Breaking News

ಲವ್ ಮಾಡಿದವನೇ ಲವರ್ ಕೊಲೆ ಮಾಡಿ ಸೂಟಕೇಸ್ ನಲ್ಲಿ ಹಾಕಿ ಬೀಸಿದ..

ಬೆಳಗಾವಿ-

ಪ್ರೀತಿಸಿ ನಾಟಕವಾಡಿ ಸ್ನೇಹಿತರಿಂದಲೇ ಅತ್ಯಾಚಾರ ವೆಸಗಿ ಯುವತಿಯ ಕೊಲೆ ಮಾಡಿದ ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಮುಂಬೈನ ಅಂಬರನಾಥದಲ್ಲಿ ಕೊಲೆ ಮಾಡಿ ಬ್ಯಾಗ್ ನಲ್ಲಿ ತಂದ ಕೊಲೆಗಡುಕರು ಬೆಳಗಾವಿಯ ಹೊರ ವಲಯದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಷ್ಟ್ರೀಯ ಹೆದ್ದಾರಿ ಪಕ್ಕ ಮೊರಿಯಲ್ಲಿ ಬಿಸಾಕಿದ ಹೋಗಿದ್ದಾರೆ. ನಾಗಪುರ ಮೂಲದ ಅಂಕಿತಾ ಸುನಿಲ್ ಕನೋಜಿಯಾ.(೨೨) ಕೊಲೆಯಾದ ಯುವತಿ ಎಂದು ತಿಳಿದು ಬಂದಿದೆ. ಆದರೆ ಆರೋಪಿಗಳ ಹೆಸರು ಇನ್ನೂ ತಿಳಿದು ಬಂದಿಲ್ಲ.
ಮುಂಬಯಿನ ಅಂಬರನಾಥ ನಲ್ಲಿ ಕಾಲ್ ಸೇಂಟರ್ ನಲ್ಲಿ ಇಂಜಿನಿಯರಾಗಿ ಕೆಲಸ ಮಾಡುತ್ತಿದ್ದಳು. ಆಕೆಯ ಪರಿಚಯ ಇರುವ ಸ್ನೇಹಿತರಿಂದಲೇ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕೊಲೆಗಡುಕರು ಅತ್ಯಾಚಾರ ವೆಸಗಿ ಕೊಲೆಮಾಡಿ ಬಾಡಿಗೆ ಕಾರಿನಲ್ಲಿ ತಂದು ಬಿಸಾಕಿದ್ದಾರೆ. ಇದಕ್ಕೂ ಮುನ್ನ ರೇಪ್ ಮಾಡಿ ರತ್ನಾಗಿರಿಯ ಲಾಡ್ಜೊಂದರಲ್ಲಿ ಕೊಲೆ ಮಾಡಿ ಹೊಸ ಬ್ಯಾಗ್ ಖರಿದಿ ಮಾಡಿಕೊಂಡು ಅದರಲ್ಲಿ ಹಾಕಿದ್ದಾರೆ. ಇನ್ನು
ಬಾಡಿಗೆ ಕಾರಿನ ಚಾಲಕನಿಕೆ ಗೋವಾ ಪ್ರವಾಸಕ್ಕೆ ಹೊಗುತ್ತಿದ್ದೆವೆ ಬರ್ತಿಯಾ ಎಂದು ಸುಳ್ಳು ಹೇಳಿ ಬಾಡಿಗೆ ಕಾರು ಮಾಡಿಕೊಂಡು ಬಂದಿದ್ದಾರೆ. ನಂತರ ಕಾರ ಚಾಲಕಿನೆ ನಿದ್ದೆ ಬಂದಾಗ ಕಾರ ಸೈಡಗೆ ಹಾಕಿ ಬೆಳಗಾವಿ ರಾಣಿ ಚನ್ನಮ್ಮ ವಿವಿ ಬಳಿ ರಾಷ್ಟೀಯ ಹೆದ್ದಾರಿ ಪಕ್ಕದಲ್ಲಿ ಮೊರಿಯಲ್ಲಿ ಎಸೆದು ಹೋಗಿದ್ದಾರೆ. ನಂತರ
ಕಾರ್ ಚಾಲಕ ಅನುಮಾನಗೊಂಡು ಎರಡು ಬ್ಯಾಗ್ ಇದ್ದುವಲ್ಲಾ ಎಲ್ಲಿ ಇನ್ನೊಂದು ಬ್ಯಾಗ್ ಅಂತ ಕೇಳಿದಾಗ ಕುಡಿದ ಅಮಲಿನಲ್ಲಿ ಯುವತಿಯಯನ್ನು ಕೊಲೆ ಮಾಡಲಾಗಿತ್ತು ಆಕೆಯ ಶವ ಬ್ಯಾಗಲ್ಲಿ ಹಾಕಿ ಎಸಯಲಾಗಿದೆ ಎಂದು ಹೇಳಿದ್ದಾರೆ. ಅವಾಗ ಕಾರ ಚಾಲಕನಿಗೆ ಕೊಲೆ ಕೃತ್ಯ ತಿಳಿದ ಚಾಲಕ. ಈ ಕುರಿತು ಚಾಲಕ ಇಬ್ಬರು ಮಾಡಿರುವ ಕೊಲೆಯ ಬಗ್ಗೆ ರತ್ನಾಗಿರಿ ಪೊಲಿಸರಿಗೆ ಮಾಹಿತಿ ನೀಡಿದ್ದಾನೆ .
ಬಾಡಿಗೆ ಕಾರ ಚಾಲಕನ ಮಾಹಿತಿ ಪಡೆದು ಇಬ್ಬರು ಕೊಲೆಗಡುಕರನ್ನ ಅರೆಷ್ಟ್ ಮಾಡಿ ಇಬ್ಬರು ಹಂತಕರನ್ನ ರತ್ನಾಗಿರಿ ಪೊಲೀಸರು ಬೆಳಗಾವಿಯ ಘಟನಾ ಸ್ಥಳಕ್ಕೆ ವಿಚಾರಣೆಗೆ ಕರೆದುಕೊಂಡು ಬರುತ್ತಿದ್ದಾರೆ. ಇನ್ನು ಯುವತಿ ಕೊಲೆ ವಿಷಯ ಆಕೆಯ ತಂದೆ ಸುನಿಲ್ ಗೆ ತಿಳಿಸಿದ್ದಾರೆ.ಯುವತಿಯ ತಂದೆ ನಾಗಪುರ ಪೊಲಿಸ್ ಠಾಣೆಯಲ್ಲಿ ಎಸ್ ಐ ಆಗಿ ಸೇವೆ ಸಲ್ಲಿಸುತ್ತಿದ್ದು ಮಗಳ ಕಳೆದುಕೊಂಡು ಸಂಕಷ್ಟಕ್ಕೆ ಸಿಲಿಕಿದ್ದಾನೆ. ಬೆಳಗಾವಿ ಕಾಕತಿ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಮಹಾರಾಷ್ಟ್ರದ ಪೊಲೀಸರಿಗೆ ಸಹಾಯ ಮಾಡುತ್ತಿದ್ದು ಮಹಾರಾಷ್ಟದಿಂದ ಕೋಲೆ ಆರೋಪಿಗಳನ್ನು ಬೆಳಗಾವಿಗೆ ತರುತ್ತಿದ್ದು ಆರೋಪಿಗಳು ಇಲ್ಲಿಗೆ ಬಂದಾಗ ಶವ ಹೊರಗೆ ತಗೆಯಲು ಪೊಲೀಸರು ತಿರ್ಮಾನ ಮಾಡಿದ್ದಾರೆ.

Check Also

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆರೋಗ್ಯ ವಿಚಾರಿಸಿದ ಪ್ರೀಯಾಂಕಾ ಗಾಂಧಿ

ಬೆಳಗಾವಿ- ಇಂದು ಬೆಳಗ್ಗೆ ದೆಹಲಿಯಿಂದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ವಿಶೇಷ ವಿಮಾನ ಮೂಲಕ ಆಗಮಿಸಿದ ಪ್ರೀಯಾಂಕಾ ಗಾಂಧಿ ಅವರನ್ನು …

Leave a Reply

Your email address will not be published. Required fields are marked *