Breaking News
Home / ಬೆಳಗಾವಿ ನಗರ / ಬೆಳಗಾವಿಯಲ್ಲಿ ಮೇಘಾ ಬ್ಲಡ್ ಡೊನೇಶನ್ ಕ್ಯಾಂಪ್‌

ಬೆಳಗಾವಿಯಲ್ಲಿ ಮೇಘಾ ಬ್ಲಡ್ ಡೊನೇಶನ್ ಕ್ಯಾಂಪ್‌

ಬೆಳಗಾವಿ: ಮಹಾತ್ಮಾ ಗಾಂಧೀಜಿ ಜಯಂತಿ ಅಂಗವಾಗಿ ಬ್ರಹತ್ ರಕ್ತದಾನ ಶಿಬಿರ ಅ. ೨ರಂದು ನಗರದಲ್ಲಿ ನಡೆಯಲಿದೆ.
ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ರೋಟರಿ ಕ್ಲಬ್ ಆಫ್ ವೇಣುಗ್ರಾಮ ಬೆಳಗಾಮ್ ಸಂಸ್ಥೆಯ ಅಧ್ಯಕ್ಷ ವಿಕ್ರಮ ಜೈನ್ ಮಾತನಾಡಿ ಅ. ೨ರಂದು ಬೆಳಿಗ್ಗೆ ೯ರಿಂದ ಸಂಜೆ ೪ರವರೆಗೆ ಆಯೋಜಿಸಲಾಗಿದ್ದು, ಅನಾರೋಗ್ಯದ, ಅವಶ್ಯಕತೆ ಹೊಂದಿದ ಜನರಿಗೆ ರಕ್ತದಾನ ಮಾಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ದಾನಿಗಳಿಗೆ ಉಪಹಾರ, ಶಕ್ತಿವರ್ಧಕ ಪಾನೀಯಗಳನ್ನು ನೀಡಲಾಗುವುದು. ಸುಮಾರು ೩೦ರಿಂದ ೫೦ ರಕ್ತದಾನಿಗಳ ಬೆಡ್ ವ್ಯವಸ್ಥೆ ಮಾಡಲಾಗಿದೆ. ಸುಮಾರು ೧ ಸಾವಿರ ಯುನಿಟ್ ರಕ್ತ ಸಂಗ್ರಹದ ಗುರಿ ಇದ್ದು, ಶೇಖರಿಸಿದ ಬ್ಲಡ್‌ ಸರಕಾರಿ ಜಿಲ್ಲಾಸ್ಪತ್ರೆ, ಮತ್ತು ಬೀಮ್ಸ್ ಗೆ ನೀಡಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ನಾಗರಾಜ ಭಟ್, ಡಿ. ಬಿ. ಪಾಟೀಲ, ಚಂದ್ರಕಾಂತ ರಾಜಮಾನೆ ಇನ್ನಿತರರು ಉಪಸ್ಥಿತರಿದ್ದರು.

About BGAdmin

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *