ಬೆಳಗಾವಿ-ಬೆಳಗಾವಿ ಲೋಕಸಭಾ ಮತಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿ ಕಾಂಗ್ರೆಸ್ ಪಕ್ಷದ ಎಲ್ಲ ಸವಲತ್ತುಗಳನ್ನು ಪಡೆದುಕೊಂಡು ರಾಜಕೀಯವಾಗಿ ಬೆಳೆದ ಮಾಜಿ ಸಂಸದ ಎಸ್ ಬಿ ಸಿಧ್ನಾಳ ಅವರ ಪುತ್ರ ಕಾಂಗ್ರೆಸ್ ಪಕ್ಷದ ಯಾವೂದೇ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ ಕಾಂಗ್ರೆಸ್ ಪಕ್ಷದ ಕಚೇರಿಯ ಕಡೆ ಹಾಯದ ಅವರು ಕಾಂಗ್ರೆಸ್ ಪಕ್ಷವನ್ನು ಬಿಡುವ ಪ್ರಶ್ನೇಯೇ ಉದ್ಭವಿಸುವದಿಲ್ಲ ಎಂದು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ವಿನಯ ನಾವಲಗಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ
ಶಶಿಕಾಂತ ಸಿಧ್ನಾಳ ಅವರು ಯಾವಾಗಲೂ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಅಥವಾ ಕಾಂಗ್ರೆಸ್ ಪಕ್ಷದ ಯಾವುದೇ ಹೋರಾಟದಲ್ಲಿ ಭಾಗವಹಿಸಿಲ್ಲ ಅವರು ಕನ್ನಡ ನಾಡು ಪಕ್ಷದಲ್ಲಿರುವದು ಎಲ್ಲಿರಿಗೆ ಗೊತ್ತಿರುವ ಸಂಗತಿಯಾಗಿದೆ ಆದರೆ ಅವರು ಕಾಂಗ್ರೆಸ್‍ದ ಯಾವುದೇ ಚಟುವಟಿಕೆ ಹಾಗು ಸಂಘಟನೆಯಲ್ಲಿ ಭಾಗವಹಿಸದೇ ಕಾಂಗ್ರೆಸ್ ಪಕ್ಷದ ಕುರಿತು ಇಲ್ಲ ಸಲ್ಲದ ಹೇಳಿಕೆ ನೀಡಿರುವದು ಹಾಸ್ಯಾಸ್ಪದದ ಸಂಗತಿಯಾಗಿದೆ ಎಂದು ವಿನಯ ನಾವಲಗಟ್ಟಿ ಲೇವಡಿ ಮಾಡಿದ್ದಾರೆ
ಅವರು ಯಾವುದೇ ಪಕ್ಷ ಸೇರಿಕೊಂಡರೆ ಅದಕ್ಕೆ ನಮ್ಮ ಅಭ್ಯಂತರ ಇಲ್ಲ ಆದರೆ ಕಾಂಗ್ರೆಸ್ ಪಕ್ಷದಲ್ಲಿ ವಾತಾವರಣ ಸರಿ ಇರಲಿಲ್ಲ ಅಲ್ಲಿಯ ಧೋರಣೆ ಖಂಡಿಸಿ ನಾನು ಕಾಂಗ್ರೆಸ್ ಪಕ್ಷ ತ್ಯೇಜಿಸಿದೆ ಎಂದು ಹೇಳಿಕೆ ನೀಡಿದ್ದು ಶಶಿಕಾಂತ ಶಿದ್ನಾಳ ಅವರು ಮೊದಲು ಆತ್ಮಾವಲೋಕನ ಮಾಡಿಕೊಂಡು ನಂತರ ಹೇಳಿಕೆ ನೀಡಲಿ ಕುಟುಂಬ ರಾಜಕಾರಣ ಅವರ ಕುಟುಂಬದಲ್ಲಿಯೇ ಇರಬಹುದು ಕುಟುಂಬ ರಾಜಕಾರಣ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ ಕಾಂಗ್ರೆಸ್ ಪಕ್ಷ ಪಕ್ಷದ ಸಂಘಟನೆಗಾಗಿ ಶ್ರಮಿಸಿದವರನ್ನು ಎಂದಿಗೂ ಕೈ ಬಿಟ್ಟಿಲ್ಲ ಅದಕ್ಕೇ ನಾನೇ ಸಾಕ್ಷಿಯಾಗಿದ್ದೇನೆ ಎಂದು ಜಿಲ್ಲಾ ಕಾಂಗ್ರೆಸ ಅದ್ಯಕ್ಷ ವಿನಯ ನಾವಲಗಟ್ಟಿ ಶಶಿಕಾಂತ ಸಿಧ್ನಾಳ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ
Check Also
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ರಮೇಶ್ ಕತ್ತಿ…
ಬೆಳಗಾವಿ-ಬೆಳಗಾವಿ ಜಿಲ್ಲೆಯ ಪಾಲಿಗೆ ಬ್ರೇಕಿಂಗ್ ಸುದ್ದಿ ಹೊರಬಿದ್ದಿದೆ.ಬೆಳಗಾವಿ ಡಿಸಿಸಿ ಬ್ಯಾಂಕ್ ನಲ್ಲಿ ನಡೆದ ಮಹತ್ತರ ಬೆಳವಣಿಗೆಯಿಂದಾಗಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ …