Breaking News

ಶಿಗ್ಗಾಂವ್ ಸವಣೂರಿನಲ್ಲಿ ಸಾಹುಕಾರ್ ಕಮಾಲ್…..!!

ಮಾಸ್ಟರ್‌ ಮೈಂಡ್‌ ಸತೀಶ ಜಾರಕಿಹೊಳಿ ಕಮಾಲ್‌ ಗೆ ಶಿಗ್ಗಾವಿ ಕೈ ವಶ

ಬೆಳಗಾವಿ-ಶಿಗ್ಗಾವಿ ವಿಧಾನಸಭೆ ಕ್ಷೇತ್ರದ ಉಫಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯಾಸೀರ್ ಅಹ್ಮದ್ ಖಾನ್ ಪಠಾಣ್ ಅವರನ್ನು ಗೆಲ್ಲಿಸುವಲ್ಲಿ ಮಾಸ್ಟರ್‌ ಮೈಂಡ್‌, ಗೋಕಾಕ ಸಾಹುಕಾರ ಸತೀಶ ಜಾರಕಿಹೊಳಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಹಾಗೆ ನೋಡಿದರೆ ಶಿಗ್ಗಾವಿ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿತ್ತು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ಕ್ಷೇತ್ರದ ಮೇಲೆ ಬಿಗಿ ಹಿಡಿತ ಸಾಧಿಸಿದ್ದರು. ಆದರೆ, ಈ ಕ್ಷೇತ್ರವನ್ನು ಕೇಸರಿ ಪಡೆಯ ಕೋಟೆಯಿಂದ ಕೈ ವಶಮಾಡಿಕೊಳ್ಳುವಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಯಶಸ್ವಿಯಾಗಿದ್ದಾರೆ.

ಕಾಂಗ್ರೆಸ್‌ ಹೈಕಮಾಂಡ್‌ ಸತೀಶ ಜಾರಕಿಹೊಳಿ ಅವರನ್ನು ಶಿಗ್ಗಾವಿ ಕ್ಷೇತ್ರದ ಉಸ್ತುವಾರಿಯನ್ನಾಗಿ ನೇಮಿಸಿದ್ದೇ ತಡ ಕ್ಷೇತ್ರದಲ್ಲಿ ಹಗಲು ರಾತ್ರಿ ಎನ್ನದೇ ಕಾಂಗ್ರೆಸ್‌ ಕಾರ್ಯಕರ್ತರ ಪಡೆಯೊಂದಿಗೆ ಸೈಲಂಟ್‌ ಆಗಿಯೇ ಪ್ರಚಾರ ಕಾರ್ಯ ಕೈಗೊಂಡಿದ್ದರು. ಇಲ್ಲಿ ಬಿಜೆಪಿಯೇ ಗೆಲ್ಲುತ್ತದೆ ಎಂಬ ನಿರೀಕ್ಷೆ ಇತ್ತು. ಈ ನಿರೀಕ್ಷೆಯನ್ನು ಬುಡಮೇಲು ಮಾಡುವಲ್ಲಿ ಸತೀಶ ಜಾರಕಿಹೊಳಿ ಅವರ ರಾಜಕೀಯ ತಂತ್ರಗಾರಿಕೆ ಇಲ್ಲಿ ಕೆಲಸ ಮಾಡಿದೆ.

ಇಲ್ಲಿ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಯಾಸೀರ್‌ ಅಹ್ಮದ ಖಾನ್‌ ಪಠಾಣ್‌ ಅವರನ್ನು ಕಾಂಗ್ರೆಸ್‌ ಅಧಿಕೃತ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಯಿತು. ಬಿಜೆಪಿ- ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಯಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ ಬೊಮ್ಮಾಯಿ ಕಣಕ್ಕಿಳಿದಿದ್ದರು. ಇದು ಹಿಂದೂ- ಮುಸ್ಲಿಂ ವಿಚಾರದ ಮೇಲೂ ಚುನಾವಣೆ ಎದುರಿಸುವಂತಾಗಿತ್ತು. ಈ ಎಲ್ಲ ಸವಾಲುಗಳನ್ನು ಗೋಕಾಕದ ಚುನಾವಣಾ ಚಾಣಿಕ್ಯ, ಸಚಿವ ಸತೀಶ ಜಾರಕಿಹೊಳಿ ಅವರು ಸಮರ್ಥವಾಗಿ ಎದುರಿಸಿ, ರಾಜಕೀಯ ವಿಶ್ಲೇಷಕರ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದ್ದಾರೆ.

ಇಲ್ಲಿ ಪ್ರಮುಖವಾಗಿ ಅಹಿಂದ ವರ್ಗದ ಮತಗಳನ್ನೇ ಒಂದೆಡೆಗೆ ಗಟ್ಟಿಯಾಗಿ ಸೆರೆಹಿಡಿಯುವಲ್ಲಿ ಕಾಂಗ್ರೆಸ್‌ ನಾಯಕರು ಯಶಸ್ವಿಯಾಗಿದ್ದಾರೆ. ಇದರಲ್ಲಿ ಸತೀಶ ಜಾರಕಿಹೊಳಿ ಅವರ ಪಾತ್ರ ಪ್ರಮುಖವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಗೆಲ್ಲಿಸುವಲ್ಲಿ ಸತೀಶ ಜಾರಕಿಹೊಳಿ ಯಶಸ್ವಿಯಾಗಿದ್ದರು. ಈಗ ಶಿಗ್ಗಾವಿ ಉಪಚುನಾವಣೆಯಲ್ಲಿಯೂ ಪಕ್ಷದ ಹೈಕಮಾಂಡ್‌ ತಮಗೆ ನೀಡಿದ ಉಸ್ತುವಾರಿ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಮತ್ತೊಮ್ಮೆ ತಮ್ಮ ನಾಯಕತ್ವವನ್ನು ಪ್ರದರ್ಶಿಸಿದ್ದಾರೆ.

ಸತೀಶ್ ಜಾರಕಿಹೊಳಿ  ಅವರನ್ನು  ರಾಜ್ಯದ ಜನ  ಮಾಸ್ಟರ್ ಮೈಂಡ್ ಚಾಣಕ್ಯ ಎಂದು ಕರೆಯುತ್ತಾರೆ. ಅವರಲ್ಲಿ ಇರುವ ತಾಳ್ಮೆ ಅವರನ್ನು ಗೆಲ್ಲಿಸುತ್ತಲೇ ಇದೆ. ಶಿಗ್ಗಾಂವ್ ಕ್ಷೇತ್ರದಲ್ಲಿ  ಎರಡು ವಾರಕ್ಕೂ ಹೆಚ್ಚು ಕಾಲ ವಾಸ್ತವ್ಯ ಮಾಡಿ ನೂರಕ್ಕೂ ಹೆಚ್ವು ಗ್ರಾಮಗಳನ್ನು ಸುತ್ತಾಡಿ  ಬೊಮ್ಮಾಯಿ ಭದ್ರಕೋಟೆಯನ್ನು ಭೇದಿಸಿ  ಕಾಂಗ್ರೆಸ್  ಪತಾಕೆಯನ್ನು ಹಾರಿಸಿದ್ದಾರೆ.

Check Also

ವಿಧಾನಸಭೆಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟದ ಪ್ರತಿಧ್ವನಿ

ಬೆಳಗಾವಿ – ವಿಧಾನಸಭೆಯಲ್ಲಿ ಮೊದಲ ದಿನವೇ ಪಂಚಮಸಾಲಿ ಮೀಸಲಾತಿ ಹೋರಾಟ ಪ್ರತಿಧ್ವನಿಸಿತುವಿಧಾನಸಭೆಯಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ ಬಳಿಕ ಸಭಾದ್ಯಕ್ಷರು …

Leave a Reply

Your email address will not be published. Required fields are marked *