Breaking News

ಬೆಳಗಾವಿಯನ್ನು ಮಾದರಿ ನಗರವನ್ನಾಗಿಸುವದೇ ನನ್ನ ಸಂಕಲ್ಪ-ಶಶಿಧರ ಕುರೇರ

ಬೆಳಗಾವ:ಬೆಳಗಾವಿ ನಗರವನ್ನು ಇಡೀ ದೇಶದಲ್ಲಿ  ರಾಜ್ಯದಲ್ಲಿ   ಮಾದರಿ ನಗರವನ್ನಾಗಿಅಭವೃದ್ಧಿ ಮಾಡುವದೇ ನನ್ನ ಸಂಕಲ್ಪವಾಗಿದೆ  ಅದಕ್ಕೆ ಸ್ವಲ್ಪ ಕಾಲಾವಕಾಶ ಕೊಡಿ ಎಂದು ನೂತನ ಆಯುಕ್ತ ಶಶಿಧರ ಕುರೇರ ಇಂದು ತಿಳಿಸಿದ್ದಾರೆ.

ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ  ಅವರು ಬುಡಾ ಕಚೇರಿಯಲ್ಲಿ ನಾನು ಆಯುಕ್ತನಾಗಿ ಕೆಲಸ ಮಾಡಿದ್ದೇನೆ ಹೀಗಾಗಿ
ನಗರದ ಸಂಪೂರ್ಣ ಚಿತ್ರಣ ನನ್ನ ಮುಂದಿದೆ.  ಹಂತ ಹಂತ ವಾಗಿ ಪಾಲಿಕೆಯಲ್ಲಿರುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಪಾಲಿಕೆಯ ಆಡಳಿತ ಸುಧಾರಣೆಗೆ ಕ್ರಮ ಕೈಗೊಳ್ಳುತ್ತೇನೆ ಎಂದು ಪಾಲಿಕೆ ಆಯುಕ್ತ ಶಶಿಧರ ಕುರೇರ ತಿಳಿಸಿದರು

ನಗರದಲ್ಲಿ ಸ್ವಚ್ಛತೆಯ ಕೆಲಸ ಹೆಚ್ಚಾಗಬೇಕಿದೆ. ಈಗಾಗಲೆ ನಗರ ಪ್ರದಕ್ಷಣೆ ಮಾಡಿ ಲೋಪದೋಶಗಳನ್ನು ಕಂಡು ಹಿಡಿದಿದ್ದೇನೆ ಗುತ್ತಿಗೆಯ ಷರತ್ತಿನ ಪ್ರಕಾರ ಎಲ್ಲ ಪೌರ ಕಾರ್ಮಿಕರು ಕೆಲಸಕ್ಕೆ ಹಾಜರು ಇರುವಂತೆ ಸೂಚಿಸಲಾಗಿದ್ದು ಇದರ ಮೇಲೆ ನಿರಂತರವಾಗಿ ನಿಗಾ ವಹಿಸಲು ನಗರದ ಎಲ್ಲ ವಾರ್ಡಗಳಿಗೆ ನೋಡಲ್ ಅಧಿಕಾರಿಗಳ ನಿಯೋಜನೆ. ಮಾಡಲಾಗಿದೆ ಎಂದರು

ನಗರದ ಒತ್ತುವರಿ ನಾಲಾಗಳ ತೆರವಿನ ಬಗ್ಗೆ ಗಂಭೀರ ನಿರ್ಧಾರ ಮಾಡಲಾಗಿದೆ.  ಈಕುರಿತು ಸಂಬಂದಿಸಿದ ಇಲಾಖೆಗಳ ಸಭೆ ನಡೆಸಿ ನಾಲಾಗಳ ಒತ್ತುವರಿ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿ ವರದಿ ಸಿದ್ಧಪಡಿಸುವಂತೆ ಸೂಚಿಸಲಾಗಿದ್ದು ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವದು ಎಂದು -ಆಲಿಕೆ ಆಯುಕ್ತರು ತಿಳಿಸಿದರು

ಪಾಲಿಕೆಯ ಆಸ್ತಿ ಸಂರಕ್ಷಣೆ ಕುರಿತು ಪ್ರಾಪರರ್ಟಿ ರಜಿಸ್ಟರ್ ಮಾಡಲಾಗುವುದು. ಪಾಲಿಕೆ ಆಸ್ತಿ ಒತ್ತುವರಿ ಆದರೆ ಅವರ ವಿರುದ್ದ ೩೩೬ ಕಲಂ ಅಡಿ ಕ್ರಮಿನಲ್ ಮೊಕದ್ದಮೆ ಹಾಕಲಾಗುವುದು. ನಾಗರಿಕರ ಸೇವೆ, ಕಡತ ವಿಲೇವಾರಿಗೆ ಹೆಚ್ಚು ಆದ್ಯತೆ ಕೊಟ್ಟು ಪಾಲಿಕೆಯನ್ನು ಜನಸ್ನೇಹಿಯನ್ನಾಗಿ ಮಾಡಲಾಗುವುದು ಎಂದರು. ಅನಧಿಕ್ರತ ಹೋರ್ಡಿಂಗ್ಸ್, ಬ್ಯಾನರ್ಸ್ ಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಾಗುವುದು. ಗುತ್ತಿಗೆದಾರರ ಕೆಲಸದ ಪರಿವೀಕ್ಷಣೆ ನಡೆಸಲಾಗುವುದು ಎಂದರು. ಸಾರ್ವಜನಿಕರು ನೇರವಾಗಿ ನನ್ನ ಮೊಬೈಲ್ ಗೆ ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ತಮ್ಮ ಗಮನಕ್ಕೆ ತರಬಹುದು ಎಂದರು

ಬೇಸ್ ಮೇಟ ತೆರವಿಗೆ ತಾವು ಭದ್ಧರಾಗಿದ್ದು ಈ ಕುರಿತು ಕ್ರಮ ಕೈಗೊಳ್ಳಲಾಗುವದು ಎಂದರು ಪಾಲಿಕೆಯ ಾಡಳಿತ ಸುಧಾರಿಸಿ ನಾಗರಿಕರಿಗೆ ಉತ್ತಮ ಸೌಲಭ್ಯಗಳನ್ನು ದೊರಕಿಸಿಕೊಡುವದೇ ತಮ್ಮ ಸಂಕಲ್ಪವಾಗಿದೆ ಎಂದರು

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.