Breaking News
Home / Breaking News / ಚೆನ್ನಮ್ಮನ ಮೂರ್ತಿಯ ಜೊತೆಗೆ ಅಭಿಮಾನಿಗಳೂ ಪೋಲೀಸರ ವಶಕ್ಕೆ…!!

ಚೆನ್ನಮ್ಮನ ಮೂರ್ತಿಯ ಜೊತೆಗೆ ಅಭಿಮಾನಿಗಳೂ ಪೋಲೀಸರ ವಶಕ್ಕೆ…!!

ಬೆಳಗಾವಿ – ಬೆಳಗಾವಿ ಮಹಾನಗರದ ಪಕ್ಕದಲ್ಲೇ ಇರುವ,ಬೆಳಗಾವಿ ಗ್ರಾಮೀಣ, (ವಡಗಾಂವ) ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕುರುಬರಹಟ್ಟಿ ಗ್ರಾಮದಲ್ಲಿ ಪೋಲೀಸರು ಚನ್ನಮ್ಮನ ಮೂರ್ತಿಯನ್ನು ವಶಕ್ಕೆ ಪಡೆಯುವಾಗ ಪೋಲೀಸರು ಹಾಗೂ ಚನ್ನಮ್ಮನ ಅಭಿಮಾನಿಗಳ ಜೊತೆ ವಾಗ್ವಾದ ನಡೆದಿದೆ.

ಕುರುಬರಹಟ್ಟಿ ಗ್ರಾಮದ ಚನ್ನಮ್ಮನ ಅಭಿಮಾನಿಗಳು ತಾತ್ಕಾಲಿಕವಾಗಿ ಗ್ರಾಮದ ರಸ್ತೆಯ ಪಕ್ಕ ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಮೂರ್ತಿಯನ್ನು ಅನಾವರಣ ಮಾಡಿದ್ದರು.

ಸ್ಥಳಕ್ಕೆ ಧಾವಿಸಿದ ಬೆಳಗಾವಿಯ ವಡಗಾವಿ ಠಾಣೆಯ ಪೋಲೀಸರು ಮೂರ್ತಿಯನ್ನು ವಶಕ್ಕೆ ಪಡೆಯುವಾಗ ಗ್ರಾಮಸ್ಥರು ಚನ್ನಮ್ಮನ ಅಭಿಮಾನಿಗಳು ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಧರ್ಭದಲ್ಲಿ ಪೋಲೀಸರ ಜೊತೆ ಮಾತಿನ ಚಕಮಕಿ ನಡೆದು ವಾಗ್ವಾದ ಆಗಿದೆ.

ಅಲ್ಲಿ ಸೇರಿದ್ದ ಜನಜಂಗುಳಿ ನಿಯಂತ್ರಿಸಲು ಪೋಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.ಕೊನೆಗೂ ಪೋಲೀಸರು ಚನ್ನಮ್ಮನ ಮೂರ್ತಿಯ ಜೊತೆಗೆ ಐದಾರು ಜನ ಯುವಕರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

Check Also

ಇಂದು ಬೆಳಗಾವಿಯಲ್ಲಿ ಬಿಜೆಪಿ ಕೋರ್ ಕಮೀಟಿ ಮೀಟೀಂಗ್…

ಬೆಳಗಾವಿ-ಬೆಳಗಾವಿ ಜಿಲ್ಲೆಯ ಬೆಳಗಾವಿ,ಹಾಗೂ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ತಂತ್ರ ರೂಪಿಸಲು ಇಂದು ಬೆಳಗಾವಿ ನಗರದ ಸಂಕಮ್ …

Leave a Reply

Your email address will not be published. Required fields are marked *