಧವ ಠಾಖ್ರೆ ಅಲ್ಲಿಯ ಮರಾಠಿಗರು ಹಲವಾರು ವರ್ಷಗಳಿಂದ ಕರ್ನಾಟಕ ಸರ್ಕಾರದಿಂದ ಭಾಷಾ ಅತ್ಯಾಚಾರವನ್ನು ಸಹಿಸುತ್ತಿದ್ದಾರೆ ನ್ಯಾಯ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ ಆದ್ರೆ ಕೇಂದ್ರ ಸರ್ಕಾರ ಬೆಳಗಾವಿ,ಕಾರವಾರ,ನಿಪ್ಪಾಣಿಯ ಮರಾಠಿ ಭಾಷಿಕ ಹಿಂದುಗಳ ಪರವಾಗಿ ನಿಲ್ಲುತ್ತಿಲ್ಲ ಕೇಂದ್ರ ಸರ್ಕಾರ ಗಡಿ ವಿಷಯದಲ್ಲಿ ಕರ್ನಾಟಕದ ಪರವಾಗಿ ನಿಂತಿದೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ ಠಾಖ್ರೆ ಗಂಬೀರ ಆರೋಪ ಮಾಡಿದ್ದಾರೆ .

ಬೆಳಗಾವಿ,ಕಾರವಾರ,ನಿಪ್ಪಾಣಿಯಲ್ಲಿ ಮರಾಠಿ ಭಾಷಿಕರು ಹಿಂದುಗಳು ಅವರಿಗೆ ಕೇಂದ್ರ ಸರ್ಕಾರ ಮೊದಲು ನ್ಯಾಯ ಕೊಡಲಿ ನಂತರ ಬಾಂಗ್ಲಾದೇಶದ ಹಿಂದೂಗಳಿಗೆ ನ್ಯಾಯ ಕೊಡಿ ಎಂದು ಪರೋಕ್ಷವಾಗಿ ಹೇಳಿ,ಪ್ರಧಾನಿ ನರೇಂದ್ರ ಮೋದಿ,ಮತ್ತು ಗೃಹ ಸಚಿವ ಅಮೀತ ಷಾ ಅವರನ್ನು ಉದ್ಧವ ಠಾಖ್ರೆ ಟೀಕಿಸಿದ್ದಾರೆ.

ಬೆಳಗಾವಿ,ಕಾರವಾರ,ನಿಪ್ಪಾಣಿಯಲ್ಲಿರುವ ಕನ್ನಡಿಗರು ಹಿಂದೂ ಅಲ್ಲವೇ ಅವರಿಗೆ ಉದ್ಧವ ಠಾಖ್ರೆ ನ್ಯಾಯ ಕೊಡಿಸುತ್ತಾರಾ ? ಎನ್ನುವ ಪ್ರಶ್ನೆ ಎದುರಾಗಿದ್ದು ಮಹಾರಾಷ್ಟ್ರ ಸಿ ಎಂ ಬೆಳಗಾವಿ ಕಾರವಾರ ಪ್ರದೇಶವನ್ನು ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ ಎಂದು ಕಾಶ್ಮೀರದ P O K ಗೆ ಹೋಲಿಸಿದ್ದು ಭಾರತದ ಒಕ್ಕೂಟದ ವ್ಯೆವಸ್ಥೆಯನ್ನೇ ಉದ್ಧವ ಠಾಖ್ರೆ ಪ್ರಶ್ನೆ ಮಾಡಿ ಹೊಸ ವಿವಾದವನ್ನು ಹುಟ್ಟು ಹಾಕಿದ್ದಾರೆ‌

ಕೋಳಿ ಕಾಲಿಗೆ ಗೆಜ್ಜೆ ಕಟ್ಟಿದರೆ ತಿಪ್ಪೆ ಸವರುವದನ್ನು ಬಿಟ್ಟಿತೇ ? ಎನ್ನುವ ಗಾದೆ ಮಾತಿನಂತೆ ಶಿವಸೇನೆ ಮಹಾರಾಷ್ಟ್ರದಲ್ಲಿ ಅಧಿಕಾರದ ಗದ್ದುಗೆ ಏರಿದರೂ ಗಡಿ ವಿವಾದ ನ್ಯಾಯಾಲಯದಲ್ಲಿದ್ದರೂ ಪದೇ ಪದೇ ಗಡಿ ವಿವಾದವನ್ನು ಪ್ರಸ್ತಾಪಿಸಿ ಭಾರತದ ಒಕ್ಕೂಟದ ವ್ಯೆವಸ್ಥೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿರುವದು ದುರ್ದೈವ

Check Also

ಸದ್ಯಕ್ಕೆ ನಾನು ರೇಸ್ ನಲ್ಲಿ ಇಲ್ಲ, ನಂದೇನಿದ್ರೂ 2028 ರ ತಯಾರಿ…

ಸದ್ಯ ಸಿಎಂ ಸ್ಥಾನದ ರೇಸ್‌ನಲ್ಲಿ ನಾನಿಲ್ಲ, 2028ಕ್ಕೆ ತಯಾರಿ: ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿ: ನಾನು ಸಿಎಂ ಆಗುವ ಸಂಬಂಧ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.