Breaking News

ಬೆಳಗಾವಿಯಲ್ಲಿ,ವಿದ್ಯಾರ್ಥಿನಿಯನ್ನ ಎಳೆದಾಡಿದ್ರಾ ಪೊಲೀಸರು..?

ಬೆಳಗಾವಿ-ಧಾಮಣೆ ಗ್ರಾಮದಲ್ಲಿ ಪೊಲೀಸರಿಂದ ರಾಣಿ ಚೆನ್ನಮ್ಮ ಮೂರ್ತಿ ತೆರವು ವಿಚಾರವಾಗಿ,ತಂದೆಯನ್ನ ಬಿಡಿಸಲು ಹೋಗಿದ್ದ ಕಾಲೇಜು ವಿದ್ಯಾರ್ಥಿನಿಯನ್ನ ಎಳೆದಾಡಿದ್ರಾ ಪೊಲೀಸರು?ಕಾಲೇಜಿನ ಬಂದು ನಿಂತಿದ್ದ ವಿದ್ಯಾರ್ಥಿನಿಯನ್ನ ಥಳಿಸಿದ್ರಾ ಪೊಲೀಸರು ? ಹೌದು, ಈ ರೀತಿಯ ಆರೋಪವನ್ನು ವಿಧ್ಯಾರ್ಥಿನಿ ಮಾಡಿದ್ದಾಳೆ.

ನನ್ನನ್ನು ಮನಬಂದಂತೆ ಪೊಲೀಸರು ಹೊಡೆದಿದ್ದಾರೆ.ಅವಾಚ್ಚ ಶಬ್ದಗಳು ಬಳಸಿ ಹಲ್ಲೆ ಮಾಡಿದ್ದಾರೆ.ಕಾಲೇಜು ಸ್ಟೂಡೆಂಟ್ ಅನೋದನ್ನ ನೋಡದೇ ಹಲ್ಲೆ ಮಾಡಿದ್ದಾರೆ.ನನ್ನ ಭವಿಷ್ಯ ಹಾಳು ಮಾಡ್ತೇನಿ ಅಂತಾ ಪೋಟೋ ಹೊಡೆದುಕೊಂಡಿದ್ದಾರೆ.ಮನೆಯ ಕಟ್ಟೆಯ ಮೇಲೆ ಕುಳಿತಿದ್ದ ಪಾರ್ಶ್ವವಾಯು ತಂದೆಯನ್ನೂ ಪೋಲೀಸ್ರು ಎಳೆದಾಡಿದ್ದಾರೆ.ಎಂದು ವಿಧ್ಯಾರ್ಥಿನಿ ಎಳೆದಾಡಿದ್ದಾರೆ.

ನನ್ನನ್ನು ಪೊಲೀಸ್ ವಾಹನದಲ್ಲಿ ಕೂರಿಸಿದ್ರು,ತಂದೆಯನ್ನು ಬಿಡಿಸಲು ಹೋದ ನನಗೂ ಹೊಡೆದಿದ್ದಾರೆ ಅಂತಾ ಕಾಲೇಜು ವಿದ್ಯಾರ್ಥಿನಿ ರೋಷನಿ ಆರೋಪಿಸಿದ್ದಾಳೆ.

ನನ್ನ ಭವಿಷ್ಯ ಹಾಳು ಮಾಡ್ತಿನಿ ಎಂದು ಪೋಲೀಸ್ರು ಧಮಕಿ ಕೊಟ್ಟಿದ್ದಾರೆ. ನನ್ನ ಭವಿಷ್ಯ ಹಾಳಾದ್ರೂ ಸಹ ಚನ್ನಮ್ಮನ ಮೂರ್ತಿ ಪ್ರತಿಷ್ಠಾಪನೆ ಆಗಲೇಬೇಕು ಎಂದ ವಿದ್ಯಾರ್ಥಿನಿ ಒತ್ತಾಯಿಸಿದ್ದಾಳೆ.
ಜೈ ಚನ್ನಮ್ಮ
ಜೈ ರಾಯಣ್ಣ

Check Also

ಶ್ರೀ ಮಹಾಲಕ್ಷ್ಮೀ ಜಾತ್ರೆ, ಭಂಡಾರ ಇಲ್ಲ….,ಬ್ಯಾನರ್ ಕೂಡಾ ಬ್ಯಾನ್….!!!

ಬೆಳಗಾವಿ: ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಸಿದ್ಧಿ ಪಡೆದಿರುವ ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದ ಶ್ರೀ ಮಹಾಲಕ್ಷ್ಮೀ …

Leave a Reply

Your email address will not be published. Required fields are marked *