ಸರಾಯಿ ಲೋಡೆಡ್ ಚೋರ್ ಕ್ಯಾಂಟರ್ ಅಬಕಾರಿ ಬಲೆಗೆ….

ಬೆಳಗಾವಿ- ಬೆಳಗಾವಿ ಲೋಕಸಭೆ ಉಪಚುನಾವಣೆ ರಂಗೇರುವ ಮುನ್ನವೇ  ಮದ್ಯದ ಘಾಟು ಬೆಳಗಾವಿಯಲ್ಲಿ ಜೋರಾಗಿದೆ ಗೋವಾ ಬಾರ್ಡರ್ ನಲ್ಲಿ ಮದ್ಯ ತುಂಬಿದ ಕ್ಯಾಂಟರ್ ಬೆಳಗಾವಿಯ ಅಬಕಾರಿ ಬಲೆಗೆ ಬಿದ್ದಿದೆ.

ಕ್ಯಾಂಟರ್ ಮೊಡಿಫೈ ಮಾಡಿ ಅಕ್ರಮ ಮದ್ಯ ಸಾಗಿಸುತ್ತಿದ್ದ ಆರೋಪಿ ಅರೆಸ್ಟ್ ಮಾಡಲಾಗಿದ್ದು, ಬೆಳಗಾವಿ ತಾಲೂಕಿನ ಬಾಕನೂರು ಗ್ರಾಮದ ಬಳಿ ಅಬಕಾರಿ ಪೊಲೀಸರ ದಾಳಿ ಮಾಡಿ ಅಡ್ಡ ದಾರಿಯಿಂದ ಮಹಾರಾಷ್ಟ್ರಕ್ಕೆ ಮದ್ಯ ಸಾಗಿಸುತ್ತಿದ್ದ ಕ್ಯಾಂಟರ್ ವಶಪಡಿಸಿಕೊಳ್ಳಲಾಗಿದೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಅಬಕಾರಿ ಪೊಲೀಸರು,ಕ್ಯಾಂಟರ್ ಒಳಗೆ ಪಾರ್ಟಿಷನ್ ಮಾಡಿ ಅದರೊಳಗೆ ಮದ್ಯದ ಬಾಕ್ಸ್ ಇಟ್ಟು ಸಾಗಾಟ ಮಾಡುತ್ತಿರುವ ಚಾಲಾಕಿ ಜಾಲವನ್ನು ಪತ್ತೆ ಮಾಡಿದ್ದಾರೆ.220 ಬಾಕ್ಸ್ ಅಕ್ರಮ ಗೋವಾ ಮದ್ಯ ಜಪ್ತಿ ಮಾಡಿದ ಅಬಕಾರಿ ಪೊಲೀಸರು ಕ್ಯಾಂಟರ್ ಚಾಲಕನನ್ನು ಅರೆಸ್ಟ್ ಮಾಡಿದ್ದಾರೆ.

ಅಬಕಾರಿ ಅಪರ ಆಯುಕ್ತ ಡಾ.ವೈ.ಮಂಜುನಾಥ ಮಾರ್ಗದರ್ಶನದಲ್ಲಿ ದಾಳಿ ಮಾಡಲಾಗಿದ್ದು, ಅಬಕಾರಿ ಇನ್ಸ್‌ಪೆಕ್ಟರ್‌ ಮಂಜುನಾಥ ಮೆಳ್ಳಿಗೇರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು,ಉತ್ತರ ಪ್ರದೇಶ ಮೂಲದ ಚಾಲಕ ಮಹ್ಮದ್ ಷರೀಫ್ ಬಂಧಿಸಲಾಗಿದೆ. ಒಟ್ಟು 4 ಲಕ್ಷ ಮೌಲ್ಯದ 1980 ಲೀಟರ್ ಮದ್ಯ ಜಪ್ತಿ ಮಾಡಲಾಗಿದೆ.

ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಉಪ ಚುನಾವಣೆಯ ನೀತಿ ಸಂಹಿತೆ ಜಾರಿ ಆಗುತ್ತಿದ್ದಂತೆಯೇ ಅಬಕಾರಿ ಅಧಿಕಾರಿಗಳು ಆಕ್ರಮ ಮದ್ಯ ಸಾಗಾಟದ ಜಾಲವನ್ನು ಪತ್ತೆ ಮಾಡಿ,ಆರಂಭದಲ್ಲಿಯೇ ಭರ್ಜರಿ ಬೇಟೆಯಾಡಿದ್ದಾರೆ.

ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಉಪ ಚುನಾವಣೆಯ ನೀತಿ ಸಂಹಿತೆ ಜಾರಿ ಆಗುತ್ತಿದ್ದಂತೆಯೇ ಅಬಕಾರಿ ಅಧಿಕಾರಿಗಳು ಆಕ್ರಮ ಮದ್ಯ ಸಾಗಾಟದ ಜಾಲವನ್ನು ಪತ್ತೆ ಮಾಡಿ,ಆರಂಭದಲ್ಲಿಯೇ ಭರ್ಜರಿ ಬೇಟೆಯಾಡಿದ್ದಾರೆ.

Check Also

ಉತ್ತರಾಖಂಡದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಜಸ್ಟ್ ಮಿಸ್….!!!

ಬೆಳಗಾವಿ- ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಪತ್ನಿ ಸಮೇತ ಡೆಹ್ರಾಡೂನ್ ಗೆ ಹೋಗಿದ್ರು, ಅಲ್ಲಿ ಮೀಟೀಂಗ್ ಮುಗಿಸಿ ಒಟ್ಟು ಎಂಟು …

Leave a Reply

Your email address will not be published. Required fields are marked *