Breaking News
Home / Breaking News / ನಾಳೆ ನಾಡಿದ್ದು,ಬೆಳಗಾವಿಯಲ್ಲಿ ಶರದ್ (ಪ)ವಾರ್…..!!!!

ನಾಳೆ ನಾಡಿದ್ದು,ಬೆಳಗಾವಿಯಲ್ಲಿ ಶರದ್ (ಪ)ವಾರ್…..!!!!

ನಾಳೆ ನಾಡಿದ್ದು,ಬೆಳಗಾವಿಯಲ್ಲಿ ಶರದ್ (ಪ)ವಾರ್…..!!!!

ಬೆಳಗಾವಿ- ರಾಷ್ಟ್ರೀಯ ನಾಯಕ,ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ನಾಳೆ ಮಂಗಳವಾರ,ಮತ್ತು ಬುಧವಾರ,ಎರಡು ದಿನ ಬೆಳಗಾವಿ ನಗರ ಮತ್ತು ಜಿಲ್ಲೆಯಲ್ಲಿ ನಡೆಯಲಿರುವ ಮಹತ್ವದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ನಾಳೆ ಮಂಗಳವಾರ,ಚಿಕ್ಕೋಡಿಯ ಅಂಕಲಿಯಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಪ್ರತಿಮೆ ಅನಾವರಣ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವರು ಬುಧವಾರ, ಬೆಳಗಾವಿಯ ಮರಾಠಾ ಬ್ಯಾಂಕ್,ಮತ್ತು ದಕ್ಷಿಣ ಮಹಾರಾಷ್ಟ್ರ ಶಿಕ್ಷಣ ಸಮೀತಿ ಜ್ಯೋತಿ ಕಾಲೇಜಿನ ಕಾರ್ಯಕ್ರಮದಲ್ಲಿ ಶರದ್ ಪವಾರ್ ಭಾಗವಹಿಸಲಿದ್ದಾರೆ.

ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರ ಜೊತೆ ಕಳೆದ ಮೂವತ್ತು ವರ್ಷಗಳಿಂದ ಉತ್ತಮ ಬಾಂಧವ್ಯ ಹೊಂದಿರುವ ಶರದ್ ಪವಾರ್, ಆಗಾಗ ಪ್ರಭಾಕರ ಕೋರೆ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ.

ಇತ್ತೀಚಿಗೆ ಶರದ್ ಪವಾರ ಅವರು ಬೆಳಗಾವಿ ಗಡಿ ವಿಚಾರದ ಬಗ್ಗೆ ಎಲ್ಲಿಯೂ ಪ್ರತಿಕ್ರಿಯೆ ನೀಡಿಲ್ಲ, ನಾಳೆ ಅಂಕಲಿಯಲ್ಲೂ ಅವರು ಗಡಿ ವಿಚಾರವನ್ನು ಪ್ರಸ್ತಾಪಿಸುವ ಸಾದ್ಯತೆ ಇಲ್ಲ,ಆದ್ರೆ ಬುಧವಾರ ಬೆಳಗಾವಿ ಮಹಾನಗರದ ಮರಾಠಾ ಬ್ಯಾಂಕ್ ಮತ್ತು ಜ್ಯೋತಿ ಕಾಲೇಜಿನ ಕಾರ್ಯಕ್ರಮಗಳಲ್ಲಿ ಶರದ್ ಪವಾರ್ ಗಡಿ,ವಿವಾದದ ಬಗ್ಗೆ ಮಾತನಾಡಬಹುದು,ಈ ವಿಚಾರವನ್ನು ಪ್ರಸ್ತಾಪ ಮಾಡಬಹುದು ಎನ್ನುವ ಲೆಕ್ಕಾಚಾರವಿದೆ.

ಶರದ್ ಪವಾರ್ ಅವರು ಬೆಳಗಾವಿಯ ಎಂಈಎಸ್ ನಾಯಕರನ್ನು ಭೇಟಿ ಮಾಡುವ ಕಾರ್ಯಕ್ರಮ ನಿಗದಿ ಆಗಿಲ್ಲ.ಆದ್ರೆ ಖಂಡಿತವಾಗಿಯೂ ಬೆಳಗಾವಿಯ ಎಂಈಎಸ್ ನಾಯಕರು ಶರದ್ ಪವಾರ ಅವರನ್ನು ಭೇಟಿಯಾಗಿ ಅಳಲು ತೋಡಿಕೊಳ್ಳುವದರಲ್ಲಿ ಸಂಶಯವೇ ಇಲ್ಲ.ಒಟ್ಟಾರೆ ನಾಳೆ ನಾಡಿದ್ದು ಶರದ್ ಪವಾರ್ ಬೆಳಗಾವಿ ಜಿಲ್ಲೆಯಲ್ಲಿ ಎಲ್ಲರ ಗಮನ ಸೆಳೆಯಲಿದ್ದಾರೆ.

Check Also

ಬಾಸ್ ಬಂದು ಹೋದ ಮೇಲೆ ಅಜ್ಜಿಯ ಮನೆಗೆ ಬಂತು ಗ್ಯಾಸ್…!!

ಬೆಳಗಾವಿ: ತಾಲ್ಲೂಕಿನ ಹಿಂಡಲಗಾದಲ್ಲಿ ಅಜ್ಜಿ ಬಾಯವ್ವ ಅವರಿಗೆ ಆಹಾರ, ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಗುರುವಾರ ಸಿಲಿಂಡರ್‌, ಗ್ಯಾಸ್‌ ನೀಡಿದ್ದಾರೆ. …

Leave a Reply

Your email address will not be published. Required fields are marked *